ನವದೆಹಲಿ: ದೇಶದಾದ್ಯಂತ ಇಂದಿನಿಂದ ನವರಾತ್ರಿ ಆಚರಣೆ ವೈಭವದಿಂದ ಆರಂಭವಾಗಿದ್ದು, ಹಿಂದೂ ಬಾಂಧವರನ್ನು ಸಂಭ್ರಮ ಮನೆ ಮಾಡಿದೆ.
ಅತ್ಯಂತ ದೈವ ಭಕ್ತರಾದ, ಹಿಂದೂ ಧರ್ಮಾಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬಂದಿರುವ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಒಂಬತ್ತು ದಿನಗಳ ಕಾಲ ಉಪವಾಸ ವ್ರತವನ್ನು ಮಾಡುತ್ತಿದ್ದಾರೆ.
35 ವರ್ಷಗಳಿಂದಲೂ ಶರನ್ನವರಾತ್ರಿ ವ್ರತವನ್ನು ಆಚರಣೆ ಮಾಡಿಕೊಂಡು ಬಂದಿರುವ ಮೋದಿ, ಒಂಬತ್ತು ದಿನಗಳ ಕಾಲ ಯಾವುದೇ ರೀತಿಯ ಬೇಯಿಸಿದ ಆಹಾರವನ್ನು ಸೇವನೆ ಮಾಡುವುದಿಲ್ಲ. ಒಂಬತ್ತು ದಿನಗಳ ಕಾಲ ಬಿಸಿ ನೀರು ಹಾಗೂ ಒಂದು ಬಾರಿ ಮಾತ್ರ ಲಿಂಬೆಹಣ್ಣಿನ ಪಾನಕ ಸೇವನೆ ಮಾಡುತ್ತಾರೆ. ಇದರ ಹೊರತಾಗಿ ಯಾವುದೇ ರೀತಿಯ ಆಹಾರವನ್ನು ಅವರು ಸೇವನೆ ಮಾಡದೇ ದೇವಿಗೆ ತಮ್ಮ ವ್ರತವನ್ನು ಅರ್ಪಣೆ ಮಾಡುತ್ತಾರೆ.
ಮೋದಿಯವರು ಪ್ರಧಾನಿಯಾದ ನಂತರ 2014ರಲ್ಲಿ ನವರಾತ್ರಿ ವೇಳೆ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಆ ವೇಳೆ ಅತಿಥಿಗಳಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ವೈಟ್ ಹೌಸ್‌ನಲ್ಲಿ ನಡೆದ ಅಂದಿನ ಕೂಟದಲ್ಲಿ ಮೋದಿಯವರು ಕೇವಲ ಬಿಸಿನೀರನ್ನು ಮಾತ್ರ ಸೇವನೆ ಮಾಡಿದ್ದರು. ಮೋದಿಯವರ ಅಂದಿನ ಪ್ರವಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ವಿಶ್ವ, ಅಂದು ಪ್ರಧಾನಿಯವರ ಕಟ್ಟುನಿಟ್ಟಿನ ಆಚರಣೆಯನ್ನು ಕಂಡು ಬೆರಗಾಗಿತ್ತು.
Discussion about this post