No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Sunday, September 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ನರಕ ಚತುರ್ಥಿಗೆ ತೈಲಾಭ್ಯಾಂಗ ಸ್ನಾನ ಮಾಡಿದರೆ ಯಮ ಭಾದೆ ದೂರ

kalpa News by kalpa News
November 5, 2018
in Army
0
ನರಕ ಚತುರ್ಥಿಗೆ ತೈಲಾಭ್ಯಾಂಗ ಸ್ನಾನ ಮಾಡಿದರೆ ಯಮ ಭಾದೆ ದೂರ
Share on FacebookShare on TwitterShare on WhatsApp

ಹದಿನಾರು ಸಾವಿರ ಮುಗ್ದ ಯುವರಾಜ ಕುಮಾರಿಯರನ್ನು ನರಕಾಸುರ ಬಂಧಿಸಿ, ತನ್ನ ಸಹಚರರ ಸುಖ ಭೋಗಕ್ಕೆ ಬಳಸಿ, ಸಜ್ಜನರ, ಋಷಿಮುನಿಗಳ ಹಿಂಸೆಗಿಳಿದ. ಇದು ಆಗಿನ ಕಥೆ. ಈಗಲೂ ನಡೆಯುತ್ತಿರುವುದು ಇದುವೆ. ಭಗವಂತ ಆಗಾಗ ಅವತರಿಸುತ್ತಲೇ ಇರುತ್ತಾನೆ ಈ ದುಷ್ಟರ ನಾಶಕ್ಕಾಗಿ.
|ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|
ಎಂಬಂತೆ ಶಸ್ತ್ರಾಸ್ತ್ರ ಹಿಡಿದೂ ಅವತರಿಸುತ್ತಾನೆ, ಧರ್ಮ ಭೋದನೆ ಮಾಡಿಯೂ ಅವತರಿಸುತ್ತಾನೆ. ರಾಮ ಕೃಷ್ಣಾದಿ ಶಸ್ತ್ರ ಹಿಡಿದ ರೂಪದಲ್ಲಿ, ಬಸವಾದಿ ಶರಣರ ರೂಪದಲ್ಲಿ, ಮಧ್ವಾದಿ ಆಚಾರ್ಯತ್ರಯರ ರೂಪದಲ್ಲಿ, ಕನಕಾದಿ ದಾಸರ ರೂಪದಲ್ಲಿ ಭಗವಂತನ ದಶಾವತಾರ(ದಶ ಎಂದರೆ ಹತ್ತು ಮಾತ್ರವಲ್ಲ, ಪೂರ್ಣ ಎಂದೂ ಅರ್ಥವಿದೆ).

