ಭದ್ರಾವತಿ: ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಯಡೇಹಳ್ಳಿ ಕ್ಷೇತ್ರದ ಸದಸ್ಯೆ ಆಶಾ ಶ್ರೀಧರ್ ಅವಿರೋಧವಾಗಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಜೆಡಿಎಸ್’ನ ಯಶೋಧಮ್ಮ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದಿತ್ತು. ತಾಪಂನ ಯಾವ ಸದಸ್ಯರು ಅಧ್ಯಕ್ಷ ಗಾದಿಗೆ ಅರ್ಜಿ ಸಲ್ಲಿಸದೆ ಇದ್ದುದ್ದರಿಂದ ಸಾಮಾನ್ಯ ಮಹಿಳಾ ಮೀಸಲಾತಿ ಸ್ಥಾನಕ್ಕೆ ಆಶಾ ಶ್ರೀಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಪಂ ನಲ್ಲಿ ಕಾಂಗ್ರೆಸ್ ಪಕ್ಷದ 6, ಜೆಡಿಎಸ್ ಪಕ್ಷದ 9 ಹಾಗು ಬಿಜೆಪಿಯ 4 ಸ್ಥಾನ ಒಟ್ಟು 19 ಸ್ಥಾನಗಳನ್ನು ಹೊಂದಿರುವ ತಾಪಂನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಡಂಬಡಿಕೆಯಲ್ಲಿ ಈ ಹಿಂದೆ ಜೆಡಿಎಸ್‌ನ ಸದಸ್ಯೆ ಯಶೋದಮ್ಮ ಅಧ್ಯಕ್ಷರಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಈಗ ಕಾಂಗ್ರೆಸ್ ಪಕ್ಷಕ್ಕೆ ಹೊಂದಾಣಿಕೆಯಂತೆ ಅಧ್ಯಕ್ಷೆಗಾದಿ ಒಲಿದಿದೆ.
ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಕಾರ್ಯನಿರ್ವಹಿಸಿದ್ದರು. ಚುನಾವಣೆ ಫಲಿತಾಂಶ ಘೋಷಣೆ ಮಾಡಿದ ನಂತರ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿ ಗೌರವಿಸಿದರು. ನಂತರ ಜಿಪಂ ಸದಸ್ಯರಾದ ಮಣಿಶೇಖರ್, ರೇಖಾ ಉಮೇಶ್, ಮಾಜಿ ಸದಸ್ಯರಾದ ಎಸ್.ಕುಮಾರ್, ಎಚ್.ಎಲ್.ಷಡಾಕ್ಷರಿ, ಮುಖಂಡರಾದ ಪಲ್ಲವಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದು ಶುಭ ಹಾರೈಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post