Read - < 1 minute
ಶಿವಮೊಗ್ಗ: ಶಿವಮೊಗ್ಗ ದಸರಾ ಉತ್ಸವದ ಅಂಗವಾಗಿ ಇಂದಿನಿಂದ 17ರವರೆಗೆ ಪ್ರತಿ ದಿನ ಸಂಜೆ 6.30ರಿಂದ 9ರವರೆಗೆ ಕುವೆಂಪು ರಂಗಮಂದಿರದಲ್ಲಿ ವೈವಿಧ್ಯಮಯ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದ್ದಾರೆ.
- ಅ.10ರ ಇಂದು ವಿಜಯಲಕ್ಷ್ಮಿ ಮತ್ತು ತಂಡದವರಿಂದ ಪಂಚವೀಣೆ, ಕೆ.ಎಸ್. ಪವಿತ್ರ ಮತ್ತು ತಂಡದವರಿಂದ ನೃತ್ಯ ರೂಪಕ
- ಅ.11: ವೇಣುಗೋಪಾಲ್ ಮತ್ತು ತಂಡದವರಿಂದ ಸುಗಮ ಸಂಗೀತ, ವಿದ್ವಾನ್ ದತ್ತಮೂರ್ತಿ ಭಟ್ ತಂಡದಿಂದ ಯಕ್ಷಗಾನ
- ಅ.12: ಶಿವಮೊಗ್ಗ ರಂಗಾಯಣ ಕಲಾವಿದರಿಂದ ಆಷಾಡದ ಒಂದು ದಿನ ನಾಟಕ ಪ್ರದರ್ಶನ
- ಅ. 13: ದುಬೈ ಧೂಳಪ್ಪನ ಭರ್ಜರಿ ಗಾಳ ನಾಟಕ ಪ್ರದರ್ಶನ
- ಅ. 14: ವೆಂಕಟರಮಣ ಹೊಸಳ್ಳಿ ಇವರಿಂದ ವಯೊಲಿನ್ ವಾದನ, ಪೆರುಮಾಳ್ ನೃತ್ಯ ಕಲಾ ಕೇಂದ್ರ ಕಲಾವಿದರಿಂದ ಮೋಹಿನಿ ಆಟ್ಟಂ, ಸ್ವರಾಂಜಲಿ,
- ಭೀಮನಕೋಣೆ ಸಾಗರ ಕಲಾವಿದರಿಂದ ಸುಗಮ ಸಂಗೀತ
- ಅ. 15: ಸುರೇಖ ಹೆಗಡೆ ಇವರಿಂದ ವೈವಿಧ್ಯ ಸಂಗೀತ, ಮನುಕುಲಾ ಕೇಂದ್ರ ತಂಡದಿಂದ ನೃತ್ಯ,
- ಅ.16: ರಾಮನ್ ಸಿಸ್ಟರ್ಸ್ ಮತ್ತು ತಂಡದಿಂದ ಗಾಯನ, ಸಹಚೇತನ ನಾಟ್ಯಾಲಯದಿಂದ ನಾಟ್ಯ
- ಅ.17: ಹುಮಾಯುನ ಹರ್ಲಾಪುರ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕಲಾರೋಹಣ ಶಿವಮೊಗ್ಗ ತಂಡದಿಂದ ನಾಟಕ ಪ್ರದರ್ಶನ
ಲೋಕಸಭಾ ಉಪಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಈ ಬಾರಿ ಜಂಬೂಸವಾರಿಯನ್ನು ರದ್ದು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳೀಸಿದ್ದಾರೆ.
Discussion about this post