Read - < 1 minute
ನವದೆಹಲಿ: ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಕಡೆಗಳಲ್ಲಿ ಇಂದು ಮುಂಜಾನೆ ಲಘು ಭೂಕಂಪನ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದ್ದು ಉತ್ತರ ಪ್ರದೇಶ ಮುಜಾಫರ್ ನಗರದ ನೈಋತ್ಯ ಭಾಗದಲ್ಲಿ ಭೂಕಂಪನ ಕೇಂದ್ರವಿತ್ತು. ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ಭೂಕಂಪನ ಅನುಭವವಾಗಿದ್ದು ಭೂಮಿಯ 6 ಕಿಮೀ ಆಳದಲ್ಲಿ ಕಂಪನವಾಗಿರುವ ಎಂದು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Discussion about this post