ನವದೆಹಲಿ: ನಿಜಕ್ಕೂ ನಮ್ಮ ದೇಶದ ಯೋಧರ ಇಂತಹ ಸಾಧನೆಗೆ ಇಡಿಯ ದೇಶವೇ ತಲೆದೂಗಬೇಕು ಹಾಗೂ ಮಹೋನ್ನತ ಉದ್ದೇಶಕ್ಕಾಗಿ ಜಾಗೃತಿ ಮೂಡಿಸಲು ಅವರು ತೆಗೆದುಕೊಂಡ ರಿಸ್‌ಕ್ ಬಗ್ಗೆ ಹೇಳಲು ಪದಗಳೇ ಇಲ್ಲ.
ಅದು ಲಡಾಕ್ ಪ್ರದೇಶದಲ್ಲಿರುವ ಇಂಡಸ್ ಹಾಗೂ ಝನ್ಸ್ಕರ್ ನದಿ. ಹಿಮಾಲಯದ ನದಿಗಳಲ್ಲಿ ಸಾಮಾನ್ಯವಾಗಿ ವರ್ಷ ಪೂರ್ತಿ ನೀರು ತುಂಬಿ ಹರಿಯುತ್ತದೆ. ಅಂತಹುದ್ದರಲ್ಲಿ ಈಗ ಆ ನದಿಯಲ್ಲಿನ ನೀರು ಹಾಗೂ ಅದರ ವೇಗವನ್ನು ನೋಡಿದರೇ ಎದೆ ನಡುಗುತ್ತದೆ.
NW Frontier #ITBP successfully completes 11 day river #rafting expedition in mighty Indus and Zanskar rivers in Ladakh. 145 KM rafting route covered many local villages and spread the message of @swachhbharat and #BetiBachaoBetiPadhao #Himveers@cleanganganmcg @SwachhBharatGov pic.twitter.com/Sew7m5WArG
— ITBP (@ITBP_official) June 25, 2018
ಇಂತಹ ನದಿಯ ಕಡಿದಾದಾ ಹಾದಿಯಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಯೋಧರು ಸುಮಾರು 145 ಕಿಲೋ ಮೀಟರ್ ರಾಫ್ಟಿಂಗ್ ಮಾಡಿದ್ದಾರೆ.
ನದಿಯಲ್ಲಿನ ಸ್ವಚ್ಛತೆ ಕಾಪಾಡುವುದು, ಸ್ವಚ್ಛ ಭಾರತ್ ಅಭಿಯಾನ್ ಕುರಿತು ಜಾಗೃತಿ ಮೂಡಿಸುವುದು, ಭೇಟಿ ಬಚಾವೋ, ಭೇಟಿ ಪಡಾವೋ ಸೇರಿದಂತೆ ವಿವಿಧ ವಿಚಾರಗಳ ಜಾಗೃತಿಗಾಗಿ ಯೋಧರು ರಾಫ್ಟಿಂಗ್ ಮಾಡುತ್ತಾ, ನದಿ ಪಾತ್ರದ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
Discussion about this post