ಶಿವಮೊಗ್ಗ: ಅತಿಯಾದ ಧೂಮಪಾನ, ಮದ್ಯ ಸೇವನೆಯಂತಹ ಅಭ್ಯಾಸಗಳು ಹಾಗೂ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷ ಮಧುಮೇಹ ಕಾಯಿಲೆಗೆ ಕಾರಣವಾಗುತ್ತದೆ ಎಂದು ಸುಬ್ಬಯ್ಯ ವೈದ್ಯಕೀಯ ಮಹಾದ್ಯಾಲಯದ ವೈದ್ಯಕೀಯ ಅಧೀಕ್ಷಕ ಹಾಗೂ ವೈದ್ಯಕೀಯ ಭಾಗದ ಹಿರಿಯ ಪ್ರಾಧ್ಯಾಪಕ ಡಾ. ಬಿ. ಶ್ರೀನಿವಾಸ್ ವಿಷಾಧ ವ್ಯಕ್ತಪಡಿಸಿದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಧುಮೇಹ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಆಧುನಿಕ ಶೈಲಿಯ ಜೀವನ ಇಂದು ಮನುಷ್ಯನನ್ನು ಮಧುಮೇಹ ಪೀಡಿತನನ್ನಾಗಿ ಮಾಡುತ್ತಿದೆ. ಭಾರತ ಪ್ರಪಂಚದಲ್ಲೇ ಎರಡನೆಯ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ ಎಂದು ವಿಷಾಧಿಸಿದರು.
ಇಂದು ವಿಜ್ಞಾನ ಎಷ್ಟೇ ಮುಂದುವರೆದರೂ ಪೂರ್ಣ ಪ್ರಮಾಣದಲ್ಲಿ ಮಧುವೇಹವನ್ನು ನಿಯಂತ್ರಿಸಲು ಸಾಧ್ಯಲ್ಲ. ದಿನನಿತ್ಯ ವ್ಯಾಯಾಮ, ಆಟೋಟದಲ್ಲಿ ಪಾಲ್ಗೊಳ್ಳುವುದರಿಂದ ಹಾಗೂ ನಿಯಮಿತವಾಗಿ ವೈದ್ಯರು ನೀಡುವ ಔಷಧಿಗಳನ್ನು ಸೇವಿಸುವುದರ ಮೂಲಕ ರೋಗವನ್ನು ನಿಯಂತ್ರಿಸಬಹುದು ಎಂದು ಕಿಮಾತು ಹೇಳಿದರು.
ಮ್ಯಾಕ್ಸ್ ಆಸ್ಪತ್ರೆಯ ಮಧುಮೇಹ ತಜ್ಞರಾದ ಡಾ. ಪ್ರವೀಣ್ ಕುಮಾರ್ ದೇವರಬಾವಿ ಮಾತನಾಡಿ, ಮಧುಮೇಹವನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಗತ್ಯ. ಒಂದು ವೇಳೆ ಇದು ಉಲ್ಬಣಗೊಂಡಲ್ಲಿ ನಮ್ಮ ಕಿಡ್ನಿ, ಹೃದಯ ಹಾಗೂ ಕಣ್ಣುಗಳಿಗೆ ತೀವ್ರ ರೀತಿಯಲ್ಲಿ ಹಾನಿಮಾಡಬಲ್ಲದು ಎಂದರು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಲತಾ ನಾಗೇಂದ್ರ, ಡಾ. ವಿನಯಾ ಶ್ರೀನಿವಾಸ್, ಡಾ. ಆರ್.ಪಿ. ಪೈ, ಪ್ರಾಂಶುಪಾಲ ಡಾ. ಎಸ್.ಎಂ. ಕಟ್ಟಿ ಇನ್ನಿತರರು ಪಾಲ್ಗೊಂಡಿದ್ದರು.
ಜೀವನ ಶೈಲಿಯ ಅನೇಕ ಅಂಶಗಳು ಮಧುಮೇಹದ ಹೆಚ್ಚಳಕ್ಕೆ ಕಾರಣವಾಗಿದ್ದ, ಒಂದು ಅಧ್ಯಯನದ ಪ್ರಕಾರ ದೈಹಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರುವ, ಆರೋಗ್ಯಕರ ಆಹಾರ ಪದ್ದತಿ ಹೊಂದಿರುವ, ಧೂಮಪಾನ ಮಾಡದೆ ಇರುವ ಮತ್ತು ಮಿತವಾಗಿ ಮದ್ಯಪಾನ ಮಾಡುವ ವ್ಯಕ್ತಿಗಳಲ್ಲಿ ಕಡಿಮೆ ಮಧುಮೇಹ ಇರುತ್ತದೆ.
-ಡಾ. ಬಿ. ಶ್ರೀನಿವಾಸ್
Discussion about this post