No Result
View All Result
Deeksha Brahmavara | A Divine Synergy of Artistic Excellence and Intellectual Brilliance
English Articles

Deeksha Brahmavara | A Divine Synergy of Artistic Excellence and Intellectual Brilliance

by ಕಲ್ಪ ನ್ಯೂಸ್
February 10, 2026
0

Kalpa Media House  |  Special Article: Satish Shetty Cherkadi Doddamane  | The coastal soil of Karnataka is fertile with art, but...

Read moreDetails
ಬೇಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಧ್ವನಿ ಗರಗರಿಸುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ತಜ್ಞರ ಸಲಹೆ

Stay Hydrated to Protect Your Voice This Summer: ENT Expert Advice

February 10, 2026
Mysore – Shivamogga Express Big Update on this Date | Must Read

Mysore – Shivamogga Express Big Update on this Date | Must Read

February 9, 2026
Union Minister V. Somanna Flagged Off New Demu Train Services Between Dandeli – Alnavar

Union Minister V. Somanna Flagged Off New Demu Train Services Between Dandeli – Alnavar

February 9, 2026
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

A Second Chance at Life Through Deceased Organ Donation

February 3, 2026
  • Advertise With Us
  • Grievances
  • About Us
  • Contact Us
Wednesday, February 11, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಡಾ. ವೀಣಾಭಟ್ ಹೇಳುತ್ತಾರೆ: ಜನರಿಗೆ ಆರೋಗ್ಯ ಎಂದರೇ ಗೊತ್ತಿಲ್ಲ!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 18, 2018
in Special Articles
0
Share on FacebookShare on TwitterShare on WhatsApp

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸನಿಹದಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ ಯೋಗ ದಿನದಲ್ಲಿ ಯಾಕೆ ಪಾಲ್ಗೊಳ್ಳಬೇಕು ಎನ್ನುವಷ್ಟೇ ಮಹತ್ವ ದೈಹಿಕ ಆರೋಗ್ಯ ಹಾಗೂ ಅದಕ್ಕಾಗಿ ಮಾಡಬೇಕಾದ್ದೇನು ಎಂಬುದರ ಕುರಿತಾಗಿಯೂ ತಿಳಿಯಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬಹುದು ಎಂಬುದನ್ನು ಪ್ರಖ್ಯಾತ ವೈದ್ಯೆ ಡಾ. ವೀಣಾಭಟ್ ಇಂದಿನಿಂದ ನಾಲ್ಕು ದಿನ ಕಲ್ಪ ನ್ಯೂಸ್‌ನಲ್ಲಿ ಬರೆಯುತ್ತಾರೆ.

 

ನಾವೆಲ್ಲರೂ ಇಂದು ನಾಲ್ಕನೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮದ ಹೊಸ್ತಿಲಲ್ಲಿದ್ದೇವೆ. ಪ್ರತಿವರ್ಷದಂತೆ ಎಲ್ಲೆಡೆ ಯೋಗಸ್ಪರ್ಧೆಗಳು, ಶಿಬಿರಗಳು, ಪ್ರಚಾರ, ಪ್ರದರ್ಶನ, ಘೋಷಣೆ, ಭಾಷಣಗಳು ನಡೆಯುತ್ತಿವೆ. ಯೋಗದ ಸಾರ, ಮಹತ್ವ ಮತ್ತು ಪ್ರಯೋಜನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉನ್ನತ ಮಟ್ಟಕ್ಕೇರಲು ಇದೊಂದು ಸುಸಂದರ್ಭ.

ಇತ್ತೀಚೆಗೆ ಇದರ ಜೊತೆಗೆ ತಳಕು ಹಾಕಿಕೊಂಡಿರುವ ವ್ಯಾಪಾರೀಕರಣವು, ಯೋಗದ ಹೆಸರಿನಲ್ಲಿ ಹಣಪ್ರತಿಷ್ಠೆಗಳಿಸುವ ಮಾರ್ಗಗಳೆಲ್ಲಾ ಕಣ್ಣಿಗೆ ರಾಚುತ್ತದೆ. ಏನೇ ಇರಲಿ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಯೋಗ ದಿನಾಚರಣೆಯು ಒಂದು ಸುಸಂದರ್ಭ. ಎಲ್ಲದರ ಹಿಂದಿನ ಉದ್ದೇಶ ಉತ್ತಮ ಆರೋಗ್ಯ ಹೊಂದುವುದೇ ಆಗಿದೆ. ಈ ಬಾರಿಯ ಘೋಷವಾಕ್ಯವೂ ಕೂಡ ಕಳೆದ ವರ್ಷದ ಹಾಗೆ ‘‘ಆರೋಗ್ಯಕ್ಕಾಗಿ ಆದ್ಯತೆ’’ ಎನ್ನುವುದೇ ಆಗಿದೆ.

