ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದ್ದು, ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ನಾಳೆ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಹೆಣ್ಣು ಮಗಳಿಗೆ ಅಪಮಾನ ಮಾಡಿದ್ದೀರಿ, ರಾಜ್ಯದಾದ್ಯಂತ ತೀವ್ರ ಹೋರಾಟ ಕಬ್ಬು ಬೆಳೆಗಾರರ ಹೋರಾಟಕ್ಕೆ ನಾವು ಬೆಂಬಲ ನೀಡಲು ಮುಂದಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಲಕ್ಷಾಂತರ ರೈತರನ್ನು ಸೇರಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಕುಮಾರಸ್ವಾಮಿ ಅವರಿಗೆ ನಮ್ಮ ಕಡೆಯಿಂದ ಪ್ರಶ್ನೆ, ಹೆಣ್ಣು ಮಗಳು ನಾಲಾಯಕ್ ಅಂದಿದ್ದಕ್ಕೆ ಸಿಟ್ಟು ಬಂತು. ಪ್ರತೀ ಬಾರಿ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ರಾಜಕೀಯ ಎಂದು ಪ್ರಜಾತಂತ್ರ ವ್ಯವಸ್ಥೆ ಅಪಮಾನ ಮಾಡುತ್ತಿರುವುದು ಯಾಕೆ ಎಂದರು.
ಮಹಾರಾಷ್ಟ್ರದ ಬಿಜೆಪಿ ಸರ್ಕಾರ ರೈತರಿಗೆ ಕಬ್ಬಿಗೆ 2900 .ರೂ ದರ ಮತ್ತು 200 ರೂಪಾಯಿ ಬೆಂಬಲ ಬೆಲೆ ಕೊಡುತ್ತಿದೆ ಅದನ್ನು ನೋಡಿಕೊಂಡು ಬನ್ನಿ ಎಂದರು.
ಮಾತೆತ್ತಿದರೆ ಮೋದಿ ಅವರನ್ನು ಟೀಕೆ ಮಾಡುತ್ತಿರಲ್ಲಾ, ಗುಜರಾತಿನಲ್ಲಿ ಕಬ್ಬಿಗೆ 3,200 ರಿಂದ 4,200 ರೂಪಾಯಿ ಎಫ್‌ಆರ್‌ಪಿ ನೀಡಲಾಗುತ್ತಿದೆ. ಅದನ್ನು ನೋಡಿಕೊಂಡು ಬನ್ನಿ ಎಂದರು.
Political Turmoil in Tamil Nadu: BJP Faces Wave of Resignations
Kalpa Media House | Chennai | A major political development is unfolding in Tamil Nadu as a series of resignations...
Read moreDetails















