ನವದೆಹಲಿ: ಕಾಶ್ಮೀರ ವಿವಾದ ವಿಚಾರದ ವರದಿಯನ್ನು ವಿಶ್ವಸಂಸ್ಥೆಯ ಪ್ರಕಟಿಸಿದ ಒಂದು ದಿನದಲ್ಲೇ ಕೆರಳಿದ ಭಾರತ ಸರ್ಕಾರ, ಈ ವಿಚಾರನ್ನು ಜಾಗತಿಕ ಮಟ್ಟದಲ್ಲಿ ಎತ್ತಿದ್ದಕ್ಕೆ ಪಾಕಿಸ್ಥಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತಂತೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರ, ನಿಮ್ಮ ಸಿನಿಕತನದ ಪ್ರಯತ್ನಗಳು ಹಿಂದೆ ಸಾಕಷ್ಟು ವಿಫಲವಾಗಿವೆ. ನಿಮ್ಮ ಪ್ರಯತ್ನಕ್ಕೆ ಯುಎನ್‌ನಲ್ಲಿ ಯಾವುದೇ ಸರಿಯಾದ ಪ್ರತಿಕ್ರಿಯೆ ಹಾಗೂ ಫಲಿತಾಂಶ ಕಂಡಿಲ್ಲ ಎಂದು ಲೇವಡಿ ಮಾಡಿದೆ.
ನರಮೇಧದ ರಕ್ಷಣೆ, ತಡೆ, ಯುದ್ಧ ಅಪರಾಧಗಳು, ಜನಾಂಗೀಯ ಶುದ್ದೀಕರಣ ಹಾಗೂ ಮಾನವ ಹಿಂಸೆ ವಿರುದ್ಧ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಹೀಗೆ ಕ್ಲಾಸ್ ತೆಗೆದುಕೊಂಡಿದೆ.
ಪಿಒಕೆ ಪ್ರದೇಶದಲ್ಲಿ ಭಾರತ ಹಾಗೂ ಪಾಕಿಸ್ಥಾನ ಎರಡೂ ರಾಷ್ಟ್ರಗಳು ಮಾನವ ಹಕ್ಕುಗಳನ್ನು ಕಾಪಾಡಬೇಕು ಎಂದು ನಿನ್ನೆಯಷ್ಟೇ ವಿಶ್ವಸಂಸ್ಥೆ ವರದಿ ಪ್ರಕಟಿಸಿತ್ತು. ಇದರಿಂದ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿ, ಜಾಗತಿಕ ಸಮಸ್ಯೆ ಎಂಬಂತೆ ಬಿಂಬಿಸಲು ಪಾಕ್ ಪ್ರಯತ್ನಿಸಿದ್ದಕ್ಕೆ ಭಾರತ ವ್ಯಘ್ರವಾಗಿದೆ.
Discussion about this post