‘‘ಶರೀರ ಮಾಧ್ಯಮಂ, ಖಲುಧರ್ಮಸಾಧನಂ’’ ಎನ್ನುವ ಹಾಗೆ ಆರೋಗ್ಯ ಮನುಷ್ಯನ ಮೂಲಭೂತ ಹಕ್ಕು. ಅದನ್ನು ದಾನವಾಗಿ ಅಥವಾ ಎರವಲಾಗಿ ಪಡೆಯಲಿಕ್ಕೂ ಸಾಧ್ಯವಿಲ್ಲ. ಸ್ವಪ್ರಯತ್ನ ಹಾಗೂ ಸಾಧನೆಯಿಂದಲೇ ಪಡೆಯಬಹುದು. ಇಂದು ಅನಾರೋಗ್ಯದ ಬಗ್ಗೆ ಹೆಚ್ಚು ಅಧ್ಯಯನ ಆಗಿದೆಯೇ ಹೊರತು ಆರೋಗ್ಯದ ಬಗ್ಗಲ್ಲ.

ಹಾಗಾದರೆ ಆರೋಗ್ಯ ಎಂದರೇನು?

ಆರೋಗ್ಯಕ್ಕೆ ಹಲವು ವ್ಯಾಖ್ಯೆಗಳಿದ್ದರು ವಿಶ್ವಆರೋಗ್ಯಸಂಸ್ಥೆಯ ಪ್ರಕಾರ ‘‘ಆರೋಗ್ಯವೆಂದರೆ ಕೇವಲ ರೋಗವಿಲ್ಲದಿರುವುದು ಎಂದಷ್ಟೇ ಅರ್ಥವಲ್ಲ, ಇದೊಂದು ಪರಿಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಅಧ್ಯಾತ್ಮಿಕ ಸುಖಾನುಭವ ಅಥವಾ ಉತ್ಕೃಷ್ಟ ಸ್ಥಿತಿ’’.

ವಿಶ್ವ ಔಷಧ ಸಂಸ್ಥೆಯ ಪ್ರಕಾರ ‘‘ಬೆಳಿಗ್ಗೆ ಎದ್ದಾಗ ಕೆಲಸ ಮಾಡಲು ಆಸಕ್ತಿ ಹಾಗೂ ಬೇರೆಯವರಿಗೆ ಸಹಾಯ ಮಾಡುವ ಮನಃಸ್ಥಿತಿ’’ ಇದ್ದರೆ ಅದೇ ಆರೋಗ್ಯವೆನಿಸಿಕೊಳ್ಳುತ್ತವೆ. (Enthusiasm to work and to be compassionate with others) ಶರೀರದ ಎಲ್ಲಾ ಅವಯವಗಳು ಉಚ್ಛಮಟ್ಟದಲ್ಲಿ ಜೀವಕ್ರಿಯೆಯನ್ನು ನಡೆಸಿ ಸಮಗ್ರ ಶರೀರವು ತನ್ನಲ್ಲಿರುವ ಚೇತನ ಶಕ್ತಿಯನ್ನು ಉಪಯೋಗಿಸಿ ನಿಸರ್ಗದ ಜೊತೆ ಸಮತೋಲನ ಕಾಪಾಡಿಕೊಂಡರೆ ವ್ಯಕ್ತಿ ಸಂಪೂರ್ಣ ಆರೋಗ್ಯದಿಂದಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಆರೋಗ್ಯ ಪಡೆಯುವ ಹೋರಾಟದಲ್ಲಿ ಮನುಷ್ಯನು ಹಲವಾರು ಕ್ರಿಮಿ-ಕೀಟ, ರೋಗಾಣುಗಳ ಜೊತೆಗೆ, ಭೌತರಾಸಾಯನಿಕ ವಸ್ತುಗಳು, ಇನ್ನಿತರ ಹಾನಿಕಾರಿ ವೈರಿಗಳ ಮೇಲೆ ತನ್ನ ಮೇಲ್ಮೈಯನ್ನು ಸಾಧಿಸಬೇಕಾಗಿದೆ.

