ಯಾವುದಕ್ಕೂ ಒಂದೊಂದು ಕಾಲಮಾನಗಳಿವೆ. ಏಳು ತಲೆಮಾರಿಗೊಮ್ಮೆ ಪಥನ, ಮೂರು ತಲೆಮಾರಿಗೊಮ್ಮೆ ಪಥನ ಇತ್ಯಾದಿ ವಿಚಾರಗಳಿವೆ.
ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ರಘು ವಂಶವನ್ನೇ ನೋಡೋಣ. ಒಂದು ಕಾಲದಲ್ಲಿ ಅತ್ಯುತ್ತಮ ಮೇರುಸ್ಥಿತಿಗೆ ತಲುಪಿ ನಂತರ ಹಿಂದೆ ಬರುತ್ತಾ, ವೇನನ ಕಾಲದಲ್ಲಿ ಪೂರ್ಣ ಪಥನವಾಯ್ತು. ಆಗ ಋಷಿಮುನಿಗಳು ಇವನನ್ನು ಮಥಿಸಿ ಪೃಥು ಚಕ್ರವರ್ತಿಯನ್ನಾಗಿಸಿ, ವಂಶ ಉದ್ಧಾರವಾಗುವಂತೆ ಮಾಡಿದ್ದರು.
ಕರುನಾಡಿನ ವಿಜಯನಗರ ಸಾಮ್ರಾಜ್ಯವೂ ಅಷ್ಟೆ. ಇದೊಂದು ಭಾರತ ದೇಶದ ಮಣ್ಣಿನ ಸಹಜ ಕ್ರಿಯೆ.
ಅಪ್ಪ ಭಿಕ್ಷೆ ಬೇಡಿ ಮಗನನ್ನು ಬೆಳೆಸುತ್ತಾನೆ. ಮಗ ಕಷ್ಟಪಟ್ಟು ಸಂಪಾದಿಸಿ ಅವನ ಮಗನಿಗೆ ಕಷ್ಟೆವೆಂದರೇನು ಎಂಬಂತೆ ಬೆಳೆಸುತ್ತಾನೆ. ಅವನ ಮಗನು ಐಷಾರಾಮಿಯಾಗಿ ತನ್ನ ಪೂರ್ವಜರು ನಡೆದುಕೊಂಡು ಬಂದಂತಹ ಸಂಪ್ರದಾಯಗಳಿಗೆ ಎಳ್ಳುನೀರು ಬಿಡುತ್ತಾನೆ. ಅವನ ಕಾಲ ಗತಿಸಿದ ನಂತರ ಪಥನ ಶುರುವಾಗುತ್ತದೆ. ಕೊನೆಗೆ ವಂಶ ಕ್ಷಯವಾಗುತ್ತದೆ. ಆದರೆ ಆ ವಂಶದ ಹಿರಿಯರು ನಡೆದುಕೊಂಡು ಬಂದಂತಹ ಸಂಪ್ರದಾಯ, ಪಿತೃ ಕಾರ್ಯಗಳ ಫಲದಿಂದ ಆ ವಂಶದಲ್ಲಿ ಒಂದು ಕುಡಿಯು ವಂಶೋದ್ಧಾರಕನಾಗಿ ಹುಟ್ಟಿಕೊಂಡು ಮತ್ತೆ ಆ ವಂಶವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತದೆ.
ನಾಲ್ಕುನೂರು ವರ್ಷದ ಬಳಿಕ ಆಶಾಕಿರಣ
ಹೇಗೆ ಸಗರನ ನಂತರದಲ್ಲಿ ಭಗೀರಥನು ಗಂಗೆಯನ್ನಿಳಿಸಿ, ಶಿವನ ಅನುಗ್ರಹ ಪಡೆದು, ತನ್ನ ಅರವತ್ತು ಸಾವಿರ ಪಿತೃಗಳಿಗೆ ಮೋಕ್ಷ ಕೊಡುತ್ತಾನೋ ಅದೇ ರೀತಿ ಈ ವೇದೋಕ್ತ ಸನಾತನ ಪರಂಪರೆಗೆ ಮುಂದೆ ಬೆಳೆಯುವ ಅವಕಾಶಕ್ಕೆ ಒಂದು ವಂಶೋದ್ಧಾರಕನ ಜನನವಾಗುತ್ತದೆ. ಹಾಗಾಗಿ ಸನಾತನ ಸಂಸ್ಕೃತಿಯ ಈ ಹಿಂದೂ ಧರ್ಮದ ಪೀಳಿಗೆಗಳು ಕಷ್ಟವಿದ್ದರೂ ಮುಂದೆ ಬೆಳೆಯುತ್ತದೆ. ಸುಮಾರು ನಾಲ್ಕುನೂರು ವರ್ಷದ ಬಳಿಕ ಈ ಭಾರತೀಯ ಪರಂಪರೆಯಲ್ಲಿ ನರೇಂದ್ರ ಮೋದಿ ಎನ್ನುವ ಒಂದು ಪೀಳಿಗೆಯು ಜನಿಸಿ ಭಾರತದ ಆಶಾಕಿರಣವಾಯ್ತೋ ಹಾಗೆ.
