ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಾಹ್ಮಣೋಚ್ಛಿಷ್ಟದಲ್ಲಿ ಮಡೆಸ್ನಾನ(ಉರುಳು ಸೇವೆ) ಮಾಡುವ ಒಂದು ಕಾರ್ಯವನ್ನು ಪ್ರಗತಿಪರರು ಎಂದು ಬೋರ್ಡು ಹಾಕ್ಕೊಂಡವರು, ಕೆಲವು ಢೋಂಗಿ ಸ್ವಾಮಿಗಳು ದಿನ ದಿನವೂ ಡಿಬೇಟ್ ಮಾಡಿ, ಅದೊಂದು ನೀಚ ಪದ್ಧತಿ, ಮೂಢನಂಬಿಕೆ ಎಂದು ಹೋರಾಡಿ ನಿಲ್ಲಿಸಿದ್ದು ಎಲ್ಲರಿಗೂ ತಿಳಿದಿದೆ.

ಸರಿಯಪ್ಪ ನಾವೂ ಇದನ್ನು ಒಪ್ಪಿದ್ದೇವೆ, ಈಗ ಆ ಕಾರ್ಯವೂ ನಡೆಯುತ್ತಿಲ್ಲ. ಒಳ್ಳೆಯದಾಯ್ತು ಬಿಡಿ. ಇದೇ ಸಾಮಾಜಿಕ ಕಳಕಳಿಯ ಮನುಷ್ಯರು ಇತ್ತೀಚೆಗೆ ನಡೆದ ಒಂದು ಘಟನೆಯ ಬಗ್ಗೆ ಯಾಕೆ ಚಕಾರ ಎತ್ತಲಿಲ್ಲ?

ಜಮೀರ್ ಅಹ್ಮದ್ ಎಂಬ ಜವಾಬ್ದಾರಿಯುತ ಸಚಿವ ಮೈಸೂರು ದಸರಾದಲ್ಲಿ ಮಾಡಿದ್ದೇನು? ಆ ನಾಚಿಕೆ ಕೆಟ್ಟ ಬೇಜವಾಬ್ದಾರಿ ಪೋಲೀಸ್ ಪೇದೆಗಳು ಹೇಗೆ ನಡೆದುಕೊಂಡಿದ್ದಾರೆ. ಕುಕ್ಕೆಯಲ್ಲಿ ಉಚ್ಛಿಷ್ಟದಲ್ಲಿ ಹೊರಳುವುದು ನೀಚ ಪದ್ಧತಿಯಾದರೆ, ಈ ಸಚಿವನ ಉಚ್ಛಿಷ್ಟ ಮುಕ್ಕುವುದು ಯಾವ ಪದ್ಧತಿ. ನೀಚಾತಿನೀಚವೂ ಅಲ್ಲ. ಇದೊಂದು ಶ್ವಾನ ಪದ್ಧತಿಯೆಂದೇ ಹೇಳಿದರೆ ತಪ್ಪಾದೀತೇ?

ಮನೆಯಲ್ಲಿ ಸಹೋದರರೋ, ತಾಯಿ ಮಕ್ಕಳೋ, ಗಂಡ ಹೆಂಡತಿಯೋ ಈ ರೀತಿ ಉಚ್ಛಿಷ್ಟ ತಿಂದರೆ ಅದಕ್ಕೊಂದು ಅರ್ಥವಿದೆ. ಪ್ರೀತಿ, ಪ್ರೇಮ, ಮಮತೆ, ಭ್ರಾತೃತ್ವ, ಭ್ರಾತೃ ಭಗಿನಿ ಪ್ರೀತಿ ವೃದ್ಧಿ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಇದು ಯಾವ ಪ್ರೇಮ? ‘ಬಾರೋ ನಾನು ಸಾಕಿದ … ನೀನು. ತಿನ್ನೋ ಒಂದು ಉಚ್ಛಿಷ್ಟದ ತುತ್ತು’ ಎಂದು ಹೇಳಿದರೆ ತಪ್ಪಾಗದು.
ಈ ಜಮೀರ್ ಅಹ್ಮದ್ ಎಂತಹ ಶ್ರೇಷ್ಟ ಸಂತ? ಎಂತಹ ಸದ್ಗುಣವಂತ? ಇದನ್ನೆಲ್ಲ ನೋಡಿದಾಗ ಇವನೊಬ್ಬ ಲಾಭಿ ಮಾಡಿ ಮಂತ್ರಿ ಪಟ್ಟ ಪಡೆದವನು ಎಂಬುದನ್ನು ಬಿಟ್ಟರೆ ಇನ್ನೇನೂ ಗುಣಗಳು ಕಾಣುವುದಿಲ್ಲ ಇವನಲ್ಲಿ.