ಆದರೆ ಆರೋಗ್ಯವೇನೆಂದು ಗೊತ್ತಿರುವುದು ಹಾಗಿರಲಿ, ಹೆಚ್ಚಿನವರಿಗೆ ತಮ್ಮ ಕಾಯಿಲೆಗಳಿಗೆ ಕಾರಣಗಳೇ ಗೊತ್ತಿಲ್ಲ. ಅನಾರೋಗ್ಯಕ್ಕೆ ಕಾರಣ ಅನುವಂಶೀಯ, ತಪ್ಪು ಆಹಾರ ಸೇವನೆ, ವಿಶ್ರಾಂತಿಯ ಕೊರತೆ, ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆಯ ಕೊರತೆಯಿಂದ, ರೋಗಾಣುಗಳ ದಾಳಿಯಿಂದ ಕುಂದುವ ರೋಗನಿರೋಧಕ ಶಕ್ತಿಯಿಂದ, ಗಾಳಿ-ನೆಲ-ಜಲ ಮಾಲಿನ್ಯದಿಂದ, ಧೂಮಪಾನ-ಮಧ್ಯಪಾನ ಚಟದಿಂದಾಗುವ ಅಂಗಾಂಗಗಳ ಹಾನಿಯಿಂದ ಎಂಬ ಅರಿವೇ ಇರುವುದಿಲ್ಲ. ಇದರ ಜೊತೆಗೆ ಕಾಯಿಲೆಗಳ ಸ್ವರೂಪದ ಬಗ್ಗೆಯೂ ತಿಳಿದುಕೊಳ್ಳದೆ ಮಾಟ-ಮಂತ್ರ ಇನ್ನಿತರ ಮೂಢನಂಬಿಕೆಗಳಿಗೆ ಜೋತುಬಿದ್ದು ಹಣಕಳೆದುಕೊಳ್ಳುವವರು ಬಹಳಷ್ಟಿದ್ದಾರೆ.

ರೋಗದ ಆರಂಭದಲ್ಲೇ ಚಿಕಿತ್ಸೆ ತೆಗೆದುಕೊಳ್ಳದೆ ಉಲ್ಬಣಗೊಂಡಾಗ ಹೆಚ್ಚು ವೆಚ್ಚಮಾಡಿ ಹಣ ಕಳೆದುಕೊಳ್ಳುವವರು ಬಹಳಷ್ಟಿದ್ದಾರೆ. ಹೈಟೆಕ್ ಆಸ್ಪತ್ರೆಗಳೂ ಹೆಚ್ಚೆಚ್ಚು ತೆರೆದುಕೊಳ್ಳುತ್ತಿವೆ, ವೈದ್ಯಕೀಯ ಕ್ಷೇತ್ರದಲ್ಲಿಂದು ಸಾಕಷ್ಟು ಪ್ರಗತಿಯಾಗಿ ಪರಿಣಾಮಕಾರಿ ಔಷಧ ಹಾಗೂ ಚಿಕಿತ್ಸಾ ಕ್ರಮಗಳು ಲಭ್ಯವಿದ್ದರೂ ಹಲವು ರೋಗಿಗಳ ಸ್ಥಿತಿ ಇಂದಿಗೂ ಚಿಂತಾಜನಕವೇ. ಒಂದೆಡೆ ನಾವು ಸಾಂಕ್ರಾಮಿಕ ಸೋಂಕು ಜಾಡ್ಯಗಳನ್ನು, ಪರಾವಲಂಭಿ ಸೋಂಕುಗಳನ್ನು, ಅಪೌಷ್ಠಿಕತೆ ಇತ್ಯಾದಿಗಳನ್ನು ಜಯಿಸುತ್ತಿದ್ದೇವೆ ಎಂದು ಭಾವಿಸಿದ್ದೇವೆ.

