No Result
View All Result
Bengaluru Gets a World-Class Electronics Co-Innovation Hub as Henkel Launches Advanced Application Center
English Articles

Bengaluru Gets a World-Class Electronics Co-Innovation Hub as Henkel Launches Advanced Application Center

by ಕಲ್ಪ ನ್ಯೂಸ್
March 17, 2026
0

Kalpa Media House  |  Bengaluru | Henkel today announced the launch of its Customer Application Center in Bengaluru, reinforcing its...

Read moreDetails
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
  • Advertise With Us
  • Grievances
  • About Us
  • Contact Us
Tuesday, March 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಿಮ್ಮ ದರ ಏರಿಕೆಗೆ ಸಮರ್ಥನೆಯಿದೆ, ಮೋದಿಗಿಲ್ಲ ಅಲ್ಲವೇ ಕುಮಾರಸ್ವಾಮಿಯವರೇ?

ಭಾರತ್ ಬಂದ್ ಮಾಡಿದ್ದ ಪಾಷಂಡಿಗಳು ಈಗೆಲ್ಲಿ ಸತ್ತಿದ್ದಾರೆ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 5, 2019
in Special Articles
0
ನಿಮ್ಮ ದರ ಏರಿಕೆಗೆ ಸಮರ್ಥನೆಯಿದೆ, ಮೋದಿಗಿಲ್ಲ ಅಲ್ಲವೇ ಕುಮಾರಸ್ವಾಮಿಯವರೇ?
Share on FacebookShare on TwitterShare on WhatsApp

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದಾಗಿನಿಂದ ಇಂದಿನವರೆಗೂ ಅವರ ವಿರುದ್ಧ ಸೀಳುನಾಯಿಗಳಂತೆ ಮುಗಿಬೀಳುತ್ತಾ, ಸೋಲನ್ನು ಅನುಭವಿಸುತ್ತಾ, ಕಂಡ ಕಂಡಲ್ಲಿ ಮೋದಿ ವಿರುದ್ಧ ಬಾಯಿಗೆ ಬಂದಂತೆ ಹರಟುವ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಡಪಕ್ಷಗಳ ನಾಯಕರು ಈಗೆಲ್ಲಿ ಸತ್ತಿದ್ದಾರೆ?

ಒಂದೆಡೆ ಜಾಗತಿಕ ಮಟ್ಟದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇವುಗಳ ಮೇಲಿನ ದರ ಇಳಿಕೆಗೆ ಕ್ರಮ ಕೈಗೊಂಡಿದೆ. ಆದರೆ, ಇಲ್ಲಿ, ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮಾತ್ರ ತೈಲ ಬೆಲೆ ಏರಿಕೆ ಮಾಡುವ ಮೂಲಕ ಕರುನಾಡಿಗರಿಗೆ ಹೊಸ ವರ್ಷದ ಉಡುಗೊರೆ(?) ನೀಡಿದೆ.

ನಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಜೆಡಿಎಸ್, ನಾವೂ ಜನಪರ ಎಂದು ಬೀಗುವ ಕಾಂಗ್ರೆಸ್ ಎರಡೂ ಸೇರಿಕೊಂಡು ಕರುನಾಡಿಗರಿಗೆ ಬರೆ ಎಳೆದಿದ್ದು, ಇದಾವ ರೀತಿಯ ಆಡಳಿತ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