ಇದರ ನಿರ್ಧಾರ ಗುರುವಿನಲ್ಲಿದೆ. ಗುರುವಿನ ‘ಭ’ ಚಕ್ರದ ಪೂರ್ಣ ಪರಿಭ್ರಮಣಕ್ಕೆ ಹನ್ನೆರಡು ವರ್ಷ. ಇಂತಹ ಮೂವತ್ತು ಪರಿಭ್ರಮಣಕ್ಕೆ ಒಂದು ದಿವ್ಯ ಮಾನ ಎಂದು ಹೆಸರು. ಅಂದರೆ 360 ವರ್ಷ. ಈಗ ಗುರುವು ಕರ್ಕ ತ್ರಿಕೋಣದ ವೃಶ್ವಿಕ ರಾಶಿಗೆ ಇಂದು ಪ್ರವೇಶ ಮಾಡುತ್ತಾನೆ. ಇಂದಿಗೆ ದಿವ್ಯ ಮಾನದ ಪ್ರಕಾರ 360 ವರ್ಷಗಳಾಯ್ತು. ಕರ್ಕ ರಾಶಿಯಲ್ಲಿ, ವೃಶ್ವಿಕ ರಾಶಿಯಲ್ಲಿ, ಮೀನ ರಾಶಿಯಲ್ಲಿ ಗುರುವು 29.59° ಬಂದಾಗ ಮೀನಾಂಶ ಆಗುತ್ತದೆ. ಅದರಲ್ಲೂ ಕುಂಡಲಿಯಲ್ಲಿ ಅಧಿಕ ಅಂಶ ಪಡೆದ ಗ್ರಹ ಮೀನಾಂಶ ಪಡೆದರೆ ಮೋಕ್ಷ ಯೋಗ ಎನ್ನುತ್ತಾರೆ. ಈ ಗುರುವು 2019 March 28 ನೆಯ ತಾರೀಕಿನ ಕುಂಡಲಿಯಲ್ಲಿ ಆತ್ಮ ಕಾರಕನಾಗಿ 29.59° ಮೀನಾಂಶ ಪಡೆಯುತ್ತಾನೆ. ಮೋಕ್ಷ ಎಂದರೆ Solutions. ಇಂತಹ ದಿನ ಹುಟ್ಟುವ ಒಬ್ಬ ವ್ಯಕ್ತಿಯು ಇಡೀ ದೇಶಕ್ಕೆ ಉದ್ಧಾರಕನಾಗುತ್ತಾನೆ. ಆದರೆ ಅದಕ್ಕೆ ಪೂರಕ ವಾತಾವರಣವನ್ನು ಇಂದಿನ ಆಡಳಿತವು ಸೂಚಿಸಬೇಕು.
ಹಿಂದೂ ಸಾಮ್ರಾಜ್ಯವಾಗಲಿದೆ ಭಾರತ
ರಾಮ ಮಂದಿರವೇ ಈ ದೇಶದ ಕೇಂದ್ರ ಬಿಂದು. ಇದು ಎದ್ದು ನಿಲ್ಲುವುದೇ ಇದರ ಪೂರ್ವ ಸೂಚನೆ. ಅಂದರೆ ಒಬ್ಬ ಸಾಮ್ರಾಟ ಚಕ್ರವರ್ತಿ ಜನಿಸುತ್ತಾನೆ ಎಂದರ್ಥ. ಅದಕ್ಕಾಗಿಯೇ ಕರ್ಕ, ವೃಶ್ಚಿಕ, ಮೀನ ಗುರುವಿಗೆ ಇಷ್ಟೊಂದು ಮಹತ್ವ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಭಾರತವು ನಿಶ್ಚಿತವಾಗಿಯೂ Most Power Full Hindu Kingdom ಆಗುವ ಒಂದು ಸೂಚನೆ. ಹಾಗಾದರೆ ಹಿಂದಿನ ಸಲ ಗುರು ವೃಶ್ಚಿಕದಲ್ಲಿ ಇದ್ದಾಗ ಆಗಲಿಲ್ಲವೇ? ಆಗ ಗುರುವು ರವಿ ಸಂಪರ್ಕದಲ್ಲಿ ಪಾಪತ್ವ ಪಡೆದಿದ್ದ. ಮೋಕ್ಷ ಕಾರಕ ಗ್ರಹನು ಪಾಪ ಸಂಪರ್ಕವಿಲ್ಲದೆ ಸ್ವತಂತ್ರನಾಗಿದ್ದಾಗ ಮಾತ್ರ ಫಲವಿರುತ್ತದೆ.
2004 ರಲ್ಲಿ ಗುರುವು ಕರ್ಕಾಂತ್ಯ(ಮೀನಾಂಶದಲ್ಲಿ) ಇದ್ದಾಗ ರವಿ ಸಂಪರ್ಕದಲ್ಲಿ ಮೋಕ್ಷಯೋಗ ವಂಚಿತನಾಗಿದ್ದ. ಆದರೆ ಈ ಸಲ ವೃಶ್ಚಿಕಾಂತ್ಯದಲ್ಲಿ ಸ್ವತಂತ್ರನಾಗಿ ಮೋಕ್ಷ ಯೋಗದಲ್ಲಿದ್ದಾನೆ. ಇದು ಭಾರತದ ಉನ್ನತಿಯ ಲಕ್ಷಣ ಆಗುತ್ತದೆ.
ಯಾರಿಗೆ ತೊಂದರೆ?
ಯಾವ ವಂಶಗಳು ಪೂರ್ವದಲ್ಲಿ ಹಿಂದುವಾಗಿ, ಅದನ್ನು ತೊರೆದು ಹೋಗಿದ್ದವೋ (ಮತಾಂತರ), ಆ ವಂಶಗಳ ಪಿತೃಗಳ ನಿತ್ಯ ಶಾಪದ ಫಲವಾಗಿ ಆ ವಂಶಗಳು ಅವುಗಳೇ ಹೊಡೆದುಕೊಳ್ಳುತ್ತಾ, ಸಜ್ಜನರಿಗೆ ತೊಂದರೆ ನೀಡುತ್ತಾ ವಂಶ ಕ್ಷಯವಾಗುತ್ತಾ ನಿರ್ನಾಮ ಆಗುತ್ತದೆ ಎಂಬುದು ಒಂದು ಸೂಚನೆ ಇದಾಗಿರುತ್ತದೆ. ಯಾವ ವಂಶವು ಮರಳಿ ಮಾತೃ ಧರ್ಮಾನುಕರಣೆ ಮಾಡುತ್ತದೋ ಆ ವಂಶವು ಮತ್ತೆ ಚಿಗುರಿ, ಉತ್ತಮ ಸಂಸ್ಕಾರ ಪಡೆದು ಉತ್ತಮ ಜೀವನದತ್ತ ಸಾಗುತ್ತದೆ.
ಅನಾದಿಕಾಲದಿಂದಲೂ ಭಾರತೀಯ ಸಂಪ್ರದಾಯದ ಮೂಲವೇ ಅಲ್ಲದ ವಂಶಗಳಿಗೆ ಇದು ಅನ್ವಯವಾಗಿಲ್ಲ. ಅಂದರೆ ವಿದೇಶಿಗರು. ಕೇವಲ ಇದು ಭಾರತ ದೇಶಕ್ಕೆ ಮಾತ್ರ ಸೀಮಿತ. ಇಲ್ಲಿ ಹುಟ್ಟಿದ ಸಕಲ ಮನುಷ್ಯರೂ ವೇದೋಕ್ತವಾದಂತಹ ನೆಲದ ಜಲವನ್ನೇ ಪ್ರಾಶನ ಮಾಡಿರುವುದರಿಂದ ಇಲ್ಲಿನವರಿಗೆ ಮಾತ್ರವೇ ಇದು ಫಲ ನೀಡುತ್ತದೆ.
-ಪ್ರಕಾಶ್ ಅಮ್ಮಣ್ಣಾಯ
ಜ್ಯೋರ್ತಿವಿಜ್ಞಾನಂ
Discussion about this post