No Result
View All Result
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ
English Articles

Darling Krishna, Milana Nagaraj ’s Love Mocktail 3 Premieres This 21st on Zee Kannada

by ಕಲ್ಪ ನ್ಯೂಸ್
June 19, 2026
0

Kalpa Media House  |  Bengaluru  | Staying committed to showcasing stories that connect with viewers of all generations, Zee Kannada...

Read moreDetails
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

Periodicity of Bhubaneswar–Yesvantpur Special Train Extended

June 19, 2026
Blood Donation Camp Successfully Organised at Mysuru Division

Blood Donation Camp Successfully Organised at Mysuru Division

June 16, 2026
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
  • Advertise With Us
  • Grievances
  • About Us
  • Contact Us
Sunday, June 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಯಕ್ಷಗಾನದ ಧ್ರುವತಾರೆ ಅಶ್ವಿನಿ ಕೊಂಡದಕುಳಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 6, 2018
in Special Articles
0
Share on FacebookShare on TwitterShare on WhatsApp

ಕರ್ನಾಟಕ ಎನ್ನುವುದು ಕೇವಲ ಒಂದು ರಾಜ್ಯವಲ್ಲ. ಹಲವು ಕವಿಗಳ, ಪ್ರತಿಭಾವಂತರ, ಮಹಾನ್ ಸಾಧಕರ ನೆಲೆವೀಡು. ಅಂತಹ ಸಾಧಕರಲ್ಲಿ ಯಕ್ಷಗಾನ ಕಲೆಯ ಧ್ರುವತಾರೆ, ಸಾಧಕಿ ಅಶ್ವಿನಿ ಕೊಂಡದಕುಳಿಯವರ ಹೆಸರು ಪ್ರಮುಖ.

ತಂದೆಯ ಲಕ್ಷಣಗಳು ಮಕ್ಕಳಿಗೆ ಬರುತ್ತದೆ ಎನ್ನುವ ಮಾತು ಇವರ ವಿಚಾರದಲ್ಲಿ ಅಕ್ಷರಶಃ ಸತ್ಯವಾಯಿತು. ತಂದೆಯಂತೆ ಯಕ್ಷಗಾನ ಕಲೆಯು ಇವರ ರಕ್ತದಲ್ಲೇ ಬಂದಿತ್ತು. ಆ ರಕ್ತಗತವಾಗಿ ಬಂದ ಕಲೆ ಹೆಮ್ಮರವಾಗಿ ಇಂದು ಬೆಳೆದಿದೆ. ತಂದೆಯಂತೆ ಮಹಾನ್ ಕಲಾವಿದರಾಗಿ ಇವರು ಗುರುತಿಸಿಕೊಂಡಿದ್ದಾರೆ.

ಯಕ್ಷಗಾನ ಕಲೆಯ ಮೇರು ಕಲಾವಿದರೆನಿಸಿದ ಶ್ರೀ ಕೊಂಡದಕುಳಿ ರಾಮಚಂದ್ರ ಮತ್ತು ಶ್ರೀಮತಿ ಪೂರ್ಣಿಮಾ ಹೆಗಡೆಯವರ ಮೊದಲ ಮಗಳಾಗಿ 1993ರ ಮಾರ್ಚ್ 25ರಂದು ಅಶ್ವಿನಿ ಜನಿಸಿದರು.

ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಕೇವಲ ಏಳನೆಯ ವಯಸ್ಸಿಗೇ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿ ಪ್ರವೇಶಿಸಿ, ಬಾಲಚಂದ್ರಹಾಸ ಪಾತ್ರದಲ್ಲಿ ಮಿಂಚಿದವರು.

