ಸಾಗರ: ತಾಲೂಕಿನ ಅರಳಗೋಡು ಪಂಚಾಯ್ತಿ ವ್ಯಾಪ್ತಿಯಲ್ಲಿ ಮಂಗನಕಾಯಿಲೆಗೆ ಬಲಿಯಾದ ಪಾಶ್ವನಾಥ್ ಜೈನ್ ಅವರ ನಿವಾಸಕ್ಕೆ ಭೇಟಿ ನೀಡಿದ ಜಿಪಂ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ಸಾಂತ್ವನ ಹೇಳಿದರು.
ಮಂಡವಳಲಿ ಗ್ರಾಮದ ಪಾಶ್ವನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದ ಕಾಂತೇಶ್, ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ 1,60,000/- ಸರ್ಕಾರದಿಂದ ಪರಿಹಾರವನ್ನು ನೀಡಲು ಡಿ.ಹಚ್.ಓ.ರವರಿಗೆ ಸೂಚಿಸಿದರು.
ಇನ್ನು, ಪಾಶ್ವನಾಥ್ ಅವರ ಇಬ್ಬರೂ ಹೆಣ್ಣು ಮಕ್ಕಳಿಗೆ ಶಿವಮೊಗ್ಗದಲ್ಲಿರುವ ತಮ್ಮ ಪೇಸ್ ಕಾಲೇಜಿನಲ್ಲಿ ಉಚಿತ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.















