ಶ್ರೀನಗರ: 2010ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿ, ಜಮ್ಮು ಕಾಶ್ಮೀರದ ಇತಿಹಾಸದಲ್ಲೇ ದಾಖಲೆ ಬರೆದಿದ್ದ ಶಾ ಫೈಸಲ್ ಅವರು ನಾಗರೀಕ ಸೇವೆಗೆ ಗುಡ್ ಬೈ ಹೇಳಲಿದ್ದು, ರಾಜಕೀಯ ಪ್ರವೇಶಿಸಲಿದ್ದಾರೆ.
ಈ ಕುರಿತಂತೆ ರಾಷ್ಟಿಯ ಮಾಧ್ಯಮವೊಂದು ವರದಿಯಾಗಿದ್ದು, ಶಾ ಫೈಸಲ್ ಅವರ ಆಪ್ತರು ಈ ವಿಚಾರವನ್ನು ತಿಳಿಸಿದ್ದಾರೆ. ಈ ಕುರಿತಂತೆ ಫೈಸಲ್ ಅವರು ಸರ್ಕಾರಕ್ಕೆ ಅಗತ್ಯವಿರುವ ನೋಟೀಸ್ ನೀಡಿದ್ದು, ತಮ್ಮ ರಾಜೀನಾಮೆ ವಿಚಾರವನ್ನು ಸಲ್ಲಿಸಿದ್ದಾರೆ ಎಂದಿದ್ದಾರೆ.
ಮಾಹಿತಿಗಳ ಅನ್ವಯ ಫೈಸಲ್ ಅವರು, ನ್ಯಾಶನಲ್ ಕಾನ್ಫರೆನ್ಸ್ ಪಕ್ಷವನ್ನು ಸೇರಲಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.
ಜಮ್ಮು ಕಾಶ್ಮೀರ ಮೂಲದ ಶಾ ಫೈಸಲ್ 2010ರ ಬ್ಯಾಚ್’ನಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ ಪಡೆದು, ತಮ್ಮ ರಾಜ್ಯದಲ್ಲೇ ಸೇವೆಗೆ ಅವಕಾಶ ಪಡೆದಿದ್ದರು.















