ವಿಧಾನಸಭಾ ಚುನಾವಣೆ, ಪರಿಷತ್ ಚುನಾವಣೆಗಳು ಮುಕ್ತಾಯವಾದ ಬೆನ್ನಲ್ಲೇ, ಬಿ.ಎಸ್. ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಯಾರಿಗೆ ಬಿಜೆಪಿ ಟಿಕೇಟ್ ದೊರೆಯುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ.
ಜಿಲ್ಲಾ ಬಿಜೆಪಿಯಲ್ಲಿ ಈಗಾಗಲೇ ಸಾಕಷ್ಟು ಹಿರಿಯರಿಗೆ ಬಹುತೇಕ ಅವಕಾಶಗಳು ದೊರೆತಿವೆ. ಆದರೆ, ಬ್ರಾಹ್ಮಣ ಸಮುದಾಯಕ್ಕೆ ಈವರೆಗೂ ಮಹತ್ವದ ಅವಕಾಶಗಳು ದೊರೆತಿಲ್ಲ ಎಂಬ ಹಿನ್ನೆಲೆಯಲ್ಲಿ, ಈ ಬಾರಿ ವಿಪ್ರ ಸಮಾಜದ ಎಸ್. ದತ್ತಾತ್ರಿ ಅವರಿಗೆ ಟಿಕೇಟ್ ನೀಡುವಂತೆ ಕೂಗು ಆರಂಭವಾಗಿವೆ.
ಪ್ರಮುಖವಾಗಿ, ಜಿಲ್ಲಾ ರಾಜಕೀಯದಲ್ಲಿ ಬ್ರಾಹ್ಮಣರಿಗೆ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಬಿಜೆಪಿಯಿಂದ ದತ್ತಾತ್ರಿ ಅವರಿಗೆ ಟಿಕೇಟ್ ನೀಡುವ ಮೂಲಕ ವಿಪ್ರ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂಬ ಕೂಗು ವಿಪ್ರರಿಂದ ಕೇಳಿಬಂದಿದ್ದು, ದತ್ತಾತ್ರಿ ಅವರ ಹಿಂಬಾಲಕರ ಒತ್ತಾಯವೂ ಸಹ ಆಗಿದೆ.
ಈ ಹಿನ್ನೆಲೆಯಲ್ಲಿ ಎಸ್. ದತ್ತಾತ್ರಿ ಅವರ ಹಿನ್ನೆಲೆಯನ್ನು ಒಮ್ಮೆ ನೋಡೋಣ:
- ಆರ್‌ಎಸ್‌ಎಸ್ ಮೂಲಕ ಸಾಮಾಜಿಕ ಸೇವೆಗೆ ಪಾದಾರ್ಪಣೆ
- 30 ವರ್ಷಗಳಿಂದ ಬಿಜೆಪಿಯ ಹಲವು ಜವಾಬ್ದಾರಿ ನಿರ್ವಹಣೆ
- ಯುವಮೋರ್ಚ ಜಿಲ್ಲಾಧ್ಯಕ್ಷರಾಗಿ, ಯುವಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ, 8 ವರ್ಷ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷರಾಗಿ ಸೇವೆ
- ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ
- ರೋಟರಿ ಸಂಸ್ಥೆಯಲ್ಲಿ 20 ವರ್ಷಗಳಿಂದ ಹಲವಾರು ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ
- ರೋಟರಿ ಅಧ್ಯಕ್ಷ, ಸಹಾಯಕ ರಾಜ್ಯಪಾಲರಾಗಿ ರೋಟರಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇವರ ಕಲ್ಪನೆಯಾದ ಯುವಕೇಂದ್ರದ ಸ್ಥಾಪನೆ
- ವಿನೋಬ ನಗರದಲ್ಲಿ ಪ್ರಸನ್ನ ಆಂಜನೇಯ ದೇವಸ್ಥಾನದ ನಿರ್ಮಾಣದಲ್ಲಿ ಪ್ರಮುಖ ಪಾತ್ರ