ಹಾಗೆಯೇ, ನರಕಾದಿ ದುಷ್ಟದಾನವ ರೂಪದಲ್ಲಿ ಹುಟ್ಟುತ್ತಲೇ ಇರುತ್ತಾರೆ. ಈಗ ಭಗವದ್ಗೀತೆಯನ್ನು ದ್ವೇಷಿಸುವ ಗಂಜೀ ಸಾಹಿತಿಗಳು, ಪರಪೀಡಕ ಸಾಹಿತಿಗಳು, ಪರಗತಿ ವಿಚಾರವಂತರು, ಪರಪೀಡಕ ಭಕ್ತರ ಹಿಂಡು ಇರುವ ಮಠಗಳ ಸ್ವಾಮೀಜಿಗಳು, ಅನ್ಯಧರ್ಮದ ಕೆಲ ನೀಚ ಭಯೋತ್ಪಾದಕ ಕುಲಗಳು, ಗೋಭಕ್ಷಣಾ ಪ್ರಿಯರು ಧರ್ಮ ನಿಂದನೆ ಮಾಡುತ್ತಿರುತ್ತಾರೆ. ಇವರನ್ನು ಇವರಂತಹ ಸರಕಾರಗಳೂ ಬೆಂಬಲಿಸುತ್ತದೆ.
ಉದಾಹರಣೆಗೆ ಕರ್ನಾಟಕದ ಸಿದ್ಧರಾಮಯ್ಯ ಸರಕಾರ, ಕೇರಳದ ಪೀಣರಾಯಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರನ್ನು ತೆಗೆದುಕೊಂಡಾಗ ಅರ್ಥವಾಗಬಹುದು. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ನ್ಯಾಯಾಲಯಗಳ ತೀರ್ಮಾನವೂ ಇದಕ್ಕೆ ಬೆಂಬಲವಾಗುತ್ತದೆ. ಆದರೆ ನಾನು ನ್ಯಾಯಾಲಯಗಳ ತಪ್ಪು ಎನ್ನಲ್ಲ. ಅವರಿಗೆ ತಲುಪುವ ದಾಖಲೆಗಳು ತಮಗೆ ಬೇಕಾದಂತೆ ತಿರುಚಿದ್ದರೆ ಅದಕ್ಕೆ ತಕ್ಕಂತೆ ತೀರ್ಮಾನ ನೀಡಬೇಕಾದದ್ದು ನ್ಯಾಯಾಲಯಗಳ ಧರ್ಮ. ತಪ್ಪು ನ್ಯಾಯಾಲಯದಲ್ಲ, ತಪ್ಪು ಶಾಸನ ಮಾಡಿದವರದ್ದೇ ಆಗಿರುತ್ತದೆ.
ಇರಲಿ ಒಂದೊಂದು ಉದಾಹರಣೆ ನೀಡಲು ನೂರಾರು ಪುಟಗಳೇ ಬೇಕಾದೀತು. ಈ ವಿಚಾರ ಇಲ್ಲೇ ನಿಲ್ಲಿಸುವ. ಅಂದು ಈ ನರಕಾಸುರನ ವಿಚಾರ ಹೇಗಾಗಿತ್ತು ಎಂದು ನೋಡೋಣ.
ದರ್ಪ ದಬ್ಬಾಳಿಕೆಯ ನರಕನು ಸ್ವರ್ಗವನ್ನೇ ಸ್ವಾಧೀನ ಮಾಡಿಕೊಂಡು, ದೇವತೆಗಳನ್ನು ಓಡಿಸುತ್ತಾನೆ. ಅವನ ಹೆಸರು ಭೌಮಾಸುರ ಎಂದು, ಮಹಾಶೂರನೀತ. ರಾಜ್ಯಗಳನ್ನು ಜೈಸಿ ಅಲ್ಲಿದ್ದ ಗೋಪಿಕಾ ಸ್ತ್ರೀಯರನ್ನು ಮೊದಲಾಗಿ ಬಂಧಿಸಿ ಇವನ ಬಂಟರಿಗೆ ಭೋಗಕ್ಕಾಗಿ ಮೀಸಲಿಡುತ್ತಾನೆ. ಸಜ್ಜನ ಸ್ತ್ರೀಯ ಮಾನ ಒಮ್ಮೆ ಹೋಗಿಬಿಟ್ಟರೆ ಅವರಿಗೆ ಸಮಾಜದಲ್ಲಿ ಸ್ಥಾನ ಮಾನಗಳಿಲ್ಲ. ಇದು ಸನಾತನ ಧರ್ಮ ಪರಂಪರೆ. ಇದನ್ನು ಮೀರಿ ನಡೆಯುವ ಸಾಮರ್ಥ್ಯ ಇದ್ದರೆ ಭಗವಂತನಿಗೆ ಮಾತ್ರ. ಅಂತಹ ಲೀಲಾಮಾನುಷ ವಿಗ್ರಹವೊಂದು ದೇವಕಿಯ ಎಂಟನೇ ಗರ್ಭದಲ್ಲಿ ಭಗವಾನ್ ವಾಸುದೇವನಾಗಿ, ಮುಂದೆ ಶ್ರೀ ಕೃಷ್ಣನಾಗಿ ಜನಿಸಿ, ಮೊದಲು ವಧೆ ಮಾಡಿದ್ದೇ ತನ್ನ ಸೋದರ ಮಾವ ದುಷ್ಟ ಕಂಸನನ್ನು..  ಅಲ್ಲಿಂದ ಶ್ರೀಕೃಷ್ಣನ ದುಷ್ಟಸಂಹಾರ ಕಾರ್ಯ ಶುರುವಾಗುತ್ತದೆ. ಅಶ್ವಿಜ ಚತುರ್ದಶಿಯನ್ನು ನರಕ ಚತುರ್ದಶಿಯಾಗಿ ಆಚರಿಸುವ ಪದ್ಧತಿಯು ಕೃಷ್ಣನ ಜನನಕ್ಕಿಂತ ಲಕ್ಷಾಂತರ ವರ್ಷಗಳ ಹಿಂದಿನಿಂದಲೇ ಬಂದಿತ್ತು. ಈ ಚತುರ್ದಶಿಯ ಚಂದ್ರೋದಯ ಕಾಲದಲ್ಲಿ ತೈಲಾಭ್ಯಾಂಗ ಸ್ನಾನ ಮಾಡಿದರೆ ಯಮಭಾದೆ ತಪ್ಪುತ್ತದೆ ಎಂಬುದು ಶಾಸ್ತ್ರ ವಚನ. ಇದನ್ನು ನಿರ್ಣಯ ಸಿಂಧು ಮುಂತಾದ ಧರ್ಮಗ್ರಂಥಗಳಲ್ಲಿ ವಿವರಿಸಿದೆ.

