ನವದೆಹಲಿ: ಭಯೋತ್ಪಾದನಾ ಕಾರ್ಖಾನೆಯಾಗಿ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಪಾಕಿಸ್ಥಾನ ಜಾಗತಿಕವಾಗಿ ಮತ್ತೊಮ್ಮೆ ಅನಾಥವಾಗಿದ್ದು, ವಿಶ್ವದ ಪ್ರಮುಖ ರಾಷ್ಟçಗಳು ಭಾರತಕ್ಕೆ ಬೇಷರತ್ ಬೆಂಬಲ ಘೋಷಣೆ ಮಾಡಿವೆ.
ಉಗ್ರವಾದವನ್ನು ಧಮನಿಸುವಂತೆ ಹಾಗೂ ಪೋಷಣೆ ಮಾಡದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಪಾಕಿಸ್ಥಾನಕ್ಕೆ ನಿರಂತರವಾಗಿ ತಾಕೀತು ಮಾಡುತ್ತಲೇ ಬಂದಿವೆ. ಆದರೆ, ಇದೆಲ್ಲವನ್ನೂ ನಿರ್ಲಕ್ಷಿಸಿರುವ ಪಾಕ್, ಈಗ ಭಾರತದ ವಿರುದ್ಧ ಯುದ್ಧ ಸಾರುವ ಹಂತಕ್ಕೆ ಬಂದು ನಿಂತಿದೆ.
ಈ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಾದ ಅಮೆರಿಕಾ, ಬ್ರಿಟನ್ ಹಾಗೂ ಫ್ರಾನ್ಸ್’ಗಳು ಭಾರತಕ್ಕೆ ಬೆಂಬಲ ಘೋಷಿಸಿದ್ದು, ಉಗ್ರವಾದವನ್ನು ಪೋಷಿಸುತ್ತಿರುವ ಪಾಕ್ ವಿರುದ್ಧದ ಹೋರಾಟದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದಿವೆ.
ಪ್ರಮುಖವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಜೈಷ್ ಮುಖಂಡ ಮಸೂದ್’ನನ್ನು ಕಪ್ಪು ಪಟ್ಟಿಗೆ ಸೇರಿಸುವಲ್ಲಿ ಭಾರತದೊಂದಿಗೆ ನಿಂತು ಒತ್ತಾಯಿಸುತ್ತೇವೆ ಎಂದು ಎಲ್ಲ ರಾಷ್ಟ್ರಗಳು ಹೇಳಿವೆ.
















