ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಸೇನಾ ಕೇಂದ್ರದ ಮೇಲೆ ನಡೆಯಲಿದ್ದ ಭಾರೀ ಉಗ್ರರ ದಾಳಿಯನ್ನು ಸೇನಾ ಪಡೆಗಳು ವಿಫಲಗೊಳಿಸಿರುವ ಘಟನೆ ನಡೆದಿದೆ.
ಜಮ್ಮುವಿನ ರಟ್ನುಚಕ್ ಸೇನಾ ಕೇಂದ್ರದ ಬಳಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅನುಮಾನಾಸ್ಪದ ಓಡಾಟಗಳನ್ನು ಭದ್ರತಾಪಡೆಗಳು ಗಮನಿಸಿದ್ದಾರೆ. ಮುಸುಧಾರಿಗಳಾಗಿ ಬಂದ ಇಬ್ಬರು ವ್ಯಕ್ತಿಗಳು ಸೇನಾ ಮುಖ್ಯದ್ವಾರದ ಬಳಿ ಬಂದಿದ್ದಾರೆ. ಇದನ್ನು ಗಮನಿಸಿದ ಭದ್ರತಾಪಡೆಗಳು ಗುಂಡಿನ ದಾಳಿ ನಡೆಸಿ ಹಿಮ್ಮೆಟ್ಟಿಸಿದ್ದಾರೆ ಎಂದು ವರದಿಯಾಗಿದೆ.
ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಪ್ರತಿ ದಾಳಿ ನಡೆಸಿದ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಸೇನಾಪಡೆಗಳು ಕಾರ್ಯಾಚರಣೆ ಆರಂಭಿಸಿವೆ.
Discussion about this post