ನವದೆಹಲಿ: ವಿಶ್ವಸಂಸ್ಥೆಯ ಅತ್ಯುನ್ನತ ಗೌರವ ಪುರಸ್ಕಾರ ಚಾಂಪಿಯನ್ಸ್ ಆಫ್ ದಿ ಅರ್ಥ್‍ಗೆ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಶಸ್ತಿಯನ್ನು ನವದೆಹಲಿಯಲ್ಲಿ ಸ್ವೀಕರಿಸಿದರು.
Congratulations to the Champion of the Earth @narendramodi, Prime Minister of India, recognized for his political leadership: pioneering work in championing the International Solar Alliance and eliminating all single-use plastic in India by 2022. #EarthChamps pic.twitter.com/8tMDhF8MAG
— UN Environment (@UNEnvironment) October 3, 2018
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಅಂಟೋನಿಯೋ ಗುಟೇರಸ್ ಅವರು ಮೋದಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು.
Those who bet on the grey economy will have a grey future. The green economy is the right approach, not only for the environment but also from the perspective of development, @antonioguterres on presenting the Champions of the Earth award to @narendramodi pic.twitter.com/rJk5mNY10K
— UN Spokesperson (@UN_Spokesperson) October 3, 2018
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, ಈ ಪ್ರಶಸ್ತಿಯನ್ನು ರಾಷ್ಟ್ರದ ಜನತೆಗೆ ಅರ್ಪಿಸುತ್ತೇನೆ. ಹವಾಮಾನ ಮತ್ತು ವಿಪತ್ತುಗಳು ನೇರವಾಗಿ ಸಂಸ್ಕøತಿಗೆ ಸಂಬಂಧಿಸಿವೆ. ವಾತಾವರಣವು ಸಂಸ್ಕøತಿಯ ಕೇಂದ್ರವಾಗಿದ್ದರೆ, ವಿಪತ್ತನ್ನು ತಡೆಗಟ್ಟಲು ಸಾಧ್ಯವಿಲ್ಲ. ನಾನು ಸಬ್ ಕಾ ಸಾಥ್ ಎಂದು ಹೇಳಿದಾಗ, ನಾನು ಅದರಲ್ಲಿ ಸಂಸ್ಕøತಿಯನ್ನು ಕೂಡಾ ಸೇರಿಸಿದ್ದೇನೆ ಎಂದರು.
.@UN Secy. Gen @antonioguterres presents #ChampionsOfTheEarth award, @UN’s highest environmental honour, to PM @narendramodi for his pioneering work in championing the #InternationalSolarAlliance and promoting new areas of levels of cooperation on environmental action pic.twitter.com/9bSg4hKxpT
— PIB India (@PIB_India) October 3, 2018
ಯಾಕೆ ಪ್ರಧಾನಿ ಮೋದಿ ಈ ಪ್ರಶಸ್ತಿಗೆ ಆಯ್ಕೆಯಾದರು?
ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ನೀಡುವ ಅತ್ಯುನ್ನತ ಗೌರವ ಪುರಸ್ಕಾರವನ್ನಾಗಿ ಚಾಂಪಿಯನ್ಸ್ ಆಫ್ ದಿ ಅರ್ಥ್ ಅವಾರ್ಡ್‍ನ್ನು ಆರು ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡುತ್ತದೆ.
ಭಾರತದಲ್ಲಿ 2022ರ ವೇಳೆಗೆ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಗಾಗಿ ಕೈಗೊಂಡಿರುವ ಕ್ರಮಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌರಶಕ್ತಿ ರಾಷ್ಟ್ರಗಳ ಮೈತ್ರಿಯಲ್ಲಿನ ನಾಯಕತ್ವವನ್ನು ಪರಿಗಣಿಸಿ ಮೋದಿ ಅವರನ್ನು ಈ ಗೌರವಕ್ಕೆ ವಿಶ್ವಸಂಸ್ಥೆ ಆಯ್ಕೆ ಮಾಡಿದೆ.
Discussion about this post