ಶಿವಮೊಗ್ಗ: ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದ ಸದಸ್ಯರ ಪರಸ್ಪರ ಪರಿಚಯ ಮತ್ತು ಅಭಿಶಿಕ್ಷಣ ಕಾರ್ಯಕ್ರಮ ನಡೆಯಿತು.
ವಿದ್ಯಾನಗರ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯ ಕೆ.ಇ. ಕಾಂತೇಶ್ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಸಂಘದ ಗೌರವಾಧ್ಯಕ್ಷ ಟಿ.ಜೆ. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಂ.ಆರ್. ಜಯೇಶ್ ದೃಷ್ಠಿಕೋನ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧೀಕ್ಷಕ ಪಿ.ಓ. ಶಿವಕುಮಾರ್ ಸಂಘ ಸ್ಧಾಪನೆ-ಗೊತ್ತು ಗುರಿ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಂಘದ ಧ್ಯೇಯೋದ್ದೇಶ ಕಾರ್ಯಕ್ರಮ ಕಾರ್ಯಕಾರಿ ಮಂಡಳಿ ಮತ್ತು ನೋಂದಾಯಿತ ಸದಸ್ಯರ ಭಾವಚಿತ್ರ ಹೆಸರು ಹಾಗೂ ನಿವೃತ್ತ ಹುದ್ದೆಯ ವಿವರಗಳ ಪವರ್ ಪಾಯಿಂಟ್ ಪ್ರಸೆಂಟೇಷನ್ ಅನ್ನು ಬಿತ್ತರಿಸಲಾಯಿತು.
ವಿಜಯಾ ವಿಜಯಕುಮಾರ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಕೆ.ಟಿ. ಶ್ರೀನಿವಾಸರಾವ್ ಸ್ವಾಗತಿಸಿದರು. ಮಂಜುನಾಥ ಶರ್ಮ ವಂದಿಸಿ, ಆಕಾಶವಾಣಿ ನಿವೃತ್ತ ಅಧಿಕಾರಿ ಡಾ. ಎನ್. ಸುಧೀಂದ್ರ ನಿರೂಪಿಸಿದರು. ಸಭೆಯಲ್ಲಿ 50-60 ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 200 ಕ್ಕೂ ಹೆಚ್ಚು ವಿಶ್ರಾಂತ ನೌಕರರು ಭಾಗವಹಿಸಿದ್ದರು.






Discussion about this post