ಶಿವಮೊಗ್ಗ: ಸುಪ್ರೀಂ ಕೋರ್ಟ್ ನ ಅಂಗಳದಲ್ಲಿರುವ ಅಯೋಧ್ಯ ಶ್ರೀ ರಾಮ ಮಂದಿರ ನಿರ್ಮಾಣ ಜನರ ಅಪೇಕ್ಷೆ ಅಂತೆ ತೀರ್ಮಾನಗೊಳ್ಳಲಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಜೈಲ್ ಅಂಗಳದಲ್ಲಿ ದಸರ ಮಹೋತ್ಸವದ ಪೂರ್ವಭಾವಿ ಸಿದ್ದತೆಗಳನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯ ಪ್ರಕರಣವಬ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಭಗವಾನ್ ಶ್ರೀರಾಮ ಎಲ್ಲಿ ಹುಟ್ಟಿದ್ದಾನೋ ಅದೇ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ನಡೆಸಲು ನ್ಯಾಯಾಲಯ ಅನುವು ಮಾಡಿಕೊಡಲಿದೆ ಎಂದರು.
ಇದು ಕೇವಲ ದೇಶದ ಭಾವನೆಯಲ್ಲ. ಪ್ರಪಂಚದಲ್ಲಿರುವ ಎಲ್ಲಾರ ಭಾವನೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂಬ ಅಪೇಕ್ಷೆ ಇದೆ. ಅದರಂತೆ ನಡೆಯಲಿದೆ ಎಂದರು.
ಅಯೋಧ್ಯೆ ವಿಷಯವನ್ನು ತಿರಸ್ಕೃತ ಮನೋಭಾವನೆಯಿಂದ ನೋಡಿದವರು ಉದ್ದಾರವಾಗಿಲ್ಲ. ಅಯೋಧ್ಯೆ ವಿಷಯವನ್ನು ತಿರಸ್ಕೃತ ಮನೋಭಾವದಿಂದ ನೋಡುವವರು ಉದ್ದಾರವಾಗಿಲ್ಲ ಎಂದರು
Discussion about this post