ನವದೆಹಲಿ: ಭಾರತದಲ್ಲಿ ವಿವಾಹವಾದ ಎನ್‌ಆರ್‌ಐ ದಂಪತಿಗಳು ವಿವಾಹವಾದ 48 ಗಂಟೆಗಳ ಒಳಗಾಗಿ ವಿವಾಹ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮನೇಕಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ದೇಶದಲ್ಲಿ ವಿವಾಹವಾಗುವ ಅನಿವಾಸಿ ಭಾರತೀಯರು ವಿವಾಹವಾದ 48 ಗಂಟೆಗಳ ಒಳಗಾಗಿ ನೋಂದಣಿ ಮಾಡಿಸಬೇಕು. ಇಲ್ಲದೇ ಹೋದಲ್ಲಿ ಅವರುಗಳ ಪಾಸ್‌ಪೋರ್ಟ್ ಹಾಗೂ ವೀಸಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ವಿವಾಹವಾದ ಎನ್‌ಆರ್‌ಐಗಳಲ್ಲಿ ತಮ್ಮ ಪತ್ನಿಗಳನ್ನು ದೇಶದಲ್ಲಿಯೇ ತೊರೆದು ಹೋಗುತ್ತಿರುವ ಪ್ರಕರಣಗಳ ಕುರಿತಾಗಿ ದೂರುಗಳು ಕೇಂದ್ರಕ್ಕೆ ಬರುತ್ತಿವೆ. ಈವರೆಗೂ ಈ ರೀತಿ ತೊರೆದ ವ್ಯಕ್ತಿಗಳ ವಿರುದ್ಧ ಸುಮಾರು ಆರು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ.
Discussion about this post