ಬೆಂಗಳೂರು: ಫೆ.20ರಿಂದ ಆರಂಭವಾಗಲಿರುವ ಏರೋ ಇಂಡಿಯಾ ಶೋ ಹಿನ್ನೆಲೆಯಲ್ಲಿ ಫ್ರೆಂಚ್ ಏರ್ ಫೋರ್ಸ್’ಗೆ ಸೇರಿದ ಎರಡು ರಾಫೆಲ್ ಯುದ್ಧ ವಿಮಾನಗಳು ಬೆಂಗಳೂರಿಗೆ ಬಂದಿಳಿದಿವೆ.
ಈಗ ಬಂದಿರುವ ಯುದ್ಧ ವಿಮಾನಗಳಲ್ಲದೇ, ದ್ವೈವಾರ್ಷಿಕ ಏರ್ ಶೋ ಹಾಗೂ ಏವಿಯೇಶನ್ ಎಕ್ಸಿಬಿಶನ್’ಗಾಗಿ ಇನ್ನೊಂದು ವಿಮಾನ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.
ಈ ಕುರಿತಂತೆ ಮಾತನಾಡಿರುವ ಐಎಎಫ್ ಡೆಪ್ಯೂಟಿ ಏರ್ ಚೀಫ್ ಮಾರ್ಷಲ್ ವಿವೇಕ್ ಚೌದರಿ, ಈಗ ಆಗಮಿಸಿರುವ ಫ್ರಾನ್ಸ್’ನ ರಾಫೆಲ್ ಯುದ್ಧ ವಿಮಾನಗಳು ದೇಶದಲ್ಲಿರುವಷ್ಟು ದಿನ ಭಾರತೀಯ ವಾಯು ಸೇನೆಯ ಪೈಲಟ್’ಗಳೂ ಸಹ ಅವನ್ನು ಹಾರಿಸಲಿದ್ದಾರೆ ಎಂದಿದ್ದಾರೆ.
ಫೆ.20ರಿಂದ ಆರಂಭವಾಗಿ ಐದು ದಿನಗಳ ಕಾಲ ನಡೆಯುವ ಏರೋ ಇಂಡಿಯಾ ಶೋನಲ್ಲಿ 368 ಎಕ್ಸಿಬಿರ‍್ಸ್’ಗಳಿದ್ದು, 61 ಏರ್ ಕ್ರಾಫ್ಟ್’ಗಳು ಪ್ರದರ್ಶನಗೊಳ್ಳಲಿವೆ.

















