ನವದೆಹಲಿ: ಇತ್ತೀಚೆಗಷ್ಠೇ ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಒಳಗಾಗಿರುವ ಜಮ್ಮು ಕಾಶ್ಮೀರದ ಜಮಾತ್ ಎ ಇಸ್ಲಾಮಿ ಸಂಘಟನೆ, ಪಾಕಿಸ್ಥಾನದ ಐಎಸ್’ಐ ಜೊತೆಯಲ್ಲಿ ನಿಂತರವಾಗಿ ಬಲವಾದ ಸಂಪರ್ಕ ಹೊಂದಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಕುರಿತಂತೆ ಖಚಿತ ಮಾಹಿತಿಗಳ ಆಧಾರದಲ್ಲಿ ವರದಿಯಾಗಿದ್ದು, ಐಎಸ್’ ಐ ಜೊತೆ ಮಾತ್ರವಲ್ಲದೇ ಪಾಕಿಸ್ಥಾನದ ಹೈ ಕಮಿಷನರ್ ಕಚೇರಿಯೊಂದಿಗೂ ಸಹ ಬಲವಾದ ನಂಟನ್ನು ಇದು ಹೊಂದಿದ್ದು, ಇದರ ಬೆಂಬಲದೊಂದಿಗೇ ಪ್ರತ್ಯೇಕತಾವಾದವನ್ನು ತೀವ್ರತರವಾಗಿ ಬೆಳೆಸುತ್ತಿದೆ ಎನ್ನಲಾಗಿದೆ.
ಈ ಸಂಸ್ಥೆ, ಕಾಶ್ಮೀರದ ಯುವಕರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲು ಸಾರಿಗೆ ಸೌಲಭ್ಯವನ್ನು ಒದಗಿಸುವುದು, ಶಸ್ತ್ರಾಸ್ತ್ರಗಳ ಬಳಕೆ ತರಬೇತಿ ನೀಡುವುದು, ಐಎಸ್‘ಐ ಜೊತೆಯಲ್ಲಿ ಸಂಪರ್ಕ ಸಾಧಿಸಿ, ಮಾಹಿತಿಗಳ ರವಾನೆ ಸೇರಿದಂತೆ ಹಲವು ದೇಶ ವಿರೋಧಿ ಕೃತ್ಯಗಳನ್ನು ಮಾಡುತ್ತಿದೆ ಎಂದು ವರದಿಯಾಗಿದೆ.
Discussion about this post