ತಿರುವನಂತಪುರಂ: ಪ್ರಕೃತಿಯ ನಾಡು, ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ವರುಣ ದೇವ ರುದ್ರ ನರ್ತನ ಮಾಡುತ್ತಿದ್ದು, ಪರಿಣಾಮ ಇದುವರೆಗೂ ಒಟ್ಟು 29 ಮಂದಿ ಬಲಿಯಾಗಿದ್ದಾರೆ.
ಕುಂಭದ್ರೋಣ ಮಳೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರವಾಹ ಉಂಟಾಗಿದ್ದು, ಇದರಿಂದಾಗಿ ಹಲವೆಡೆ ಭೂಮಿ ಕುಸಿದಿದೆ. ಕೇರಳದಾದ್ಯಂತ 54 ಸಾವಿರ ಮಂದಿ ಪ್ರವಾಹದಿಂದ ಸಂತ್ರಸ್ತರಾಗಿದ್ದು, ಇವರನ್ನೆಲ್ಲಾ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
Kerala: Visuals of flooded Panamaram village in Wayanad district. 29 people have died in the state due to flood and landslides following heavy and incessant rains. #KeralaFloods pic.twitter.com/2GPgyLzWPN
— ANI (@ANI) August 11, 2018
ದೇಶದ ಅತ್ಯಂತ ಹೆಚ್ಚು ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಇಡುಕ್ಕೆ ಅಣೆಕಟ್ಟೆಗೆ ನೀರಿನ ಒಳಹರಿವು ಹೆಚ್ಚಾಗುತ್ತಲೇ ಇದ್ದು, ಅಪಾಯದ ಮಟ್ಟ ಮೀರಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಐದು ಗೇಟ್‌ಗಳನ್ನು ತೆರೆಯಲಾಗಿದ್ದು, ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಅಲ್ಲದೇ, ಕೇರಳದಲ್ಲಿ ಸುಮಾರು ಆರಕ್ಕೂ ಅಧಿಕ ಅಣೆಕಟ್ಟೆಗಳಿಂದ ಏಕಕಾಲದಲ್ಲಿ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ.
Kerala: Latest visuals of Periyar river. 5 shutters of #IdukkiDam were opened yesterday. The water level of the dam, reported at 6 am today, is 2401.16 feet with its full reserve level being 2403 feet. pic.twitter.com/nyzyYDNxCa
— ANI (@ANI) August 11, 2018
ಇಡುಕ್ಕಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಭಾರೀ ಮಳೆಯಿಂದಾಗಿ ನದಿ ನೀರು ಹೆಚ್ಚಾದ ಪರಿಣಾಮ ಇಡುಕ್ಕಿ ಡ್ಯಾಂನ ಎಲ್ಲಾ ಗೇಟುಗಳನ್ನೂ ತೆರೆಯಲಾಗಿದೆ. 40 ವರ್ಷಗಳಲ್ಲೇ ಮೊದಲ ಬಾರಿ ಇಡುಕ್ಕಿ ಜಲಾಶಯದ ಎಲ್ಲಾ ಗೇಟ್ ಗಳನ್ನು ತೆರೆಯಲಾಗಿದೆ. ಅತಿಯಾದ ನೀರು ಹರಿದುಬಂದ ಹಿನ್ನೆಲೆಯಲ್ಲಿ ಮನೆಗಳು, ಗದ್ದೆಗಳು ಮುಳುಗಡೆಯಾಗಿವೆ. ಹಲವು ಪ್ರದೇಶಗಳಲ್ಲಿ ರಸ್ತೆಗಳಿಗೆ ಹಾನಿಯಾಗಿರುವ ಕಾರಣ ಪ್ರವಾಸಿಗರಿಗೂ ಎಚ್ಚರಿಕೆ ನೀಡಲಾಗಿದೆ. ಇಡುಕ್ಕಿ, ಎರ್ನಾಕುಲಂ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಹಾನಿಯಾಗಿದೆ ಎನ್ನಲಾಗಿದೆ.
ಕೇರಳ ಮುಖ್ಯಮಂತ್ರಿ ಪಿನಾರಯಿ ವಿಜಯನ್ ಅವರು ಪ್ರವಾಹಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅದರೆ, ಇಡುಕ್ಕಿಯಲ್ಲಿ ಇಳಿಯಬೇಕಿದ್ದ ಅವರ ಹೆಲಿಕಾಪ್ಟರ್ ವಯನಾಡಿನಲ್ಲಿ ಇಳಿದಿದೆ.
Kerala CM Pinarayi Vijayan conducted aerial survey of flood affected areas of the state, leader of Opposition Ramesh Chennithala is also with him. They were supposed to land at Kattappana in Idukki but were forced to move to Wayanad due to bad weather conditions. #KeralaFloods pic.twitter.com/TtbVF4mSqW
— ANI (@ANI) August 11, 2018
ವೈಮಾನಿಕ ಸಮೀಕ್ಷೆ ನಡೆಸಿ ನಂತರ ಇಡುಕ್ಕಿಯಲ್ಲಿಯೇ ಅಧಿಕಾರಿಗಳ, ಸಚಿವರ ಸಭೆ ನಡೆಸಲು ಕೇರಳ ಸಿಎಂ ಉದ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಮೊದಲು ಎರ್ನಾಕುಲಂ, ಅಲೆಪ್ಪುವಾ, ವಯನಾಡ್, ಕೋಯಿಕ್ಕೋಡ್, ಮಲ್ಲಪುರಂ ಭಾಗದಲ್ಲಿ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಾಲ ಮತ್ತು ಕಂದಾಯ ಸಚಿವ ಚಂದ್ರಶೇಖರನ್ ಅವರೊಂದಿಗೆ ಸಿಎಂ ವೈಮಾನಿಕ ಸಮೀಕ್ಷೆ ಆರಂಭಿಸಿದ್ದರು. ಇದನ್ನು ಮುಗಿಸಿದ ನಂತರ ಇಡುಕ್ಕಿಯ ಕಟ್ಟಪ್ಪಾನ ಎಂಬಲ್ಲಿ ಇಳಿಯಬೇಕಿದ್ದ ಸಿಎಂ ಅವರಿದ್ದ ಹೆಲಿಕಾಪ್ಟರ್ ವಯನಾಡಿನಲ್ಲಿ ಇಳಿದಿದೆ.
ಮಳೆ ಇನ್ನೂ ಸಹ ಭಾರೀ ಪ್ರಮಾಣದಲ್ಲಿ ಮುಂದುವರೆದಿದ್ದು, ಸಂಕಷ್ಟದಲ್ಲಿ ಸಿಲುಕಿರುವವ ರಕ್ಷಣೆಗಾಗಿ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸೇನೆ, ನೌಕಾ ದಳ, ಕರಾವಳಿ ಭದ್ರತಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ರಕ್ಷಣೆಗಾಗಿ ನಿಯೋಜನೆ ಮಾಡಲಾಗಿದ್ದು, ಕಾರ್ಯಾಚರಣೆ ನಡೆದಿದೆ.
Discussion about this post