ಈ ನರಕಾಸುರನು ತನ್ನ ಭೋಗ ವಿಲಾಸಗಳಿಂದಾಗಿ ಇಂತಹ ಸತ್ಕರ್ಮಗಳನ್ನು ನಾಶಮಾಡಿ, ಅದಕ್ಕೆ ವಿರುದ್ಧವಾಗಿ ನಡೆದುಕೊಂಡದ್ದರಿಂದಲೇ ಅದೇ ಚತುರ್ದಶಿಯು ನರಕನಿಗೆ ಮರಣ ಚತುರ್ದಶಿಯಾಯ್ತು. ಶ್ರೀ ಕೃಷ್ಣನ ಸುದರ್ಶನವು ಅವನನ್ನು ಆಹುತಿ ತೆಗೆದುಕೊಂಡಿತು. ನರಕನ ಕರಾಳ ಮುಷ್ಟಿಯೊಳಗಿದ್ದ ಲಕ್ಷಾಂತರ ಧರ್ಮಗ್ಲಾನಿಗಳು, ಸತ್ಪ್ರಜೆಗಳು ನಿರಾಳವಾದರು. ಆದರೆ ನರಕನ ಬಂಧನದಲ್ಲಿದ್ದ ಹದಿನಾರು ಸಾವಿರ ಗೋಪಿಕಾ ಸ್ತ್ರೀಯರು ಬಂಧನ ಬಿಡುಗಡೆಯಾಗಿಯೂ ದುಃಖಿಗಳೇ ಆಗುತ್ತಾರೆ. ಅವರೆಲ್ಲ ಓಡಿಬಂದು ಕೃಷ್ಣನ ಪಾದಕ್ಕೆರಗಿ ‘ಭಗವಂತಾ ನಮ್ಮನ್ನೂ ನರಕನ ಜತೆಗೇ ನಿನ್ನ ಸುದರ್ಶನದ ಮೂಲಕ ಕಳುಹಿಸಿ ಬಿಡು. ಯಾವ ಸ್ತ್ರೀಯು ಕಳಂಕಿತಳಾದರೆ ಅವಳಿಗೆ ಸಮಾಜದಲ್ಲಿ ಇರುವುದಕ್ಕೆ ಸಾಧ್ಯವೇ. ದುರುಳರ ವಕ್ರ ದೃಷ್ಟಿಯಲ್ಲಿ ಮತ್ತೆ ನಾವು ಸಾಯುವ ವರೆಗೆ ಜೀವಿಸಬೇಕು. ಸಜ್ಜನರ ನಿಂದನೆ, ಅಸ್ಪಶ್ಯತೆಯಲ್ಲೇ ನಾವು ಜೀವಿಸಬೇಕು. ಅದಕ್ಕಿಂತ ಸಾಯುವುದೇ ಲೇಸು. ಇಲ್ಲವೇ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಎಲ್ಲವೂ ನಿನ್ನ ಆಜ್ಞೆಯಲ್ಲಿದೆ’ ಎಂದು ಕಣ್ಣೀರು ಸುರಿಸುತ್ತಾರೆ.