ಇಷ್ಟಕ್ಕೂ ಮೀರಿ, ದರ ಏರಿಕೆಯನ್ನು ಭಂಡತನದಿಂದ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ತೆರಿಗೆ ಏರಿಕೆ ಮಾಡಿದ್ದರೂ ಬೇರೆ ರಾಜ್ಯಗಳಿಗಿಂತಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆಯಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ನಾಚಿಕೆಯಾಗಬೇಕು ನಿಮಗೆ! ತಾವು ಜನಪ್ರಿಯ, ಜನಪರ, ಬಡವರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಆಡುವ ಮಾತೇ ಇದು.
ಆಯಿತು ನೀವು ಹೇಳುವಂತೆ ಇತರೆ ರಾಜ್ಯಗಳಿಗಿಂತಲೂ ನಮ್ಮಲ್ಲಿ ಕೊಂಚ ಕಡಿಮೆಯಿದೆ ಎಂದುಕೊಳ್ಳೋಣ. ಆದರೆ, ದರ ಏರಿಕೆಗೆ ಮಾತ್ರ ಇತರ ರಾಜ್ಯಗಳಿಗೆ ಹೋಲಿಕೆ ಮಾಡುವ ನೀವು ದರ ಕಡಿಮೆ ಇರುವ ರಾಜ್ಯಗಳಿಗೆ ಏಕೆ ಹೋಲಿಕೆ ಮಾಡಿಕೊಳ್ಳುವುದಿಲ್ಲ?

ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ಎರಡನೆಯ ದಿಟಿವೂ ಕಡಿತಗೊಂಡಿದ್ದು, ದರ ಪರಿಷ್ಕರಣೆ ನಂತರ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ 15-16 ಪೈಸೆ ಕಡಿಮೆಯಾಗಿದ್ದರೆ, ಡೀಸೆಲ್ 18-20 ಪೈಸೆ ಅಗ್ಗವಾಗಿದೆ.

ಆದರೆ, ಬೆಂಗಳೂರಿನಲ್ಲಿ ಇಂಧನ ಬೆಲೆ ಇಳಿಕೆಗೆ ಸಾಕ್ಷಿಯಾಗಿದ್ದರೂ ಕೂಡ ರಾಜ್ಯ ಸರ್ಕಾರವು ತೆರಿಗೆ ಏರಿಸಿರುವುದರ ಪರಿಣಾಮವಾಗಿ ಲೀಟರ್ ಪೆಟ್ರೋಲ್‌ಗೆ 1.52 ರೂ. ಏರಿಕೆಯಾಗಿ 70.53 ರೂ.ಗಳಷ್ಟಿದೆ. ಇನ್ನು ಡೀಸೆಲ್ ಬೆಲೆಯಲ್ಲೂ 1.50 ರೂ. ಏರಿಕೆಯಾಗಿ 64.30 ರೂ.ಗೆ ಮಾರಾಟವಾಗುತ್ತಿದೆ.

ಇನ್ನು ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್‌ಗೆ 15 ಪೈಸೆ ಕಡಿಮೆಯಾಗುವ ಮೂಲಕ 68.29 ರೂ.ಗಳಷ್ಟಿದ್ದರೆ, ಡೀಸೆಲ್ 18 ಪೈಸೆ ಇಳಿಕೆಯಾಗಿ 62.86 ರೂ.ಗಳಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್ 73.59 ರೂ.ಗೆ ಮಾರಾಟವಾಗುತ್ತಿದ್ದು, 15 ಪೈಸೆ ಕಡಿಮೆಯಾಗಿದೆ. ಇನ್ನು ಡೀಸೆಲ್ ಲೀ.ಗೆ 20 ಪೈಸೆ ಕಡಿಮೆಯಾಗಿ 65.14 ರೂ.ಗಳಷ್ಟಿದೆ. ಚೆನ್ನೆನಲ್ಲಿ ಪೆಟ್ರೋಲ್ ಲೀ.ಗೆ 16 ಪೈಸೆ ಕಡಿಮೆಯಾಗಿ 70.85. ರೂ.ಗಳಿದ್ದರೆ, ಲೀಟರ್ ಡೀಸೆಲ್ 65.72 ರೂ.ಗಳಿಗೆ ಮಾರಾಟವಾಗುವ ಮೂಲಕ 19 ಪೈಸೆ ಇಳಿಕೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿಯೂ 15 ಪೈಸೆ ಕಡಿಮೆಯಾಗಿ 70.43 ರೂ.ಗೆ ಪೆಟ್ರೋಲ್ ಮಾರಾಟವಾಗುತ್ತಿದ್ದು, ಡೀಸೆಲ್ ಪ್ರತಿ ಲೀಟರ್‌ಗೆ 18 ಪೈಸೆ ಕಡಿಮೆಯಾಗಿ 64.03 ರೂ.ಗಳಷ್ಟಿದೆ.

