ಭದ್ರಾವತಿ: ಹೊಸಮನೆ ಸುಭಾಶ್ ನಗರದ ಅಕ್ಕಮಹಾದೇವಿ ಶಾಲೆ ಮಾರ್ಗ ಮಧ್ಯದ ರಸ್ತೆ ಕಾಮಗಾರಿ ವಿಳಂಬಗೊಂಡಿದ್ದರಿಂದ ಆಕ್ರೋಶಗೊಂಡ ನಿವಾಸಿಗಳು ಪ್ರತಿಭಟಿಸಿದರು. ಸ್ಥಳಕ್ಕೆ ಪೌರಾಯುಕ್ತ ಮನೋಹರ್ ದೌಡಾಯಿಸಿ ನೀಡಿದ ಭರವಸೆಯಿಂದಾಗಿ ನಿವಾಸಿಗಳು ಪ್ರತಿಭಟನೆ ಕೈ ಬಿಟ್ಟ ಘಟನೆ ಮಂಗಳವಾರ ನಡೆಯಿತು.
ಅಕ್ಕಮಹಾದೇವಿ ಶಾಲಾ ರಸ್ತೆಯಲ್ಲಿ ಗುಂಡಿಗಳನ್ನು ತೆಗೆಯಲಾಗಿದ್ದು ಹಲವು ತಿಂಗಳು ಕಳೆದರು ಮುಚ್ಚದೆ, ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಮಂದಗತಿಯಿಂದಾಗಿ ಶಾಲಾ ಮಕ್ಕಳು ಸೇರಿದಂತೆ ನಿವಾಸಿಗಳಿಗೆ ಅಪಾರ ತೊಂದರೆ ಉಂಟಾಗಿತ್ತು. ನಗರಸಭೆಗೆ ಸಾಕಷ್ಟು ಭಾರಿ ದೂರು ನೀಡಿದ್ದರು. ನಿರ್ಲಕ್ಷ ಧೋರಣೆ ತಾಳಿದ್ದರಿಂದಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್ ನೇತೃತ್ವದಲ್ಲಿ ನಡೆಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post