ಆಗ ಭಗವಂತ ನಗುತ್ತಾ,’ ಹೇ ಗೋಪಿಕೆಯರೇ, ಎಲ್ಲರೂ ಒಂದಲ್ಲ ಒಂದು ದಿನ ನನ್ನನ್ನೇ ಸೇರುತ್ತಾರೆ. ಅದರಲ್ಲಿ ನೀವೂ ಹೊರಗಿಲ್ಲ. ಎಷ್ಟೆಷ್ಟು ದಿನ ನೀವಿರಬೇಕು ಎಂಬುದೂ ನನ್ನದೇ ನಿರ್ಧಾರ. ಇಲ್ಲಿಯವರೆಗೆ ದುಷ್ಟನ ಬಂಧನದಿಂದ ಘಾಸಿಗೊಂಡಿರುವಿರಿ. ಮುಂದೆ ಸಮಾಜ ನಿಂದನೆಯಲ್ಲಿ ಘಾಸಿಗೊಳ್ಳುವೆವು ಎಂಬ ಭಯ ನಿಮ್ಮಲ್ಲಿದೆ. ಅದಕ್ಕೂ ಪರಿಹಾರ ತೋರಿಸುತ್ತೇನೆ. ಇದೋ ಇದೋ, ನೀವು ಈಗಿಂದೀಗಲೇ ಒಂದೊಂದು ಮಂಗಳಸೂತ್ರವನ್ನು ನನ್ನ ಹೆಸರಿನಲ್ಲಿ ಪ್ರಮಾಣ ಮಾಡಿ ಕಟ್ಟಿಕೊಳ್ಳಿರಿ. ಇಂದಿನಿಂದೇ ನಾನು ನಿಮಗೆಲ್ಲರಿಗೂ ಪತಿ. ಗಂಡನೆಂಬವನೊಬ್ಬನಿದ್ದರೆ ಹೆಂಗಸಿಗೆ ಭಯವಿಲ್ಲ. ನಾನೇ ನಿಮ್ಮ ಮಾನಸಿಕವಾದ ಗಂಡ ಎಂದು ಘೋಷಿಸುತ್ತೇನೆ. ಗಂಡಸಾಗಿದ್ದವ ನಿಮ್ಮನ್ನೇನಾದರೂ ಮುಟ್ಟಿದರೆ, ನಿಂದಿಸಿದರೆ ನನ್ನ ಸುದರ್ಶನ ಜ್ವಾಲೆಗೆ ಸುಟ್ಟು ಭಸ್ಮವಾಗಲಿ’ ಎಂದು ಭಗವಂತನು ಅಭಯನೀಡುತ್ತಾನೆ.

ಅಲ್ಲಿಯವರೆಗೆ ನಿಂತುಹೋಗಿದ್ದ ಚತುರ್ದಶಿಯ ಚಂದ್ರೋದಯ ಕಾಲದ ತೈಲಾಭ್ಯಾಂಗ ಸ್ನಾನವು ಅಲ್ಲಿಂದಲೇ ಪ್ರಾರಂಭವಾಯ್ತು. ನರಕಾಸುರನ ಮಗ ಭಗದತ್ತನಿಗೂ ರಾಜ್ಯಾಭಿಷೇಕವನ್ನು ಸ್ವತಃ ಕೃಷ್ಣನೇ ನೆರವೇರಿಸಿ ಸನ್ಮಂಗಳ ಮಾಡಿದ ಆ ಲೀಲಾಮಾನುಷ ವಿಗ್ರಹನಾದ ಪ್ರಭು ಶ್ರೀಕೃಷ್ಣ.
(6 ನವೆಂಬರ್ ಚಂದ್ರೋದಯಕ್ಕೆ ತೈಲಾಭ್ಯಾಂಗ ಸ್ನಾನ. ನರಕ ಚತುರ್ದಶಿ)
–ಪ್ರಕಾಶ್ ಅಮ್ಮಣ್ಣಾಯ

Tags: DeepawaliKannada ArticleKannadaNewsLord KrishnaNaraka ChaturthiPrakash Ammannayaದೀಪಾವಳಿನರಕ ಚತುರ್ದಶಿನರಕಾಸುರಶ್ರೀ ಕೃಷ್ಣ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮೋದಿ ಮನಸ್ಸು ಮಾಡಿದರೆ ಅವರ ತಾಕತ್ತು ಎಂತಹುದ್ದು ಗೊತ್ತಾ?

Next Post

ದೀಪಾವಳಿ ಮಹತ್ವ ಎಂತಹದ್ದು? ಮೂರು ದಿನ ಆಚರಣೆ ಹೇಗೆ?

kalpa News

kalpa News

Next Post
ದೀಪಾವಳಿ ಮಹತ್ವ ಎಂತಹದ್ದು? ಮೂರು ದಿನ ಆಚರಣೆ ಹೇಗೆ?

ದೀಪಾವಳಿ ಮಹತ್ವ ಎಂತಹದ್ದು? ಮೂರು ದಿನ ಆಚರಣೆ ಹೇಗೆ?

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL