ಸಾಮಾನ್ಯವಾಗಿ ಮನುಷ್ಯ ವಯಸ್ಸು ಹೆಚ್ಚಾದಂತೆ ಪ್ರಭುದ್ದನಾಗುತ್ತಾ ಹೋಗುತ್ತಾನೆ. ಚಿಕ್ಕ ವಯೋಮಾನದಲ್ಲಿ ಆಟಾಡಿಕೊಂಡು, ಕೀಟಲೆ ಮಾಡಿಕೊಂಡು, ಜವಾಬ್ದಾರಿ ತಿಳಿಯದೇ ಕಳೆದ ನಂತರ ಪ್ರೌಢನಾಗುತ್ತಾ ಹೋದಂತೆ ತನ್ನ ವ್ಯಕ್ತಿತ್ವ, ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ಘನತೆಯನ್ನು ಅರಿತು ಅದಕ್ಕೆ ತಕ್ಕಂತೆ ಪ್ರಭುದ್ದನಾಗುತ್ತಾನೆ.
ಆದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಚಾರದಲ್ಲಿ ಮಾತ್ರ ಇದೆಲ್ಲವೂ ತಲೆಕೆಳಗಾಗಿವೆ ಎನ್ನುವುದೇ ಕುತೂಹಲ…
ರಾಹುಲ್ ಗೆ ಈಗ 50 ವರ್ಷ… ಅರ್ಧ ಆಯಸ್ಸು ಪೂರೈಸಿರುವ ರಾಹುಲ್ ಸಾಮಾಜಿಕ ಜೀವನದಲ್ಲಿ ಇಡಿಯ ದೇಶವೇ ಗಮನಿಸುವ ಸ್ಥರದಲ್ಲಿರುವವರು. ಆದರೆ, ಇನ್ನೂ ಸಹ ತಮ್ಮ ಅಪ್ರಭುದ್ಧತೆ, ಮಕ್ಕಳಾಟಿಕೆ, ಪೆದ್ದುತನಗಳನ್ನು ಬದಲಾವಣೆ ಮಾಡಿಕೊಂಡು, ಪ್ರಭುದ್ಧವಾಗಿಲ್ಲ ಎನ್ನುವುದು ಅವರ ವರ್ತನೆ ಹಾಗೂ ಮಾತುಗಳಿಂದೆ ಪದೇ ಪದೇ ಸಾಬೀತಾಗುತ್ತಲೇ ಇದೆ.
ಮೋದಿ ಸರ್ಕಾರದ ವಿರುದ್ದ ನಿನ್ನೆ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯ ಚರ್ಚೆಯ ವೇಳೆ ಸದನದಲ್ಲಿ ರಾಹುಲ್ ಮಾತು ಹಾಗೂ ವರ್ತನೆಗಳು ತೀರಾ ಬಾಲಿಶ ಹಾಗೂ ಮಕ್ಕಳಾಟದಂತೆ ಇದ್ದುದು ಅವರ ಅಪ್ರಭುದ್ದತೆಯನ್ನು ಮತ್ತೊಮ್ಮೆ ಹೊರಹಾಕಿದೆ.
2004ರಲ್ಲಿಯೇ ಸಂಸತ್ ಪ್ರವೇಶ ಮಾಡಿದ ರಾಹುಲ್‌ಗೆ ಇಷ್ಟು ವರ್ಷವಾದರೂ ಸಂಸತ್ತಿನ ಒಳಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪರಿಜ್ಞಾನ ಇಲ್ಲ. ಈ ದೇಶದ ಸಂವಿಧಾನ ಸಂಸತ್‌ಗೆ ಒಂದು ಘಟತೆಯನ್ನು ನೀಡಿದೆ. ಅಲ್ಲದೇ, ಸಂಸತ್ತಿಗೆ ತನ್ನದೇ ಆದ ನಡವಳಿಗಳಿದ್ದು, ಅದನ್ನು ಅಲ್ಲಿರುವ ಎಲ್ಲರೂ ಪಾಲಿಸಬೇಕಾದ್ದು ಕಡ್ಡಾಯ.
