ಇದೊಂದು ವಿಚಿತ್ರಾತಿ ವಿಚಿತ್ರ ಪ್ರಸಂಗ ಹಾಗೂ ವಿನೂತನವೂ ಹೌದು.. ಸಾಮಾನ್ಯವಾಗಿ ಯಾವುದೇ ಪೋಷಕರು ತಮ್ಮ ಮಗುವಿಗೆ ಹೆಸರು ಆಯ್ಕೆ ಮಾಡುವುದು ವೈಯಕ್ತಿಕ ವಿಚಾರವಾಗಿದ್ದು, ಸಾಮಾನ್ಯ ಕಾರ್ಯಕ್ರಮವಾಗಿರುತ್ತದೆ.
ಆದರೆ, ಮಹಾರಾಷ್ಟ್ರದ ಈ ದಂಪತಿ ತಮ್ಮ ಮಗುವಿಗೆ ಹೆಸರು ಆಯ್ಕೆ ಮಾಡಲು ಚುನಾವಣೆಯನ್ನೇ ನಡೆಸಿದ್ದಾರೆ ಎಂದರೆ ನೀವು ನಂಬಲೇಬೇಕು.
ಮಹಾರಾಷ್ಟ್ರದ ಮಿಥುನ್ ಹಾಗೂ ಮಾನ್ಸಿ ಬಾಂಗ್ ದಂಪತಿಗಳು ತಮ್ಮ ಮಗುವಿಗೆ ಹೆಸರು ಆಯ್ಕೆ ಮಾಡಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ, ಯಾವುದೇ ಹೆಸರು ಅಂತಿಮವಾಗದ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲು ಚುನಾವಣೆಯನ್ನೇ ನಡೆಸಲು ತೀರ್ಮಾನಿಸಿದರು.
ಇದಕ್ಕಾಗಿ ಜೂನ್ 15ರಂದು ಚುನಾವಣೆ ನಡೆಸಲು ತೀರ್ಮಾನ ಮಾಡಿ, ಇದಕ್ಕಾಗಿ ಚುನಾವಣಾ ಬ್ಯಾನರ್ ಹಾಗೂ ಬ್ಯಾಲೆಟ್ ಡಬ್ಬಿಗಳನ್ನು ಸಿದ್ದಪಡಿಸಿದರು. ಈ ಚುನಾವಣೆಯಲ್ಲಿ ಸ್ನೇಹಿತರು ಹಾಗೂ ಸಂಬಂಧಿಗಳು ಪಾಲ್ಗೊಂಡ ತಮ್ಮ ಅಭಿಪ್ರಾಯ ಸಲ್ಲಿಸಲು ವಿನಂತಿಸಿದರು.
ಚುನಾವಣೆಯ ನಡೆದ ಇದರಲ್ಲಿ ಯಕ್ಷ, ಯೋವಿಕ್ ಹಾಗೂ ಯುವನ್ ಎಂಬ ಮೂರು ಹೆಸರುಗಳನ್ನು ಶಿಫಾರಸ್ಸು ಮಾಡಲಾಯಿತು.
ಈ ಕುರಿತಂತೆ ಮಾತನಾಡಿರುವ ಮಿಥುನ್ ಬಾಂಗ್, ಮಗು ಜನಿಸಿದ ನಂತರ ಜಾತಕ-ಕುಂಡಲಿ ಬರೆಸಿದ್ದು, ಇದರ ಪ್ರಕಾರ ಮಗು ಭವಿಷ್ಯದಲ್ಲಿ ರಾಜಕೀಯ ನಾಯಕನಾಗಿ ಬೆಳೆಯುತ್ತಾನೆ ಎಂದು ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಹೆಸರನ್ನು ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಿ, ಚುನಾವಣೆ ನಡೆಸಲಾಯಿತು ಎಂದಿದ್ದಾರೆ.
ಅಂತಿಮವಾಗಿ ಚುನಾವಣೆಯ ಫಲಿತಾಂಶದಂತೆ ಮಗುವಿಗೆ ಯುವನ್ ಎಂಬ ಹೆಸರನ್ನು ತೀರ್ಮಾನಿಸಲಾಗಿದೆ.
Discussion about this post