ಆದರೆ ಇಂದಿನ ಹೆಚ್ಚುತ್ತಿರುವ ನಗರೀಕರಣ ಹಾಗೂ ಕಾರ್ಯದೊತ್ತಡ, ಫಾಸ್‌ಟ್ಫುಡ್ ಸೇವನೆ, ಕಡಿಮೆ ದೈಹಿಕ ಚಟುವಟಿಕೆ, ಜೊತೆಜೊತೆಗೆ ಒತ್ತಡದ ಬದುಕಿನೊಂದಿಗೆ ಹೆಚ್ಚುತ್ತಿರುವ ಧೂಮಪಾನ, ಮಧ್ಯಪಾನ, ಇನ್ನಿತರ ದುಶ್ಚಟಗಳು ಇವೆಲ್ಲಾ ಸೇರಿಕೊಂಡು ಇಂದು ಜೀವನಶೈಲಿ ಸಂಬಂಧ ಕಾಯಿಲೆಗಳಾದ ಮಧುಮೇಹ, ಹೃದ್ರೋಗ, ಏರುರಕ್ತದೊತ್ತಡ, ಕ್ಯಾನ್ಸರ್, ಬೊಜ್ಜು, ಇತ್ಯಾದಿ ರೋಗಗಳನ್ನು ಹೆಚ್ಚಿಸುತ್ತಿದೆ.

ಇದಕ್ಕೆಲ್ಲಾ ಒಟ್ಟಾರೆ ಕಾರಣ ಮನುಷ್ಯನು ನಿಸರ್ಗದ ನಿಯಮಗಳನ್ನು ಧಿಕ್ಕರಿಸಿ, ಕೊನೆಗೆ ನಿಸರ್ಗವನ್ನೂ ನಾಶಪಡಿಸುತ್ತಿರುವುದೇ ಆಗಿದೆ. ಜನಸಾಮಾನ್ಯರಂತೂ ಹೆಚ್ಚುತ್ತಿರುವ ವೈದ್ಯಕೀಯ ಸಂಕಷ್ಟಗಳನ್ನು ಎದುರಿಸಲಾಗದೆ ತೊಳಲಾಡುತ್ತಿದ್ದಾರೆ.

ಜೀವನವೆಂದರೆ ಕೇವಲ ಬದುಕುವುದಲ್ಲ. ಆರೋಗ್ಯ ಪೂರ್ಣವಾಗಿ ಜೀವಿಸುವುದು. ಆರೋಗ್ಯವಂತಹ ಶರೀರದಲ್ಲಿ ಸಮವಾದ ಉಷ್ಣತೆಯಲ್ಲಿದ್ದು, ಹಗುರತೆ ಆರಾಮದ ಅನುಭವವಿದ್ದು, ಉತ್ತಮ ಹಸಿವು, ಆಳವಾದ ನಿದ್ದೆ, ಸಂತೋಷ, ಸರಿಯಾದ ಶಾರೀರಿಕ ಕ್ರಿಯೆಗಳು, ಕಾಲಕಾಲಕ್ಕೆ ಮಲಮೂತ್ರ ವಿಸರ್ಜನೆಯಾಗಿ ದೇಹಾಲಸ್ಯ ಇಲ್ಲದಿರುವುದೇ ಆಗಿದೆ. ಒಟ್ಟಾರೆ ಹೇಳುವುದಾದರೆ ನಾವು ಆಯ್ದುಕೊಂಡ ಜೀವನ ಅಪೇಕ್ಷಿಸುವುದನ್ನು ನಾವು ಕೈಗೊಳ್ಳಬಹುದಾದರೆ ಅದೇ ಆರೋಗ್ಯ. Prevention is better than cure (ನಿವಾರಣೆಗಿಂತ ನಿರ್ಬಂಧವೇ ಲೇಸು) ಎನ್ನುವ ಹಾಗೆ ರೋಗಬಂದ ಮೇಲೆ ರೋಗದ ಜೊತೆ ಸೆಣಸಾಡುವುದಕ್ಕಿಂತ ಕೆಲವು ಜೀವನಶೈಲಿಯ ಸರಳ ಸೂತ್ರಗಳನ್ನು ಅನುಸರಿಸಿ, ಪ್ರಕೃತಿಯ ಬೇರೆಜೀವಜಂತುಗಳ ಹಾಗೆ ನಿಸರ್ಗದ ನಿಯಮಗಳನ್ನು ಅನುಸರಿಸಿ, ನಿಸರ್ಗ ನಿಯಮಗಳ ಆಜ್ಞಾಧಾರಕನಾಗಿದ್ದರೆ, ರೋಗಗಳ ಆಗಮನವನ್ನೇ ತಡೆಗಟ್ಟಬಹುದು.