ಆದರೆ, ಇದರ ಕನಿಷ್ಠ ಪರಿಜ್ಞಾನವೂ ಇಲ್ಲದೇ, ಓಡಿ ಹೋಗಿ ಪ್ರಧಾನಿಯವರನ್ನು ಎದ್ದುನಿಲ್ಲಿ ಎಂದು ದಾರ್ಷ್ಟ್ರ್ಯ ಮೆರೆದದ್ದೂ ಅಲ್ಲದೇ, ಕುಳಿತಿರುವ ಪ್ರಧಾನಿಯವರನ್ನು ಬಲವಂತವಾಗಿ ತಬ್ಬಿಕೊಂಡಿದ್ದು ತೀರಾ ಬಾಲಿಷ. ಅದಕ್ಕೂ ನಾಟಕೀಯ ವರ್ತನೆ ಎಂದರೆ ತಬ್ಬಿಕೊಂಡ ನಂತರ ತಮ್ಮ ಆಸನಕ್ಕೆ ಓಡಿ ಬಂದು ಕುಳಿತುಕೊಂಡ ರಾಹುಲ್, ಪ್ರಧಾನಿಯವರನ್ನು ನೋಡಿ ಕಣ್ಣು ಹೊಡೆದಿದ್ದು, ಅವರ ಅಪ್ರಭುದ್ಧ ಹಾಗೂ ಕೀಟಲೆ ಮನಃಸ್ಥಿತಿಯನ್ನು ತೋರುತ್ತದೆ.
ಅಯ್ಯಾ ರಾಹುಲ್, ನರೇಂದ್ರ ಮೋದಿ ಈ ದೇಶದ ಪ್ರಧಾನಿ. ಪ್ರಧಾನಿಯಾದವರಿಗೆ ಅವರದ್ದೇ ಆದ ಗೌರವ ಇರುತ್ತದೆ. ಅಂತಹ ವ್ಯಕ್ತಿಯನ್ನು ಬಲವಂತವಾಗಿ ತಬ್ಬಿಕೊಂಡಿರಲ್ಲಾ ಅವರೇನು ನಿಮ್ಮೊಂದಿಗೆ ಗೋಲಿ ಆಡಿದ ಗೆಳೆಯರೇ. ನಿಮ್ಮ ಪಕ್ಷದ ಮುಖಂಡರು ನೋಡಿದರೆ ನೀವು ಭಾವಿ ಪ್ರಧಾನಿ ಎನ್ನುತ್ತಾರೆ. ನಿಮಗೋ ಪ್ರಧಾನಿ ಸ್ಥಾನದ ಕನಿಷ್ಠ ಘನತೆಯೂ ತಿಳಿದಿಲ್ಲ. ಹೀಗಿರುವಾಗ, ನಿಮ್ಮನ್ನು ಪ್ರಧಾನಿಯಾಗಿ ನೋಡುವುದಲ್ಲ, ಊಹಿಸಿಕೊಳ್ಳುವುದೂ ಸಹ ಸಾಧ್ಯವಿಲ್ಲ.
ಇನ್ನು, ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯ ಮುಖಂಡರು, ಸಂಸತ್ ಕುರಿತಾಗಿ ಅಪಾರ ಜ್ಞಾನವುಳ್ಳವರು ಇದ್ದಾರೆ. ಇವರೆಲ್ಲಾ, ರಾಹುಲ್‌ಗೆ ಬುದ್ದಿ ಹೇಳಬೇಡವೇ? ವಾಸ್ತವವಾಗಿ ರಾಹುಲ್ ಏನೂ ಕಿರಿಯ ಅಲ್ಲ. ವಯಸ್ಸು 50 ಆಗಿದೆ. ಆದರೂ ಸಹ ಕಾಂಗ್ರೆಸ್ ನಾಯಕರ ಮುಂದೆ ಕಿರಿಯರೇ ಆಗಿರುವ ಹಿನ್ನೆಲೆಯಲ್ಲಿ ಕೊಂಚವಾದರೂ ಸಂಸತ್ ಘನತೆ, ನಡವಳಿ, ಸದನದ ನಿಯಮಗಳನ್ನು ಹೇಳಿಕೊಡುವುದು ಬೇಡವೇ?
ಇನ್ನು, ರಾಹುಲ್ ಮಾತನಾಡಿದ್ದೋ, ಬಾಹರ್ ಎನ್ನುವುದಕ್ಕೆ ಬಾರ್ ಎಂದು ಇಡಿಯ ಸದನದಲ್ಲಿ ನಗೆಪಾಟಲಿಗೀಡಾಗಿದ್ದು, ಮತ್ತೊಂದು ಕಾಮಿಡಿ ಶೋ… ಇಂದು ವ್ಯಕ್ತಿ ಭಾವಿ ಪ್ರಧಾನಿಯಂತೆ! ಧನ್ಯ ತಾಯಿ ಭಾರತಿ!
ರಾಹುಲ್‌ಗೆ ಏನು ಶಿಕ್ಷೆ?
ಇನ್ನು, ಅತ್ಯಂತ ಪ್ರಮುಖವಾಗಿ, ರಾಫೆಲ್ ಡೀಲ್ ಈ ದೇಶದ ಭದ್ರತೆ ವಿಚಾರದಲ್ಲಿ ಅತ್ಯಂತ ಸೂಕ್ಷ್ಮವಾದ ವಿಚಾರ. ಇಂತಹ ವಿಚಾರದಲ್ಲಿ ಅವ್ಯವಹಾರ ನಡೆದಿದೆ. ನಾನು ಫ್ರಾನ್‌ಸ್ ಅಧ್ಯಕ್ಷರನ್ನು ಭೇಟಿಯಾದಾಗ ಕೇಳಿದ್ದೆ. ರಹಸ್ಯವೇನೂ ಇಲ್ಲ ಎಂದಿದ್ದರು ಎಂದು ಆಧಾರ ರಹಿತ, ಬಾಲಿಶ ಆರೋಪ ಮಾಡಿದ್ದರು ರಾಹುಲ್.
ಇದಕ್ಕೆ ತತಕ್ಷಣವೇ ಅಧಿಕೃತ ಪ್ರಕಟಣೆ ನೀಡಿರುವ ಫ್ರೆಂಚ್ ಸರ್ಕಾರ, ರಾಹುಲ್ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, 36 ಯುದ್ಧ ವಿಮಾನ ಖರೀದಿಯ ಒಪ್ಪಂದದಲ್ಲಿ ಯಾವುದೇ ರಹಸ್ಯ ಷರತ್ತು ಇಲ್ಲ ಎಂಬ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇವೆ. ಆದರೆ ಒಪ್ಪಂದ ಅತ್ಯಂತ ಸೂಕ್ಷ್ಮವಾಗಿದ್ದು, ಅದರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಫ್ರಾನ್‌ಸ್ ಮತ್ತು ಭಾರತ 2008ರಲ್ಲಿ ರಕ್ಷಣಾ ಒಪ್ಪಂದ ಪೂರ್ಣಗೊಳಿಸಿದ್ದು, ಇದು ಉಭಯ ದೇಶಗಳ ಭದ್ರತೆ ಮತ್ತು ರಕ್ಷಣಾ ಸಾಧನದ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಪರಿಣಾಮ ಬೀರುವ ವಿಚಾರವಾಗಿರುವುದರಿಂದ ಎರಡೂ ದೇಶಗಳು ಒಪ್ಪಂದದ ಮಾಹಿತಿಯನ್ನು ರಕ್ಷಿಸಲು ಬದ್ಧವಾಗಿ ಎಂದಿದೆ.
ಅಲ್ಲಿಗೆ ರಾಹುಲ್ ಸುಳ್ಳು ಆರೋಪ ಮಾಡುವ ಮೂಲಕ ದೇಶದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಅದೂ ಸಂಸತ್ ಕಲಾಪದ ಮೂಲಕ ಹರಾಜು ಹಾಕಲು ಯತ್ನಿಸಿದ್ದು ಅಪರಾಧವೇ ಅಲ್ಲವೇ? ಓರ್ವ ಸಂಸದರಾಗಿ ಈ ದೇಶದ ಘಟನೆಯನ್ನು, ಮರ್ಯಾದೆಯನ್ನು ಕಾಪಾಡುವುದು ಅವರ ಕರ್ತವ್ಯ. ಆದರೆ, ಇವರೇ ಇಂತಹ ಕೃತ್ಯ ಎಸಗಿರುವುದಕ್ಕೆ ಅವರಿಗೆ ಏನು ಶಿಕ್ಷೆ?
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post