ಭದ್ರಾವತಿ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೆಯ ವರ್ಷದ ಸವಿನೆನಪಿಗಾಗಿ ಸಾಗುತ್ತಿರುವ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ನಾಳೆ ಭದ್ರಾವತಿಗೆ ಆಗಮಿಸಲಿದೆ.
ಅ.4ರ ನಾಳೆ 9.15ಕ್ಕೆ ಹುತ್ತಾ ಕಾಲೋನಿಯಿಂದ ಹೊರಡುವ ರಥದ ಮೆರವಣಿಗೆ ಹಾಲಪ್ಪ ಸರ್ಕಲ್ ಮಾರ್ಗವಾಗಿ ರಂಗಪ್ಪ ಸರ್ಕಲ್‌ನಲ್ಲಿ ಕೊನೆಗೊಳ್ಳಲಿದೆ.
ಬೃಹತ್ ಶೋಭಾಯಾತ್ರೆಯಲ್ಲಿ ಹಿಂದೂಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಸಂಘ ಸಂಸ್ಥೆಗಳು, ತಾಲೂಕಿನ ಹಿರಿಯ ನಾಗರಿಕರು ಮಹಿಳೆಯರು ಮತ್ತು ಯುವಕರು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಜರಂಗದಳ , ಹಿಂದೂ ಪಡೆ, ಕೇಸರಿ ಪಡೆ, ಭಗತ್ ಪಡೆ, ವಿಶ್ವ ಹಿಂದೂ ಪರಿಷದ್, ರಾಷ್ಟ್ರೀಯ ಸ್ವಯಂ ಸೇವಾ ಸಂಘ, ಪತಂಜಲಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಕಾರವಿರುತ್ತದೆ ಎಂದು ಭದ್ರಾವತಿ ಯುವಾ ಬ್ರಿಗೇಡ್ ತಿಳಿಸಿದೆ.
















