ತಿರುವನಂತಪುರಂ: ದೇವರನಾಡು ಕೇರಳದಲ್ಲಿ ಉಂಟಾಗಿರುವ ತೀವ್ರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 39ಕ್ಕೇರಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ.
ಕುಂಭದ್ರೋಣ ಮಳೆಯ ಪರಿಣಾಮ ಹಲವೆಡೆ ಭೂಕುಸಿತ ಉಂಟಾಗಿದ್ದು, ರಸ್ತೆ ಸಂಚಾರಕ್ಕೂ ಸಹ ಅಡಚಣೆ ಉಂಟಾಗಿದೆ.
ಇನ್ನು, ಈ ಕುರಿತಂತೆ ಮಾತನಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಒಟ್ಟು 8316 ಕೋಟಿ ರೂ. ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ನೀಡುವ ಪರಿಹಾರದ ಜೊತೆಯಲ್ಲಿ ಹೆಚ್ಚುವರಿಯಾಗಿ 400 ಕೋಟಿ ರೂ. ಸಹಾಯ ನೀಡಬೇಕು ಎಂದು ಕೋರಿದ್ದಾರೆ.
ಅಲ್ಲದೇ, ಈ ಪ್ರಾಕೃತಿಕ ಘಟನೆಯಲ್ಲಿ ಅಪರೂಪದ ತೀವ್ರತೆ ಎಂದು ಪರಿಗಣಿಸಿ, ಕೇಂದ್ರ ವಿಶೇಷ ಸಹಕಾರ ಹಾಗೂ ಅನುದಾನವನ್ನು ನೀಡಬೇಕು ಎಂದು ಕೋರಿದ್ದಾರೆ.
Discussion about this post