ಚೆನ್ನೈ: ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಆರೋಗ್ಯ ಕ್ಷೀಣಿಸುತ್ತಿದ್ದು, ಅವರನ್ನು 24 ಗಂಟೆಗಳ ಕಾಲ ನಿಕಟ ವೀಕ್ಷಣೆಯಲ್ಲಿಡಲಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಕಾವೇರಿ ಆಸ್ಪತ್ರೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಕರುಣಾನಿಧಿ ಅವರ ದೇಹದ ಅಂಗಾಂಗಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತಿದೆ. ಆದರೂ ಅವರಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದೆ.
Chennai's Kauvery Hospital issues the medical bulletin of DMK Chief M Karunanidhi; states a decline in his medical condition. #TamilNadu pic.twitter.com/CSCUfOuE49
— ANI (@ANI) August 6, 2018
ಕರುಣಾನಿಧಿ ಅವರಿಗೆ ತುರ್ತು ನಿಗಾಘಟಕದಲ್ಲಿ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಮುಂದಿನ 24 ಗಂಟೆಗಳ ಕಾಲ ಅವರ ಆರೋಗ್ಯದ ಕುರಿತಾಗಿ ತೀವ್ರ ನಿಗಾ ವಹಿಸಲಾಗಿದೆ.
ಇನ್ನು, ಆಸ್ಪತ್ರೆಯ ಹೊರಭಾಗದಲ್ಲಿ ಕರುಣಾನಿಧಿ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದು, ತಮ್ಮ ನಾಯಕ ಗುಣಮುಖರಾಗಲಿ ಎಂದು ಬೇಡುತ್ತಿದ್ದಾರೆ.
Discussion about this post