ಮಂಗಳೂರು: ಹೌದು… ದೇಶ ಕಂಡ ಮಹಾನ್ ಸಂತ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರು ಇನ್ನು ಮುಂದೆ ಡಾ.ಪೇಜಾವರ ಶ್ರೀಗಳು…
ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಪೇಜಾವರ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿ, ಈಗ ಅದನ್ನು ಶ್ರೀಗಳಿಗೆ ಸಮರ್ಪಣೆ ಮಾಡಿದೆ.
ಅಧ್ಯಾತ್ಮ ಮತ್ತು ಸಾಮಾಜಿಕ ಸುಧಾರಣೆ ಹಾಗೂ ಆಧ್ಯಾತ್ಮ ಕ್ಷೇತ್ರಕ್ಕೆ ತಮ್ಮ ಜೀವಿತಾವಧಿ ಪೂರ್ಣ ಕೊಡುಗೆ ನೀಡಿದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರನ್ನು ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಸಮರ್ಪಣೆ ಮಾಡಿದೆ.
Discussion about this post