ಒಬ್ಬ ಯೋಧನಾಗಿ, ಸರಕಾರದ ಸೇವಕನಾಗಿರುವ ಈ ಪೊಲೀಸಪ್ಪಂದಿರು ಆ ಎಂಜಲು ಮುಕ್ಕಿದ ಎಂದರೆ ಇದಕ್ಕಿಂತ ದೊಡ್ಡ ಅವಮಾನ ಬೇರೆ ಇಲ್ಲ. ಇಡೀ ಪೊಲೀಸ್ ಇಲಾಖೆಗೇ ಒಂದು ಕಪ್ಪು ಚುಕ್ಕಿ. ಅದರಲ್ಲೂ ಸಾರ್ವಜನಿಕವಾಗಿ, ಪಂಕ್ತಿಯಲ್ಲಿ ತಿನ್ನುವುದು ಅಂದರೆ ಇದೊಂದು ಶ್ವಾನ ಬುದ್ಧಿಗೆ ಸಮಾನ. ಇಂತಹ ಪೊಲೀಸರನ್ನು ನಮ್ಮ ಸರಕಾರ ಇಟ್ಟುಕೊಂಡಿದೆಯಲ್ಲಾ, ಈ ಸರಕಾರಕ್ಕೆ ಬುದ್ಧಿ ಏನಾದರೂ ಇದೆಯೇ?
ಪೊಲೀಸರು ರಕ್ಷಣೆಗಾಗಿ ಇರುವವರಷ್ಟೇ ವಿನಾ ಈ ರೀತಿ ಶ್ವಾನ ತಿಂದ ಹಾಗೆ ತಿನ್ನುವುದಕ್ಕಲ್ಲ. ಅವರು ಯಾರು? ನಮ್ಮ ಪೋಲೀಸರು ಕಣ್ರೀ. ಅವರಿಗೆ ಅವಮಾನ ಆದರೆ ನಮಗೂ ಅವಮಾನ ಕಣ್ರೀ? ಯೋಗಸ್ಯ ಪರಿರಕ್ಷಣಂ ಎಂದು ಅಂತಹ ಇಲಾಖೆಯ ಯೋಗ್ಯತೆ ಉಳಿಸಿಕೊಳ್ಳುವುದು ಸಿಬ್ಬಂದಿಗಳ ಕೆಲಸವೂ, ಸಿಬ್ಬಂದಿಗಳ ಗೌರವ ರಕ್ಷಣೆ ಮಾಡುವುದೂ ಕರ್ನಾಟಕದ ಪ್ರಜೆಗಳ ಕರ್ತವ್ಯವೂ ಆಗಿದೆ.

ಪೊಲೀಸರ ಮೇಲಿನ ಗೌರವ, ಪ್ರೀತಿ, ವಿಶ್ವಾಸಗಳು ನಶಿಸಲು ಇಂತಹ ಘಟನೆಗಳು ಸಾಕು. ಈ ಬಗ್ಗೆ ಸರಕಾರ, ಪೊಲೀಸ್ ಇಲಾಖೆ ಎಚ್ಚರವಹಿಸಿ, ಕ್ರಮ ತೆಗೆದುಕೊಳ್ಳಬೇಕು. ಬಾಯಿಗೆ ಬಂದಂತೆ ಒದರುವ ಬುದ್ಧಿಜೀವಿಗಳು ಹಿಂದುತ್ವಕ್ಕೆ ಮಾತ್ರ ಮಾರಕ. ಆದರೆ ಇತರ ನೀತಿಗಳಿಗೆ ಕಾರಕರೇ ಆಗಿರುತ್ತಾರೆ ಎಂಬುದಂತೂ ಸ್ಪಷ್ಟ.
ಅರ್ಥ ಮಾಡಿಕೊಳ್ಳಿ: ಪೊಲೀಸರಲ್ಲಿ ನಮ್ಮ ಪ್ರಾಣವಿದೇರಿ, ಜೀವವಿದೇರೀ.. ಹಾಗೆಯೇ ನಮ್ಮ ಮಾನವೂ ಇದೇರಿ…!
-ಪ್ರಕಾಶ್ ಅಮ್ಮಣ್ಣಾಯ,
ಜ್ಯೋರ್ತಿವಿಜ್ಞಾನಂ

















