ಶಿವಮೊಗ್ಗ: ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮಿಗಿಲಾದುದು. ಹಾಗಾಗಿ ಈ ಸ್ಪರ್ಧೆಯಲ್ಲಿ ಕೂಡ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ನಾನೂ ಕೂಡ ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡುತ್ತೇನೆ ಎಂದು ಮಿಸೆಸ್ ಇಂಡಿಯಾ ಯೂನಿವರ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಮನಿಷಾ ವರುಣ್ ಹೇಳಿದ್ದಾರೆ.
ಇತ್ತೀಚೆಗೆ ಶ್ರೀಲಂಕಾದಲ್ಲಿ ಜರುಗಿದ ಮಿಸೆಸ್ ಇಂಡಿಯಾ ಯೂನಿವರ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಂತರ ನಗರಕ್ಕೆ ಆಗಮಿಸಿ, ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ ಅವರು, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮಿಗಿಲಾದುದು. ಹಾಗಾಗಿ ಈ ಸ್ಪರ್ಧೆಯಲ್ಲಿ ಕೂಡ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ನಾನೂ ಕೂಡ ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡುತ್ತೇನೆ. ಕಿರೀಟ ಧರಿಸುವುದು ಮುಖ್ಯವಲ್ಲ. ಮಹಿಳಾ ದೌರ್ಜನ್ಯ ತಡೆಗಟ್ಟುವಲ್ಲಿ ಸಮಾಜಮುಖಿ ಕೆಲಸ ಮಾಡುವುದು ಮುಖ್ಯ. ತಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
ಇನ್ನು, ಸ್ಫರ್ಧೆಯಲ್ಲಿನ ತಮ್ಮ ಅನುಭವ ಹಂಚಿಕೊಂಡ ಅವರು, ಕಿರಿಯರ ವಿಭಾಗದಲ್ಲಿ (25ರಿಂದ 35 ವರ್ಷ) ಒಳಗಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ರಾಷ್ಟ್ರದಾದ್ಯಂತ ಸುಮಾರು 26 ಮಹಿಳೆಯರು ಇದರಲ್ಲಿ ತೀವ್ರ ಪೈಪೋಟಿ ನೀಡಿದ್ದರು. ಒಟ್ಟು 8 ಸುತ್ತಿನ ಸ್ಪರ್ಧೆ ಇದಾಗಿದ್ದು, ಕೊನೆಯ 5 ಸುತ್ತಿನಲ್ಲಿ ಆಯ್ಕೆಯಾಗಿ ಅಲ್ಲಿಯೂ ಸಹ ಗೆದ್ದಿದ್ದೇನೆ ಎಂದು ವಿವರಿಸಿದರು.
ಈ ಸ್ಪರ್ಧೆ ಯಾವುದೇ ಕಮರ್ಷಿಯಲ್ ಆಗಿರಲಿಲ್ಲ. ಇದರಲ್ಲಿ ಗೆದ್ದರೆ ಬಹುಮಾನದ ಮೊತ್ತವೂ ಇಲ್ಲ. ಆದರೆ ಇದರ ಉದ್ದೇಶ ಮಾತ್ರ ಮೆಚ್ಚುವಂಥದ್ದು. ಮಹಿಳೆಯ ಮೇಲಿನ ದೌರ್ಜನ್ಯದ ತಡೆಗೆ ಏನು ಮಾಡಬಹುದು, ಯಾವ ಕ್ರಮ ತೆಗದುಕೊಳ್ಳಬಹುದು ಎಂಬೆಲ್ಲ ವಿಷಯಗಳು ಮುಖ್ಯವಾಗಿದ್ದವು. ಕೊನೆಯ ಸುತ್ತಿನ ಸ್ಪರ್ಧೆಯಂತೂ ತುಂಬಾ ಕಠಿಣವಾಗಿತ್ತು. ಒಳ್ಳೆಯ ಪ್ರಶ್ನೆಗಳನ್ನು ಕೇಳಿದೆರೆ ಅದರಲ್ಲಿ ನಿಮಗೆ ಯಾರು ಮಾರ್ಗದರ್ಶಿಗಳು ಎಂಬ ಪ್ರಶ್ನೆಗೆ ತನ್ನ ತಾಯಿ ಮತ್ತು ಅತ್ತೆ ಎಂದು ನಾನು ಉತ್ತರ ಕೊಟ್ಟೆ ಎಂದರು.
ವರುಣ್, ಎಂ.ವಿ. ಸೂರ್ಯನಾರಾಯಣ, ಛಾಯಾ ಸೂರ್ಯನಾರಾಯಣ ಇದ್ದರು.
ಇದೊಂದು ವಿಶಿಷ್ಟ ಸ್ಪರ್ಧೆಯಾಗಿತ್ತು. ಇದರಲ್ಲಿ ಭಾಗವಹಿಸಲು ಕೆಲವು ನಿಯಮಗಳು ಇದ್ದವು. ಅದರಲ್ಲಿ ಪ್ರಮುಖವಾಗಿ ಮದುವೆಯಾಗಿರಬೇಕು ಮತ್ತು ಒಂದು ಮಗುವೂ ಆಗಿರಬೇಕು. ತಮಗೆ ಎರಡು ಮಕ್ಕಳಿದ್ದಾರೆ. ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಪಂಕಜ್ ಕುಮಾರ್ ಪಾಂಡೆ ಅವರ ಪತ್ನಿ ಅನುಜಾ ಪಾಂಡೆ ಸ್ಪರ್ಧೆಯ ಬಗ್ಗೆ ವಿವರ ನೀಡಿದ್ದರು. ಅವರಿಂದ ನಾಲ್ಕು ತಿಂಗಳು ತರಬೇತಿ ಕೂಡ ಪಡೆದುಕೊಂಡೆ. ಹಾಗಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿ ಬೆಳೆಯಿತು.
-ಮನಿಷಾ ವರುಣ್ಅಂತಿಮ ಸುತ್ತಿನಲ್ಲಿ ಬಹಳ ಧೈರ್ಯವಾಗಿ 5 ಜೂರಿಗಳು ಒಡ್ಡಿದ ಪ್ರಶ್ನೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದರು. ಅವರು ಉತ್ತರಕ್ಕೆ ಜೂರಿಗಳ ತಂಡವೇ ಬೆಕ್ಕಸ ಬೆರಗಾಗಿತ್ತು. ಅವರು ಈ ಸ್ಪರ್ಧೆಯಲ್ಲಿ ಗೆದ್ದು ಶಿವಮೊಗ್ಗವಲ್ಲದೆ ಇಡೀ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ.
-ಎಸ್.ವಿ. ಶಾಸ್ತ್ರಿ
Discussion about this post