(ಉತ್ತಮ ಆರೋಗ್ಯಕ್ಕೆ ಏಳು ಅಂಶಗಳು: ನಾಳೆ ಓದಿ)

ಲೇಖಕರು: ಡಾ.ವೀಣಾ ಭಟ್, ಸ್ತ್ರೀರೋಗ ತಜ್ಞರು,
                ಮಹಿಳಾ ಆರೋಗ್ಯವೇದಿಕೆ ಅಧ್ಯಕ್ಷರು,
                ಐಎಂಎ ಭದ್ರಾವತಿ
                ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷರು

Tags: DoctorDr. Veena BhatHuman HealthIMAInternational Yoga Dayಪ್ರಖ್ಯಾತ ವೈದ್ಯೆ ಡಾ. ವೀಣಾಭಟ್
Share196Tweet123Send
Previous Post

ಕರ್ನಾಟಕ ಹಿಂದೂದ್ವೇಷಿ ಕಾಂಗ್ರೆಸ್‌ನ ಪ್ರಯೋಗಶಾಲೆ: ಸೋಮಶೇಖರ್

Next Post

ದೆಹಲಿ ಡಿಸಿಎಂ ಸಿಸೋಡಿಯಾ ಆಸ್ಪತ್ರೆಗೆ ದಾಖಲು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದೆಹಲಿ ಡಿಸಿಎಂ ಸಿಸೋಡಿಯಾ ಆಸ್ಪತ್ರೆಗೆ ದಾಖಲು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಸರಿಗಮಪ ಲಿಟ್ಲ್ ಚಾಂಪ್ಸ್ | ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್ | ಎಲ್ಲಿ? ಯಾವಾಗ?

ಸರಿಗಮಪ ಲಿಟ್ಲ್ ಚಾಂಪ್ಸ್ | ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್ | ಎಲ್ಲಿ? ಯಾವಾಗ?

February 11, 2026
ಪಿ-ಕ್ಯಾಪ್ ಪೊಲೀಸರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ: ಜಿಲ್ಲಾರಕ್ಷಣಾಧಿಕಾರಿ ನಿಖಿಲ್

ಪಿ-ಕ್ಯಾಪ್ ಪೊಲೀಸರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ: ಜಿಲ್ಲಾರಕ್ಷಣಾಧಿಕಾರಿ ನಿಖಿಲ್

February 11, 2026
ಫೆ.12ರಂದು `ಮರಳಿ ಮನಸಾಗಿದೆ’ ರಾಜ್ಯಾದ್ಯಂತ ಬಿಡುಗಡೆ

ಫೆ.12ರಂದು `ಮರಳಿ ಮನಸಾಗಿದೆ’ ರಾಜ್ಯಾದ್ಯಂತ ಬಿಡುಗಡೆ

February 11, 2026
ಶಿವಮೊಗ್ಗದಲ್ಲಿ ಸಿನಿಮಾ ವೀಕ್ಷಿಸಿದ ಡಾಲಿ ಧನಂಜಯ್

ಶಿವಮೊಗ್ಗದಲ್ಲಿ ಸಿನಿಮಾ ವೀಕ್ಷಿಸಿದ ಡಾಲಿ ಧನಂಜಯ್

February 11, 2026
ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ | ರಾಜ್ಯ ಸರ್ಕಾರದ ವಿರುದ್ಧ ದಸಂಸ ಪ್ರತಿಭಟನೆ

ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ | ರಾಜ್ಯ ಸರ್ಕಾರದ ವಿರುದ್ಧ ದಸಂಸ ಪ್ರತಿಭಟನೆ

February 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL