ಪೋರ್ಟ್ ಬ್ಲೇರ್: ಅಂಡಮಾನ್ ಹಾಗೂ ನಿಕೋಬಾರ್ ನ ಮೂರು ದ್ವೀಪಗಳ ಹೆಸರುಗಳನ್ನು ಬದಲಾವಣೆ ಮಾಡಿರುವುದಾಗಿ ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತಾಜಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ಅಂಡಮಾನ್ ನಿಕೋಬಾರ್ ಪ್ರವಾಸದಲ್ಲಿರುವ ಪ್ರಧಾನಿಯವರು, ಮೂರು ದ್ವೀಪಗಳ ಹೆಸರನ್ನು ಮರುನಾಮಕರಣ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
PM @narendramodi hoists high mast flag at South Point, Marina Park, #PortBlair to mark the 75th Anniversary of the hoisting of #Tricolour on Indian soil by Netaji Subhas Chandra Bose pic.twitter.com/fVDerlJ1W5
— Doordarshan News (@DDNewsLive) December 30, 2018
ತ್ರಿವರ್ಣ ಧ್ವಜವನ್ನು ನೇತಾಜಿಯವರು ಅನಾವರಣ ಮಾಡಿ 75 ವರ್ಷ ಸಂದ ಹಿನ್ನೆಲೆಯಲ್ಲಿ ಇಲ್ಲಿನ ರಾಸ್ ದ್ವೀಪಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.
ಇದರೊಂದಿಗೆ, ನೀಲ್ ದ್ವೀಪವನ್ನು ಶಾಹೀದ್ ದ್ವೀಪ ಎಂಬುದಾಗಿ ಹಾಗೂ ಹ್ಯಾವ್ ಲಾಕ್ ದ್ವೀಪವನ್ನು ಸ್ವರಾಜ್ ದ್ವೀಪ ಎಂಬುದಾಗಿ ಹೆಸರನ್ನು ಬದಲಾವಣೆ ಮಾಡಿರುವುದಾಗಿ ಅವರು ಘೋಷಿಸಿದ್ದಾರೆ.






Discussion about this post