ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಯುದ್ಧ ಘೋಷಣೆಯಾಗುವಂತಹ ಸನ್ನಿವೇಶಗಳ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಎಲ್ಲ ಪ್ರಮುಖ ನಗರ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಕರಾವಳಿ ಸೇರಿದಂತೆ ಎಲ್ಲ ಕಡೆಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯ ಮಟ್ಟಿಗೆ ನೋಡುವುದಾದರೆ ಬೆಂಗಳೂರು ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಟಿಕೆಟ್ ಇಲ್ಲದ ಯಾರನ್ನೂ ನಿಲ್ದಾಣದ ಒಳಗೆ ಬಿಡದಂತೆ ಆದೇಶಿಸಲಾಗಿದೆ.
ಶ್ವಾನದಳ, ಮಫ್ತಿ ಪೊಲೀಸರ ಗಸ್ತು ಹೆಚ್ಚಳ, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಇನ್ನು, ಬೆಂಗಳೂರು ನಗರ ಪೊಲೀಸ್ ಹಾಗೂ ರೈಲ್ವೆ ಪೊಲೀಸರಿಂದ ಜಂಟಿ ಭದ್ರತೆ ನೀಡಲಾಗಿದೆ.
ಇನ್ನು, ಬೆಂಗಳೂರು ಅಂತಾರಾಷ್ಟಿಯ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದ ಪ್ರಮುಖ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪ್ರತಿಯೊಂದು ಚಲನವಲನಗಳ ಮೇಲೂ ನಿಗಾ ವಹಿಸಲು ಸೂಚಿಸಲಾಗಿದೆ.
ಹಾಗೆಯೇ, ಕರಾವಳಿ ಭಾಗದಲ್ಲೂ ಸಹ ಕಟ್ಟೆಚ್ಚರ ವಹಿಸಲಾಗಿದ್ದು, ಬಂದರು ಹಾಗೂ ಸಮುದ್ರ ತೀರಗಳಲ್ಲಿ ನಿಗಾ ವಹಿಸಲಾಗಿದೆ.
ವಿಮಾನ ಸಂಚಾರ ಪುನಾರಂಭ
ಭಾರತ ಮತ್ತು ಪಾಕಿಸ್ಥಾನದ ನಡುವೆ ಯುದ್ಧಭೀತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸ್ಥಗಿತವಾಗಿದ್ದ ನಾಗರಿಕ ವಿಮಾನಯಾನವನ್ನು ಪುನಾರಂಂಭವಾಗುತ್ತಿದೆ.
ವಿಮಾನದ ಮಾರ್ಗದಲ್ಲಿ ಸಂಭಾವ್ಯ ಅಪಾಯಗಗಳ ಮುನ್ನೆಚ್ಚರಿಕೆಗಾಗಿ ಎಮರ್ಜೆನ್ಸಿ ಕರೆ ನೀಡಿಕೆ (ನೋಟಮ್) ಅನ್ನು ಹಿಂಪಡೆಯಲಾಗಿದೆ. ನಾಗರಿಕ ವಿಮಾನಯಾನ ಪುನಾರಂಬವಾಗಲಿದೆ
ಬೆಳಿಗ್ಗೆಯಿಂದ ಮುಚ್ಚಿದ್ದ ದೇಶದ ಒಂಬತ್ತು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನಯಾನ ಮತ್ತೆ ಪುನಾರಂಭವಾಗಲಿದೆ ಎಂದು ಡಿಜಿಸಿಎ ಹೇಳಿದೆ.
Discussion about this post