ಭದ್ರಾವತಿ: ಭಾವಸಾರ ವಿಷನ್ ಇಂಡಿಯಾ ಸಂಸ್ಥೆಯು ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ವಿಷನ್ ಸದಸ್ಯರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾವಸಾರ ವಿಷನ್ ಹಾಗೂ ಭಾವಸಾರ ಟೌನ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಟಿ.ಎಸ್. ದುಗ್ಗೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಡಿ.ಕೆ. ರಾಘವೇಂದ್ರ, ಡಾ.ಶಿವಪ್ರಕಾಶ್, ಡಿ.ಟಿ. ಶ್ರೀಧರ್, ಆರ್. ರಮೇಶ್, ಪತ್ರಕರ್ತ ರವೀಂದ್ರನಾಥ್(ಬ್ರದರ್), ಅಮಿತ್ ಮುಂತಾದವರು ವಿಷನ್ ನಡೆದು ಬಂದ ದಾರಿ ಕುರಿತು ಮೆಲಕು ಹಾಕಿ ದುಗ್ಗೇಶ್ ರವರ ಶ್ರಮ ಮತ್ತು ಸಾಧನೆ ಕೊಂಡಾಡಿ ಅಭಿನಂದಿಸಿ ಮಾತನಾಡಿದರು.
ವರದಿ: ಆರ್.ವಿ. ಕೃಷ್ಣ

