ಒಟ್ಟಾರೆಯಾಗಿ ನೋಡುವುದಾದರೆ ರಾಷ್ಟçದಾದ್ಯಂತ ಪ್ರಸ್ತುತ ತೈಲ ಬೆಲೆ ಎಷ್ಟಿದೆಯೋ ರಾಜ್ಯದಲ್ಲೂ ಬಹುತೇಕ ಅಷ್ಟೇ ಇದೆಯೇ ಹೊರತು, ತೆರಿಗೆ ಏರಿಕೆ ಮಾಡಿದರೂ ಬೇರೆ ರಾಜ್ಯಗಳಿಗಿಂತಲೂ ಕಡಿಮೆ ಎಂದು ಮುಖ್ಯಮಂತ್ರಿಗಳು ಬೀಗುವಂತಹ ಸಾಧನೆಯೇನೂ ಇಲ್ಲ ಎಂಬುದು ಸತ್ಯ.

ಈ ವಿಚಾರವನ್ನು ಹೊರತುಪಡಿಸಿ ನೋಡುವುದಾದರೆ, ತೈಲ ಬೆಲೆ ಏರಿಕೆಯಾಯಿತು ಎಂಬ ನೆಪವೊಡ್ಡಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಡಪಕ್ಷಗಳೆಲ್ಲಾ ಸೇರಿಕೊಂಡು ಭಾರತ್ ಬಂದ್ ಮಾಡಿ ಕೋಟ್ಯಂತರ ರೂ. ನಷ್ಟ ಮಾಡಿದ್ದವು. ಆದರೆ, ಇದೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಈಗ ರಾಜ್ಯದಲ್ಲಿ ತೆರಿಗೆ ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆಯಲ್ಲಾ ಈ ಸರ್ಕಾರವನ್ನು ಯಾವ ಪದಗಳಿಂದ ಜರಿಯಬೇಕು?

ಅಂದು ಪುಂಖಾನುಪುಂಖವಾಗಿ ಮೋದಿ ಸರ್ಕಾರದ ವಿರುದ್ದ ಮಾತನಾಡಿದ್ದ ರಾಹುಲ್ ಗಾಂಧಿ, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ದೋಸ್ತಿ ಪಕ್ಷದ ಮುಂದಾಳುಗಳು ಈಗ ಏನು ಹೇಳುತ್ತಾರೆ?

ಭಾರತ್ ಬಂದ್ ನೆಪ ಮಾಡಿಕೊಂಡು ಕೋಟ್ಯಂತರ ರೂ. ಬೆಲೆಯ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ ಹಾಗೂ ಅದಕ್ಕೆ ಕಾರಣವಾದ ಮುಖಂಡ ಪಾಷಂಡಿಗಳು ಈಗೆಲ್ಲಿ ಸತ್ತಿದ್ದಾರೆ?

ಪ್ರಮುಖವಾಗಿ ತೈಲ ಬೆಲೆಗಳು ಜಾಗತಿಕ ಮಾರುಕಟ್ಟೆಯ ಏರಿಳಿತದ ಮೇಲೆ ಅವಲಂಬನೆಯಾಗಿರುತ್ತದೆ. ಅಲ್ಲಿ, ಹೆಚ್ಚಾದರೆ ಇಲ್ಲೂ ಹೆಚ್ಚಾಗುತ್ತದೆ. ಅಲ್ಲಿ ಕಡಿಮೆಯಾದರೆ, ಇಲ್ಲೂ ಕಡಿಮೆಯಾಗುತ್ತದೆ. ಆದರೆ, ಪ್ರಜಾಹಿತವನ್ನು ಬಯಸುವ ಯಾವುದೇ ಸರ್ಕಾರ ಬೆಲೆ ಹೆಚ್ಚಾದಾಗ ಅದರ ಮೇಲಿನ ತೆರಿಗೆ ಕಡಿಮೆ ಮಾಡುವ ಮೂಲಕ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಬೇಕು. ಅದೂ, ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ತೊಂದರೆಯಾಗದಂತೆ.

ಹೀಗಿರುವಾಗ, ಅಂದು ಮೋದಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ, ತಾವೊಬ್ಬ ಜನಹಿತಕ್ಕಾಗಿಯೇ ಉದಯಿಸಿದ ಅವತಾರ ಪುರುಷ ಎಂಬಂತೆ ಬೀಗುವ ಕುಮಾರಸ್ವಾಮಿ, ಈಗ ಜನಹಿತವನ್ನು ಕಡೆಗಣಿಸಿ ತೆರಿಗೆ ಏರಿಕೆ ಮಾಡಿರುವುದು ಯಾವ ಪುರುಷಾರ್ಥಕ್ಕೆ. ನೀವು ಹೀಗೆ ಏರಿಕೆ ಮಾಡಿ, ಅದನ್ನು ಸಮರ್ಥಿಸಿಕೊಳ್ಳುತ್ತೀರ ಎಂದರೆ, ಅಂದು ದರ ಏರಿಕೆಯಾದಾಗ ಮೋದಿ ಅವರಿಗೂ ನೂರೊಂದು ಸಮರ್ಥನೆಗಳಿತ್ತು. ಆಗ ಯಾವ ನೈತಿಕತೆಯಿಟ್ಟುಕೊಂಡು ಪ್ರಧಾನಿಯವರ ವಿರುದ್ಧ ಮಾತನಾಡಿದಿರಿ ಕುಮಾರಸ್ವಾಮಿಯವರೇ? ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಕೇಳಿ. ಅದೂ ಇದ್ದರೆ…!

-ವಷಿಷ್ಠ

Tags: BJPCM H D KumaraswamycongressDieselJDSKannada NewspetrolPetrol Price hike in KarnatakaPM Narendra ModiRahul Gandhi
Share196Tweet123Send
Previous Post

ಜಮ್ಮು ಗಡಿಯಲ್ಲಿ ಸೇನೆ ಕಾರ್ಯಾಚರಣೆ, ಗುಂಡಿನ ಚಕಮಕಿ

Next Post

ಸಿಎಂ ಕುಮಾರಸ್ವಾಮಿ ಕಾಪಿ ಪೇಸ್ಟ್ ಸಾಧನೆ! ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸಿಎಂ ಕುಮಾರಸ್ವಾಮಿ ಕಾಪಿ ಪೇಸ್ಟ್ ಸಾಧನೆ! ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಸಿಎಂ ಕುಮಾರಸ್ವಾಮಿ ಕಾಪಿ ಪೇಸ್ಟ್ ಸಾಧನೆ! ಸೋಷಿಯಲ್ ಮೀಡಿಯಾದಲ್ಲಿ ವೈರಲ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ತರೀಕೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೆಂಗಳೂರು ಆಕಾಶವಾಣಿ ಮುಖ್ಯಸ್ಥ ಶಂಕರ ನಾರಾಯಣ ಆಯ್ಕೆ

ತರೀಕೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೆಂಗಳೂರು ಆಕಾಶವಾಣಿ ಮುಖ್ಯಸ್ಥ ಶಂಕರ ನಾರಾಯಣ ಆಯ್ಕೆ

March 17, 2026
ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

March 17, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

ಅಡುಗೆ ಅನಿಲ ಸಿಲಿಂಡರ್‌ಗಾಗಿ ಸಹಾಯವಾಣಿ | ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ

March 17, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

March 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL