ವಾಷಿಂಗ್ಟನ್: ತಾಂತ್ರಿಕ ದೋಷದಿಂದಾಗಿ ಫೇಸ್ ಬುಕ್‌ನಲ್ಲಿರುವ ಸುಮಾರು 14 ಮಿಲಿಯನ್ ಖಾತೆದಾರರ ವೈಯಕ್ತಿಕ ಮಾಹಿತಿ ಸೋರಿಕೆಗೊಂಡು, ಬಹಿರಂಗವಾಗಿದೆ ಎಂದು ವರದಿಯಾಗಿದೆ.
ಕಳೆದ ಮೇ 18 ರಿಂದ 27ರವರೆಗಿನ ಅವಧಿಯಲ್ಲಿ ಈ ದೋಷ ಕಾಣಿಸಿಕೊಂಡಿದ್ದು, ಪ್ರೈವೇಸಿ ಸೆಟ್ಟಿಂಗ್ ಖಾತೆದಾರರ ಗಮನಕ್ಕೆ ಬಾರದೇ ಬದಲಾವಣೆಯಾಗಿದೆ ಎಂಬುದು ಈಗ ಬೆಳಕಿಗೆ ಬಂದಿದೆ.
ಈಗ ಕಂಪೆನಿ ಪ್ರತಿಕ್ರಿಯೆ ನೀಡಿದ್ದು, ಸಮಸ್ಯೆಯನ್ನು ಪರಿಹಾರ ಮಾಡಲಾಗಿದೆ. 14 ಮಿಲಿಯನ್ ಖಾತೆದಾರರಿಗೂ ವೈಯಕ್ತಿಕ ಸಂದೇಶ ರವಾನಿಸಲಾಗಿದ್ದು, ಆದ ಸಮಸ್ಯೆಗೆ ಕ್ಷಮೆ ಕೇಳುತ್ತೇವೆ ಎಂದಿದೆ.
















