ಬೆಂಗಳೂರು: ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತಕ್ಕೆ ಜಾಗತಿಕ ಮನ್ನಣೆ ಹೆಚ್ಚಾಗಿರುವ ಜೊತೆಯಲ್ಲಿ, ನಮ್ಮ ದೇಶದ ವಿಶ್ವಗುರುವಾಗುತ್ತಿರುವುದು ದೇಶವಾಸಿಗಳಿಗೆ ಹೆಮ್ಮೆಯ ವಿಚಾರವಾಗಿದೆ.
ಈಗ ಹಿಂದೂ ಧರ್ಮ ಹಾಗೂ ದೇವತೆಗಳಿಗೆ ಜಪಾನ್ ಸಹ ಮಾರುಹೋಗಿದ್ದು, ಅಲ್ಲಿನ ಪಟ್ಟಣವೊಂದಕ್ಕೆ ಹಿಂದೂ ದೇವಿ ಲಕ್ಷ್ಮೀ ಹೆಸರನ್ನು ಇಡಲಾಗಿದೆ.
ಒಂದೆಡೆ ಭಾರತ ವಿಶ್ವಗುರುವಾಗುತ್ತಿದ್ದರೆ, ಇನ್ನೊಂದೆಡೆ ಕೆಲವು ಯುವ ಮಂದಿ ಇಂದಿಗೂ ಸಹ ವಿದೇಶಿ ಸಂಸ್ಕೃತಿಗೆ ಮಾರು ಹೋಗಿ, ಹಿಂದೂ ಸಾಂಪ್ರದಾಯಿಕ ಹೆಸರುಗಳನ್ನು ಬಳಸುವುದು ಹಾಗೂ ಹಿಂದೂ ಸಂಸ್ಕೃತಿಯನ್ನು ಪಾಲನೆ ಮಾಡುವುದು ಅವಮಾನಕರ ಎಂಬ ಸ್ವಾರ್ಥ ಮನಃಸ್ಥಿತಿಯಲ್ಲಿದ್ದಾರೆ. ಇದರ ನಡುವೆಯೇ ಜಪಾನ್‌ನಲ್ಲಿ ನಡೆದಿರುವ ಬೆಳವಣಿಗೆ ಸಮಸ್ತ ಹಿಂದೂಗಳಿಗೆ ಹೆಮ್ಮೆಯ ಸಂಗತಿಯಾಗಿದೆ.
ಜಪಾನ್ ರಾಜಧಾನಿ ಟೋಕಿಯೋದಲ್ಲಿರುವ ಒಂದು ನಗರಕ್ಕೆ ಕಿಜಿಜೋ ಎಂದು ಹೆಸರಿಡಲಾಗಿದೆ. ಕಿಜಿಜೋ ಎಂದರೆ ಲಕ್ಷ್ಮೀ ದೇವಿಯ ದೇಗುಲ ಎಂದರ್ಥ.
ಈ ಕುರಿತಂತೆ ಮಾತನಾಡಿರುವ ಜಪಾನ್ ಕಾನ್ಸುಲ್ ಜನರಲ್ ಟಕಾಯುಕಿ ಕಿಟಗಾವಾ, ತ್ರಿಮೂರ್ತಿಗಳ ಪೈಕಿ ಒಬ್ಬರಾಗಿರುವ ಭಗವಂತ ವಿಷ್ಣುವಿನ ಪತ್ನಿ ಲಕ್ಷ್ಮೀ ದೇವಿ. ಲಕ್ಷ್ಮೀ ದೇವಿಯ ಹೆಸರನ್ನು ಟೋಕಿಯಾದ ಪಟ್ಟಣಕ್ಕೆ ಇಡಲಾಗಿದೆ ಎಂದಿದ್ದಾರೆ.
ಜಪಾನ್‌ನಲ್ಲಿ ಹಿಂದೂ ದೇವತೆಗಳ ದೇವಾಲಯಗಳು ಬಹಳಷ್ಟಿದ್ದು, ತಮ್ಮ ದೇಶದಲ್ಲಿ ಭಾರತ ಹಾಗೂ ಹಿಂದೂ ಪ್ರಭಾವ ಅಧಿಕವಾಗಿಯೇ ಇದ್ದು, ಈ ಬಗ್ಗೆ ನಮಗೆ ಸಂತೋಷವಿದೆ ಎಂದಿದ್ದಾರೆ.
ತೀರಾ ಸ್ವಾರಸ್ಯಕರವಾದ ವಿಚಾರವೆಂದರೆ, ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಪದವಿ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಟಕಾಯುಕಿ, ಸೂರ್ಯ ಉದಯ ನಾಡು ಜಪಾನ್ ನಲ್ಲಿ ಪೂಜಿಸಲ್ಪಡುವ ಹಲವು ಹಿಂದೂ ದೇವತೆಗಳಿವೆ. ಶತಮಾನಗಳಿಂದ ನಾವು ಹಿಂದೂ ದೇವರುಗಳನ್ನು ಪೂಜಿಸುತ್ತಾ ಬಂದಿದ್ದೇವೆ ಎಂದಿದ್ದು ಪ್ರಶಂಸೆಗೆ ಪಾತ್ರವಾಯಿತು.
Discussion about this post