ನವದೆಹಲಿ: ಮುಂದಿನ 48 ಗಂಟೆಗಳ ಒಳಗಾಗಿ ಜಾಗತಿಕ ಮಟ್ಟದಲ್ಲಿ ಇಂಟರ್ ನೆಟ್ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿಯೊಂದು ಭಾರೀ ಸಂಚಲನ ಸೃಷ್ಠಿಸಿದೆ.
ಈ ಕುರಿತಂತೆ ರಷ್ಯಾದ ಮಾಧ್ಯಮವೊಂದು ವರದಿ ಪ್ರಕಟಿಸಿದ್ದು, ಡೊಮೇನ್ ಸರ್ವರ್ ಸಮಸ್ಯೆಯಿಂದ ಮುಂದಿನ 48 ಗಳಲ್ಲಿ ಜಾಗತಿಕ ಇಂಟರ್ನೆಟ್ ಬಳಕೆದಾರರು ಈ ಇಂಟರ್ನೆಂಟ್ ಸ್ಥಗಿತದ ಸಮಸ್ಯೆ ಎದುರಿಸಲಿದ್ದಾರೆ ಎಂದು ವರದಿ ಮಾಡಿದೆ.
ಪ್ರಮುಖವಾಗಿರುವ ಡೊಮೇನ್ ಸರ್ವರಗಳು ಎಂದಿನಂತೆ ಇಂಟರ್ ನೆಟ್ ಕಾರ್ಪೋರೇಷನ್ ಆಫ್ ಆಸೈಡ್ಡ್ ನೇಮ್ಸ್ ಆ್ಯಂಡ್ ನಂಬರ್ಸ್ (ಐಸಿಎಎನ್ಎನ್) ಮೂಲಕ ನಿರ್ವಹಣೆಗೆ ಒಳಪಡುವುದರಿಂದ ಈಗ ಅಂತರ್ಜಾಲದಲ್ಲಿ ಏರಿಳಿತವಾಗಲಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಸಂಪರ್ಕದಲ್ಲಿ ಏರಿಳಿತ ಕಂಡು ಬರಲಿದೆ ಎಂದು ವರದಿ ತಿಳಿಸಿದೆ.
ಅಂತರ್ಜಾಲದಲ್ಲಿ ಈಗ ಸೈಬರ್ ದಾಳಿಯು ಹೆಚ್ಚಿದ್ದರಿಂದ ಇಂದು ಬಹುತೇಕ ಅದು ಸರ್ಕಾರಿ ಅಥವಾ ಖಾಸಗಿ ಯಾವುದೇ ಕೆಲಸವಾಗಿರಬಹುದು. ಎಲ್ಲದಕ್ಕೂ ಕೂಡ ಅಂತರ್ಜಾಲ ಪ್ರಮುಖವಾಗಿದೆ. ಆದ್ದರಿಂದ ಇದಕ್ಕೆ ಸೂಕ್ತ ಭದ್ರತೆ ಒದಗಿಸುವ ಸಲುವಾಗಿ ಈಗ ಅಂತರ್ಜಾಲವನ್ನು ನಿರ್ವಹಣೆ ಮಾಡಲಾಗುತ್ತಿದೆ ಎನ್ನಲಾಗಿದೆ.
Discussion about this post