ನವದೆಹಲಿ: ಕಳೆದ ಹಲವು ದಿನಗಳಿಂದ ಅನಾರೋಗ್ಯ ಹಾಗೂ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಕ್ಷೀಣಿಸಿದೆ.
ಈ ಕುರಿತಂತೆ ಎಐಐಎಂಎಸ್ ಆಸ್ಪತ್ರೆ ಅಧಿಕೃತ ಪ್ರಕಟಣೆ ನೀಡಿದ್ದು, ಕಳೆದ 24 ಗಂಟೆಗಳಿಂದ ವಾಜಪೇಯಿ ಅವರ ಆರೋಗ್ಯ ಗಂಭೀರವಾಗಿದ್ದು, ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಮಧುಮೇಹ, ಮೂತ್ರದ ಸೋಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ವಾಜಪೇಯಿ ಏಮ್ಸ್ ಗೆ ದಾಖಲಾಗಿದ್ದರು.
ಕಳೆದ ಒಂದು ದಿನದಿಂದ ವಾಜಪೇಯಿ ಅವರ ಆರೋಗ್ಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
Prime Minister Narendra Modi leaves from All India Institutes of Medical Sciences (AIIMS) after meeting former prime minister Atal Bihari Vajpayee. #Delhi pic.twitter.com/9YDeoOZ78W
— ANI (@ANI) August 15, 2018
ಮೋದಿ ಏಮ್ಸ್ ಭೇಟಿಗೆ ಮುನ್ನ ಕೇಂದ್ರ ಟೆಕ್ಸ್ ಟೈಲ್ಸ್ ಸಚಿವೆ ಸ್ಮೃತಿ ಇರಾನಿ ಕೂಡ ಏಮ್ಸ್ ಗೆ ಭೇಟಿ ಕೊಟ್ಟಿದ್ದಾರೆ.
Union Minister Suresh Prabhu reaches All India Institute of Medical Sciences (AIIMS) to meet former Prime Minister Atal Bihari Vajpayee. #Delhi pic.twitter.com/7EXmsLguYM
— ANI (@ANI) August 15, 2018
ಇನ್ನು ಕೇಂದ್ರ ಸಚಿವರಾದ ಅಶ್ವಿನ್ ಕುಮಾರ್, ಜಿತೇಂದ್ರ ಸಿಂಗ್, ಹರ್ಷವರ್ಧನ್, ಸುರೇಶ್ ಪ್ರಭು ಸೇರಿದಂತೆ ಪ್ರಮುಖರು ಸಾಲು ಸಾಲಾಗಿ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಪ್ರಧಾನಿಗಳ ಆರೋಗ್ಯ ವಿಚಾರಿಸಿದರು.
Union Minister Harsh Vardhan leaves from All India Institute of Medical Sciences (AIIMS) after meeting former Prime Minister Atal Bihari Vajpayee. #Delhi pic.twitter.com/clwguOHmwE
— ANI (@ANI) August 15, 2018
Union Minister Jitendra Singh leaves All India Institute of Medical Sciences (AIIMS) where former Prime Minister Atal Bihari Vajpayee is admitted. Vajpayee’s condition is critical & he is on life support system. #Delhi pic.twitter.com/KXWiFa9IpS
— ANI (@ANI) August 15, 2018
Discussion about this post