ಶಿವಮೊಗ್ಗ: ನಗರದಲ್ಲಿರುವ ಕ್ರೈಸ್ತ ಸಮುದಾಯಕ್ಕೆ ಮೀಸಲಾಗಿರುವ ಸ್ಮಶಾನದಲ್ಲಿ ಕಾಮಗಾರಿ ವೇಳೆ ಶಿಲುಬೆಗೆ ಹಾನಿಯಾಗಿರುವ ಘಟನೆ ನಡೆದಿದ್ದು, ಇದನ್ನು ಖಂಡಿಸಿ ಕ್ರೈಸ್ತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಸ್ಮಶಾನ ಸ್ಥಳದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಅನಧಿಕೃತವಾಗಿ ನೀರಿನ ಟ್ಯಾಂಕ್ ನಿರ್ಮಿಸಲು ಮುಂದಾಗಿದೆ. ಈ ವೇಳೆ ಶಿಲುಬೆಯ ಒಂದು ಭಾಗ ಮುರಿದು ಹೋಗಿದೆ. ವಿಷಯ ತಿಳಿದ ಸಮುದಾಯದವರು ಪ್ರತಿಭಟನೆ ನಡೆಸಿದ್ದು, ಇದರ ಬಿಸಿ ತಾಕುತ್ತಿದ್ದಂತೆಯೇ, ಶಿಲುಬೆಯನ್ನು ವೆಲ್ಡ್ ಮಾಡಿ, ಬೇರೊಂದು ಸ್ಥಳದಲ್ಲಿ ನೆಟ್ಟಿದ್ದಾರೆ ಎಂದು ವರದಿಯಾಗಿದೆ.

ಸ್ಮಶಾನದ ಜಾಗದಲ್ಲಿ ವಿವಿಧ ಕಾಮಗಾರಿ ನಡೆಸಲು ಪಾಲಿಕೆ ಹಿಂದೆಯೂ ಸಹ ಕಾಮಗಾರಿ ನಡೆಸಲು ಮುಂದಾಗಿತ್ತು. ಆದರೆ, ಈಗ ಪೊಲೀಸ್ ಭದ್ರತೆಯಲ್ಲಿ ಮತ್ತೆ ಕಾಮಗಾರಿ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿಯಾದ ಕ್ರೈಸ್ತ ಮುಖಂಡರು ಕಾಮಗಾರಿ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಏಸುದಾಸ್, ರಿಚರ್ಡ್ ಕ್ವಾಡ್ರಸ್, ಸಾಮಿನಾದಾ ನ್, ರಾಬರ್ಟ್, ಮೇಲ್ವಿನ್, ಸಂತೋಷ್, ಪ್ರಸಾದ್, ಸಿರಿಲ್ ಕುಮಾರ್, ಜ್ಯೋತಿ ಅರಳಪ್ಪ, ಚಿನ್ನಪ್ಪ ಇದ್ದರು.
INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8
Kalpa Media House | Special Article | On June 8, Indian fans will be amongst the first in the world...
Read moreDetails
















