ಇದೇ ಜೂನ್ 17ರ ಭಾನುವಾರ ದುನಿಯಾ ವಿಜಯ್ ಮಗ ಸಾವ್ರಾಟ್ ಹುಟ್ಟುಹಬ್ಬ.
ಈ ಪ್ರಯುಕ್ತ ಕುಸ್ತಿ ಚಿತ್ರದ ಫಸ್ಟ್ ಲುಕ್ ಟೀಸರ್ ಬರಲಿದೆ. ಈ ಟೀಸರ್‌ನಲ್ಲಿ ಸಾವ್ರಾಟ್ ಸಾಹಸಗಳ ಝಲಕ್ ವಿಜಿ ಪುತ್ರನ ತಾಕತ್ ಗೆ ಶಾಕ್ ಆಗಲಿದೆ ಸ್ಯಾಂಡಲ್‌ವುಡ್.
ಎಳೆವಯಸಿನಲ್ಲೇ ಮೈಮೂಳೆ ಮುರಿದುಕೊಂಡು ಸಾಹಸ ಟೀಸರ್ ನೋಡಿದವರು ತಂದೆಗೆ ತಕ್ಕ ಮಗ, ಮಗನಿಗೆ ತಕ್ಕ ತಂದೆ ಎನ್ನುತ್ತಾರೆ. ನಿರ್ದೇಶಕ ರಘು ಶಿವಮೊಗ್ಗ ಜಿಮ್ ನಲ್ಲಿ ದಿನ ಕರಸತ್ತು ಮಾಡ್ತಿರೋ ಸಾವ್ರಾಟ್, ತಂದೆ ಮತ್ತು ಕೋಚ್ ಮಾರ್ಗದರ್ಶನದಲ್ಲಿ ಸಖತ್ ವರ್ಕೌಟ್ ಮಾಡಿ ಫಿಟ್ ಅಂಡ್ ಫೈನ್ ಆಗಿ ಅಬ್ಬರಿಸಲಿದ್ದಾನೆ.
ಕುಸ್ತಿ ಸಿನಿಮಾದ ಹಿಂದಿನ ಅಸಲಿ ಸತ್ಯವನ್ನು ಟೀಸರ್ ರಿಲೀಸ್ ದಿನ ದುನಿಯಾ ವಿಜಯ್ ಬಿಚ್ಚಿಡಲಿದ್ದಾರೆ ಎನ್ನಲಾಗಿದೆ. ಕುಸ್ತಿ ವಿಜಯ್ ಹೋಂ ಬ್ಯಾನರ್ ದುನಿಯಾ ಟಾಕೀಸ್‌ನಲ್ಲಿ ನಿರ್ಮಾಣವಾಗುತ್ತಿದೆ.
ಚೂರಿ ಕಟ್ಟೆ ಖ್ಯಾತಿಯ ರಘು ಶಿವಮೊಗ್ಗ ನಿರ್ದೇಶನದಲ್ಲಿ ಮೂಡಿಬರಲಿದೆ ಕುಸ್ತಿ ಸಿನಿಮಾ.

