ಮುಂಬೈ ಮಹಾ ನಗರದಲ್ಲಿ ಕೊಂಡದಕುಳಿ ಮೇಳ ಬಂದಾಗ ಅದರಲ್ಲಿ ತಂದೆಯವರ ಜೊತೆಗೆ ಲೋಹಿತಾಶ್ವ ಪಾತ್ರದಲ್ಲಿ ಮಿಂಚು ಹರಿಸಿದ ಪ್ರತಿಭಾವಂತರು. ಇದು ಮುಂಬೈ ಜನರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

ಇವರದು ಬಹುಮುಖ ಪ್ರತಿಭೆ. ನಾಟಕ, ಚಿತ್ರಕಲೆ, ಸಂಗೀತ, ಭರತನಾಟ್ಯ, ಓಡಿಸ್ಸಿ ಮೊದಲಾದಗಳನ್ನು ಅಧ್ಯಯನ ಮಾಡಿದರು. ಅಷ್ಟೇ ಅಲ್ಲದೆ ಭಾಗವತಿಕೆಯಲ್ಲೂ ಸಹ ಇವರು ಸಿದ್ಧಹಸ್ತರು. ತೆಂಕುತಿಟ್ಟು ಅಭ್ಯಾಸ ಮಾಡಿ ಪ್ರದರ್ಶನ ಕೊಟ್ಟ ಕೀರ್ತಿ ಇವರದು. ಕೇವಲ ರಾಜ್ಯದ (30)ಹದಿನೇಳು ಜಿಲ್ಲೆಯಷ್ಟೇ ಅಲ್ಲದೆ ದೇಶದ ನಗರಗಳಲ್ಲಿ ಮಾತ್ರವಲ್ಲದೆ ವಿದೇಶಗಳಾದ ದುಬೈ, ಅಭುದಾಭಿ, ಬೆಹೆರೈನ್, ಚೀನಾ, ಥೈಲ್ಯಾಂಡ್ ಗಳಲ್ಲಿ ಯಕ್ಷಗಾನ ಪ್ರದರ್ಶನ ಮಾಡಿ ಭಾರತದ ಕೀರ್ತಿ ಪತಾಕೆ ಹಾರಿಸಿದವರು. ಆಳ್ವಾಸ್ ವತಿಯಿಂದ ಸಾದರಗೊಂಡ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಇವರು ಪ್ರಮುಖ ಭೂಮಿಕೆಯಲ್ಲಿ ನಟಿಸಿದ ನಾಟಕ ಪ್ರಥಮ ಸ್ಥಾನವನ್ನು ಪಡೆದಿತ್ತು.

ಅಂತರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಚೀನಾದಲ್ಲಿ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ ಇವರಿಗಿದೆ. ಚಿಕ್ಕ ವಯಸ್ಸಿನಲ್ಲೇ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಇವರು ಈ ಪದವಿಗೇರಿದ ಮೊದಲ ಮಹಿಳೆಯೆಂಬ ಖ್ಯಾತಿ ಪಡೆದಿದ್ದಾರೆ. ಇವರ ಸಾಧನೆಗೆ ಇವರನ್ನು ಅರಸಿ ಬಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ರಾಜ್ಯದ ಯುವ ಪ್ರತಿಭಾ ರತ್ನ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಹಾಗೂ ದುಬೈ ಕನ್ನಡ ಸಂಘದಿಂದ ಸನ್ಮಾನ ಪಡೆದಿದ್ದಾರೆ.

ಯಾವುದೇ ಪಾತ್ರಕ್ಕೆ ಸಮರ್ಥವಾಗಿ ಜೀವ ತುಂಬಬಲ್ಲ ಬಹುಮುಖ ಪ್ರತಿಭೆ ಇವರದು. ಇವರ ಶ್ರೀಕೃಷ್ಣ, ಅರ್ಜುನ ಮೊದಲಾದ ಪಾತ್ರಗಳು ಜನಮಾನಸದಲ್ಲಿ ನಿಂತಿವೆ.

ಆರತಿ ಬೆಳಗಲು ಪುತ್ರಿ ಬೇಕು ಕೀರ್ತಿ ಬೆಳಗಲು ಪುತ್ರ ಬೇಕು ಎಂಬ ಮಾತನ್ನು ತಲೆ ಕೆಳಗೆ ಮಾಡಿ ಮಗಳು ಕೂಡ ಕೀರ್ತಿ ಬೆಳಗಬಹುದು ಎಂಬುದನ್ನು ತೋರಿಸಿ ಕೊಟ್ಟವರು ಇವರು. ಇಂತಹವರನ್ನು ನಾವು ಸನ್ಮಾನ ಮಾಡುವದು ನಮಗೆ ಅತ್ಯಂತ ಸಂತಸದ ವಿಚಾರವಾಗಿದೆ.

