ನವದೆಹಲಿ: ಮೂರು ದೇಶಗಳ ಅಧಿಕೃತ ಪ್ರವಾಸದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರವಾಂಡಾ ತಲುಪಿದ್ದಾರೆ. ಈ ಮೂಲಕ ಪೂರ್ವ ಆಫ್ರಿಕನ್ ದೇಶಗಳಿಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಸಹ ಅವರು ಪಾತ್ರರಾಗಿದ್ದಾರೆ.
ಮೋದಿಯವರ ವಿಶೇಷ ವಿಮಾನ ಕಿಗಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಳಿದ ವೇಳೆ, ಅವರನ್ನು ಸ್ವಾಗತಿಸಲು ರವಾಂಡಾ ಅಧ್ಯಕ್ಷ ಪಾಲ್ ಕಗಮೆ ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ವಿಮಾನ ನಿಲ್ದಾಣದಲ್ಲೇ ಮೋದಿಯವರಿಗೆ ರೆಡ್ ಕಾರ್ಪೆಟ್ ಸ್ವಾಗತ ಕೋರಲಾಯಿತು.
Welcome to #Rwanda Prime Minister @narendramodi. We look forward to cementing our longstanding friendship and close collaboration through this productive visit. pic.twitter.com/llzX7wVUwg
— Paul Kagame (@PaulKagame) July 23, 2018
ರವಾಂಡಾದ ಎರಡು ದಿನಗಳ ಭೇಟಿಯಲ್ಲಿ ಮಹತ್ವದ ವಿಚಾರಗಳು ಚರ್ಚೆಗೆ ಬರಲಿದ್ದು, ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ.
Discussion about this post