- ಫ್ರೆಂಡ್‌ಸ್ ಸೆಂಟರ್, ಭಾರತಿ ಐಟಿಐ, ಕನಾಗ್ರಿ ಪ್ರತಿಷ್ಠಾನ, ಸಮರ್ಪಣ ಟ್ರಸ್‌ಟ್ ಇನ್ನಿತರ ಸಂಸ್ಥೆಗಳ ಮೂಲಕ ಸಮಾಜಮುಖಿ ಕಾರ್ಯ
- ಶಿವಮೊಗ್ಗದ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಅದರ ಸ್ಥಾಪನೆಗೆ ಶ್ರಮ
- ಸಾಗರ ರಸ್ತೆಯಲ್ಲಿರುವ ಕಾಸ್ಮೋ ಫ್ಯಾಮಿಲಿ ಕ್ಲಬ್ ಪ್ರಾರಂಭ
ದತ್ತಾತ್ರಿ ಕುರಿತು ಕಾರ್ಯಕರ್ತರ ಅಭಿಪ್ರಾಯ ಹೀಗಿದೆ:
- ಅತ್ಯಂತ ಕ್ಲಿಷ್ಟಕರವಾದ ಹಾಗೂ ಗೊಂದಲದ ಗೂಡಾಗಿದ್ದ ನೈಋತ್ಯ ಪದವೀಧರರ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಅವರೊಂದಿಗೆ ಸದಾ ಹೆಗಲಿಗೆ ಹೆಗಲು ಕೊಟ್ಟಿದ್ದು ಗೆಲುವಿನ ರುವಾರಿಯಾಗಿದ್ದು ಎಸ್. ದತ್ತಾತ್ರಿ
- ಸಂಘಟನೆಯನ್ನು ಒಗ್ಗೂಡಿಸಿ ಈ ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಪರ್ದಿ ಕಾಂಗ್ರೆಸ್ಸಿನ ಎಸ್.ಪಿ. ದಿನೇಶ್ ಅವರನ್ನು ಮಣಿಸುವಲ್ಲಿ ಇವರ ಪಾತ್ರ ಮಹತ್ವದ್ದು
- ರಾಜ್ಯ ಬಿಜೆಪಿಯಿಂದ ಚುನಾನಣಾ ಉಸ್ತುವಾರಿಯನ್ನಾಗಿ ದಾವಣಗೆರೆ ಉತ್ತರ ಕ್ಷೇತ್ರಕ್ಕೆ ನೇಮಿಸಲಾಗಿತ್ತು. ಕ್ಷೇತ್ರದ ತುಂಬ ಸತತ 10 ತಿಂಗಳ ಕಾಲ ಸಂಚರಿಸಿದ ದತ್ತಾತ್ರಿಯವರು ಎಸ್.ಎ. ರವೀಂದ್ರನಾಥ್‌ರವರ ಗೆಲುವಿಗೆ ಕಾರ್ಯತಂತ್ರಗಳನ್ನು ಹೆಣೆದು ಕಾಂಗ್ರೆಸ್ಸಿನ ಕೋಟೆಯಲ್ಲಿ ಬಿಜೆಪಿಯಲ್ಲಿ ಗೆಲ್ಲಿಸಿದರು
- ರಾಜ್ಯದ ಗಮವನ ಸೆಳೆದ ಬಂಗಾರಪ್ಪನವರ ಪುತ್ರರ ಸ್ಪರ್ಧೆಯಲ್ಲಿ ಕುಮಾರ್ ಬಂಗಾರಪ್ಪನವರ ಗೆಲುವಿನಲ್ಲೂ ದತ್ತಾತ್ರಿಯವರದ್ದೇ ಪ್ರಮುಖ ಪಾತ್ರ
- ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ದತ್ತಾತ್ರಿಯವರನ್ನು ಸೊರಬದ ಚುನಾವಣಾ ಸಂಚಾಲಕರನ್ನಾಗಿ ನೇಮಿಸಲಾಗಿತ್ತು ತಮ್ಮದೇ ಸ್ವಂತಿಕೆಯ ತಂತ್ರಗಳಿಂದ ತಮ್ಮನ ಮುಂದೆ ಅಣ್ಣನಿಗೆ ಗೆಲುವನ್ನು ತಂದು ಕೊಟ್ಟರು
ಹೀಗೆ, ಈಗ ಎದುರಾಗುವ ಲೋಕಸಭಾ ಉಪಚುನಾವಣೆಯಲ್ಲಿ ಎಸ್. ದತ್ತಾತ್ರಿ ಅವರಿಗೆ ಟಿಕೇಟ್ ನೀಡಬೇಕು ಎಂಬ ಕೂಗು ಜಿಲ್ಲಾ ಬಿಜೆಪಿ ಸೇರಿದಂತೆ ಬ್ರಾಹ್ಮಣ ವಲಯದಲ್ಲಿ ಕೇಳಿಬಂದಿದೆ. ಇದನ್ನು, ಬಿಜೆಪಿ ವರಿಷ್ಠರು ಪರಿಗಣಿಸುವರೇ ಕಾದು ನೋಡಬೇಕಿದೆ.
Discussion about this post