ಭೋಪಾಲ್: ದೇಶದಲ್ಲಿ 125 ವರ್ಷದ ಹಳೆಯ ಪಕ್ಷವಾದ ಕಾಂಗ್ರೆಸ್ ಇಂದಿನ ಪರಿಸ್ಥಿತಿಯಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ಏಕೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕರ್ತ ಮಹಾಕುಂಭ ಸಮಾವೇಶದಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
125 ವರ್ಷದ ಪಕ್ಷ ಈಗ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಅವರು ಆತ್ಮಾವಲೋಕನ ಮಾಡಿಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
विश्व में भाजपा ही एक ऐसी पार्टी है जिस पार्टी की विचारधारा को एकात्म मानववाद के रूप में जाना जाता है : पीएम मोदी #KaryakartaMahakumbh pic.twitter.com/TY2Pj47Drk
— BJP (@BJP4India) September 25, 2018
ವೋಟ್ ಬ್ಯಾಂಕ್ ರಾಜಕಾರಣ ಭಾರತವನ್ನು ಗೆದ್ದಲು ಹುಳುವಿನಂತೆ ಕಿತ್ತು ತಿನ್ನುತ್ತಿದೆ. ಇಂದು ವೋಟ್ ಬ್ಯಾಂಕ್ ರಾಜಕೀಯದ ಬದಲಾಗಿ ಅಭಿವೃದ್ಧಿ ಬಗ್ಗೆ ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಪಕ್ಷಗಳೊಂದಿಗೆ ಮೈತ್ರಿ ಸಾಧಿಸಲು ಕಾಂಗ್ರೆಸ್ ವಿಫಲವಾಗಿದ್ದು, ತನ್ನ ಅಸ್ಥಿತ್ವ ಉಳಿಸಿಕೊಳ್ಳುವ ಸಲುವಾಗಿ ಮೈತ್ರಿ ಮಾಡಿಕೊಳ್ಳಲು ಸಣ್ಣ ಪುಟ್ಟ ಪಕ್ಷಗಳನ್ನೂ ಸಹ ಅಂಗಲಾಚುವ ಸ್ಥಿತಿಗೆ ಬಂದು ತಲುಪಿದೆ. ವಿದೇಶಗಳಲ್ಲಿಯೂ ಸಹ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಭಾರತದ ಪ್ರಧಾನಿ ಯಾರು ಎಂಬುದನ್ನುವಿಶ್ವ ನಿರ್ಧರಿಸುತ್ತಿದೆಯೇ ಎಂದು ಕಾಂಗ್ರೆಸ್ ನಡೆಯನ್ನು ತೀಕ್ಷ್ಣವಾಗಿ ಕುಟುಕಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ ಕೇವಲ ಭರವಸೆ ಅಲ್ಲ. ಇದು ಕೋಟ್ಯಂತರ ಭಾರತೀಯರನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿಸಿದ ಯೋಜನೆಯಾಗಿದ್ದು, ಇದು ಎಲ್ಲರ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಮಹತ್ವಾಕಾಂಕ್ಷೆಯ ಯೋಜನೆಯ ಸ್ಲೋಗನ್ ಆಗಿದೆ ಎಂದರು.
ವೋಟ್ ಬ್ಯಾಂಕ್ ರಾಜಕೀಯ ಭಾರತದಲ್ಲಿ ಗೆದ್ದಲು ಹುಳುವಿನಂತೆ ಕಿತ್ತು ತಿನ್ನುತ್ತಿದ್ದು, ಇಂತಹ ರಾಜಕೀಯವನ್ನು ಅಂತ್ಯಗೊಳಿಸುವುದು ಬಿಜೆಪಿಯ ಕರ್ತವ್ಯವಾಗಿದೆ ಎಂದರು.
Discussion about this post