ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಪಾಕಿಸ್ಥಾನದ ಪಾತ್ರವಿಲ್ಲ ಎಂದು ಹೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್’ಗೆ ತಿರುಗೇಟು ನೀಡಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಉಗ್ರ ಮಸೂದ್ ಅಜರ್’ನ ವಿರುದ್ಧ ನೀವು ಕ್ರಮ ಕೈಗೊಳ್ಳುತ್ತೀರೋ ಅಥವಾ ಭಾರತವೇ ಬರಬೇಕೋ ಎಂದು ಎಚ್ಚರಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಪಾಕಿಸ್ಥಾನದ ಬಹಾವಾಲ್ಫುರದಲ್ಲೇ ಆರಾಮವಾಗಿ ಓಡಾಡಿಕೊಂಡಿದ್ದಾನೆ. ಅವನ ವಿರುದ್ಧ ಕ್ರಮ ಕೈಗೊಂಡು ಬಂಧಿಸುತ್ತೀರೋ ಅಥವಾ ಭಾರತವೇ ಬರಬೇಕೋ ಯೋಚಿಸಿ ಎಂದು ಗುಡುಗಿದ್ದಾರೆ.
Dear @ImranKhanPTI you have Jaish chief Masood Azhar sitting in Bahawalpur & masterminding the attacks with ISI help. Go pick him up from there. If you can’t let us know, we’ll do it for you. BTW what has been done about the proofs of Mumbai’s 26/11 attack. Time to walk the talk. pic.twitter.com/Zct6I7QieY
— Capt.Amarinder Singh (@capt_amarinder) February 19, 2019
ನಿಮ್ಮಲ್ಲೇ ಇರುವ ಈತನಿಗೆ ಐಎಸ್”ಐ ಸಹ ಬೆಂಬಲ ನೀಡುತ್ತಿದ್ದು, ಮೊದಲು ಅವನನ್ನು ಬಂಧಿಸಿ ಕ್ರಮ ಕೈಗೊಳ್ಳಿ. ನಿಮಗೆ ಆಗುವುದಿಲ್ಲ ಎಂದರೆ ಹೇಳಿ, ನಾವು ಅದನ್ನು ಮಾಡುತ್ತೇವೆ. ಅದಕ್ಕೂ ಪ್ರಮುಖವಾಗಿ 26/11ರ ದಾಳಿಯ ಪ್ರಕರಣದಲ್ಲಿ ನಾವು ಸಾಕ್ಷಿ ನೀಡಿದ್ದೆವು. ಆ ಪ್ರಕರಣವನ್ನು ಏನು ಮಾಡಿದಿರಿ. ಈ ವಿಚಾರದಲ್ಲಿ ಚರ್ಚೆಯಾಗಬೇಕಿದೆ ಎಂದು ಗುಡುಗಿದ್ದಾರೆ.
Discussion about this post