ನಿಮ್ಮನ್ನು ಕಲಾ ಶಾರದೆಯ ಪ್ರತಿರೂಪ ಎಂದರೆ ತಪ್ಪಾಗಲಾರದು. ನಿಮ್ಮ ಕಲಾ ಸಾಧನೆ ಹೀಗೆ ಮುಂದುವರೆಯಲಿ. ಮುಂದಿನ ಕಲಾ ಜೀವನ ಯಶಸ್ಸಿನ ಉತ್ತಂಗಕ್ಕೇರಲಿ ಎಂದು ಕಲಾರಾಧಕರಾದ ನಾವು ಕಲಾ ದೇವಿಯನ್ನು ಬೇಡುತ್ತೇವೆ.

ಲೇಖನ ಮತ್ತು ಚಿತ್ರಕೃಪೆ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

Tags: Ashwini KondadakuliBharatanatyaDakshina KannadaMangaloreMumbaiYakshagana
Share255Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಬೆಂಗಾಳಿ ನಟಿ ಪಾಯಲ್ ಚಕ್ರವರ್ತಿ ಶವವಾಗಿ ಪತ್ತೆ

Next Post

ನಾಲ್ಕು ಸಿಎಂಗಳನ್ನು ಏಕಕಾಲಕ್ಕೆ ಕಂಡ ರಾಜ್ಯ ಕರ್ನಾಟಕ ಮಾತ್ರ! ಯಾಕೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನಾಲ್ಕು ಸಿಎಂಗಳನ್ನು ಏಕಕಾಲಕ್ಕೆ ಕಂಡ ರಾಜ್ಯ ಕರ್ನಾಟಕ ಮಾತ್ರ! ಯಾಕೆ?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಪಶು ವೈದ್ಯಕೀಯ ಕಾಲೇಜುಗಳಿಗೆ ಖಾಸಗಿ ಪ್ರವೇಶ ವಿರೋಧ: ಶಾಸಕರಿಗೆ ವಿದ್ಯಾರ್ಥಿಗಳ ಮನವಿ

ಪಶು ವೈದ್ಯಕೀಯ ಕಾಲೇಜುಗಳಿಗೆ ಖಾಸಗಿ ಪ್ರವೇಶ ವಿರೋಧ: ಶಾಸಕರಿಗೆ ವಿದ್ಯಾರ್ಥಿಗಳ ಮನವಿ

June 20, 2026
ಶಿವಮೊಗ್ಗ | ವಿವೇಕಾನಂದ ಬಡಾವಣೆಯಲ್ಲಿ ಪೊಲೀಸ್ ಚೌಕಿ ನಿರ್ಮಾಣಕ್ಕೆ ಆಗ್ರಹ | ಕಾರಣವೇನು?

ಭದ್ರಾವತಿ | ತಂದೆ ವಿರುದ್ಧ 112 ಪೊಲೀಸರಿಗೆ ಕರೆ ಮಾಡಿದ ಮಗ | ಏನಾಯ್ತು?

June 20, 2026
Cymatic Carnatic

Cymatic Carnatic-see the sound of music, a program with a novel vision

June 20, 2026
ಇನ್‌ಸ್ಟಾಗ್ರಾಮ್–ಟೆಲಿಗ್ರಾಂ ಟ್ರೇಡಿಂಗ್ ಮೋಸ: ರೈತ ಯುವಕನಿಂದ ₹2.05 ಕೋಟಿ ವಂಚನೆ

ಇನ್‌ಸ್ಟಾಗ್ರಾಮ್–ಟೆಲಿಗ್ರಾಂ ಟ್ರೇಡಿಂಗ್ ಮೋಸ: ರೈತ ಯುವಕನಿಂದ ₹2.05 ಕೋಟಿ ವಂಚನೆ

June 20, 2026
Mysore - Shivamogga - Talguppa Train

Big Good News for Mysuru–Madar Junction Train Passengers

June 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL