ಪುಲ್ವಾಮಾ: ಇಂದು ನಸುನ ವೇಳೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ನಡೆಸಿ, ನಾಲ್ವರು ಯೋಧರನ್ನು ಬಲಿ ಪಡೆದು ಉಗ್ರರ ತಂಡದಲ್ಲಿ ಇಬ್ಬರನ್ನು ಈಗಾಗಲೇ ಭಾರತೀಯ ಯೋಧರು ಅಟ್ಟಾಡಿಸಿ ಬೇಟೆಯಾಡಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಓರ್ವ ಮೇಜರ್ ಸೇರಿದಂತೆ ನಾಲ್ವರು ಯೋಧರನ್ನು ಜೈಷ್ ಉಗ್ರರು ಹತ್ಯೆ ಮಾಡಿದ್ದರು. ಇದರಿಂದ ಕೆರಳಿದ ಭಾರತೀಯ ಯೋಧರು ಉಗ್ರರು ಅಡಗಿದ್ದ ಪ್ರದೇಶವನ್ನು ಸುತ್ತುವರೆದಿದ್ದಾರೆ. ಈ ವೇಳೆ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿದೆ. ಆದರೆ, ರೊಚ್ಚಿಗೆದ್ದಿದ್ದ ಯೋಧರು ಇಬ್ಬರು ಉಗ್ರರನ್ನು ಅಕ್ಷರಶಃ ಅಟ್ಟಾಡಿಸಿ ಬಲಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಭಾಗದಲ್ಲಿ ಇನ್ನೂ ಹಲವು ಉಗ್ರರು ಅಡಗಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.
ಉಗ್ರರು ಅಡಗಿದ್ದ ಪ್ರದೇಶ ಜನವಸತಿಯಿಂದ ಕೂಡಿದ್ದ ಕಾರಣ, ಯಾವುದೇ ನಾಗರಿಕರ ಪ್ರಾಣಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿದ್ದ ಕಾರಣ ಕಾರ್ಯಾಚರಣೆ ತಡವಾಗಿದೆ ಎಂದು ಹೇಳಲಾಗಿದೆ.

















