ನವದೆಹಲಿ: ಆಧುನಿಕ ಜಾಹೀರಾತು ಗುರು ಎಂದೇ ಖ್ಯಾತರಾಗಿದ್ದ ಆಲಿಕ್ ಪಡಮ್ಸೆ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
90 ವರ್ಷದ ಆಲಿಕ್ ಅವರು ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಜಲಪಾತದಲ್ಲಿ ಲಿರಿಲ್ ಜೊತೆ ಬಾಲಕಿ, ಹಮಾರಾ ಬಜಾಜ್, ಕಾಮಸೂತ್ರದ ದಂಪತಿಗಳು ಇವು ಅವರು ನೀಡಿರುವ ಜಾಹೀರಾತು ಜಗತ್ತಿಗೆ ನೀಡಿರುವ ಕೊಡುಗೆಗಳಾಗಿದ್ದು, ಇವರನ್ನು ಆಧುನಿಕ ಜಾಹೀರಾತು ಗುರು ಎಂದೇ ಕರೆಯಲಾಗುತ್ತದೆ.
ರಂಗಭೂಮಿಯಲ್ಲೂ ಸಹ ತೊಡಗಿಸಿಕೊಂಡಿದ್ದ ಇವರು ನಟ ಹಾಗೂ ನಿರ್ಮಾಪಕರೂ ಆಗಿದ್ದರು. ಇವರ ಕಲಾ ಸೇವೆಯನ್ನು ಗುರುತಿಸಿ 2000ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಭಾರತ ಸರ್ಕಾರ ಗೌರವಿಸಿತ್ತು.
Saddened by the demise of Shri Alyque Padamsee. A wonderful communicator, his extensive work in world of advertising will always be remembered. His contribution to theatre was also noteworthy. My thoughts are with his family and friends in this sad hour: PM @narendramodi
— PMO India (@PMOIndia) November 17, 2018
ಇನ್ನು ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
Sorry to hear of the passing of Alyque Padamsee, creative guru, theatre personality and doyen of our ad industry. My condolences to his family, friends and colleagues #PresidentKovind
— President of India (@rashtrapatibhvn) November 17, 2018
Saddened to hear of the passing of Ad Guru and Theatre doyen #AlyquePadamsee.
He gave me my first break in Theatre, like countless before and after me.
Maverick, Unique, Uncompromising.
There will never be another….#RIP Alyque.— Boman Irani (@bomanirani) November 17, 2018
Discussion about this post