ಶ್ರೀನಗರ: ಕಳೆದ ಕೆಲವು ದಿನಗಳ ಹಿಂದೆ ಭಾರತದ ವಾಯುಗಡಿ ರೇಖೆ ದಾಟಿ ದಾಳಿ ನಡೆಸಲು ಯತ್ನಿಸಿದ್ದ ಪಾಕ್ ಯುದ್ದ ವಿಮಾನಗಳನ್ನು ಭಾರತೀಯ ಪಡೆಗಳು ಹಿಮ್ಮೆಟ್ಟಿಸಿದ ಘಟನೆ ಇನ್ನೂ ಹಸಿಯಾಗಿರುವ ಬೆನ್ನಲ್ಲೇ, ಮತ್ತೆ ಭಾರತದ ಮೇಲೆ ದಾಳಿಗೆ ಪಾಕ್ ಯತ್ನ ನಡೆಸಿದೆ.
ಪೂಂಚ್ ಸೆಕ್ಟರ್’ನಲ್ಲಿರುವ ಅಂತಾರಾಷ್ಟ್ರೀಯ ಗಡಿ ರೇಖೆಯಿಂದ 10 ಕಿಮೀ ದೂರದಲ್ಲಿ ಪಾಕಿಸ್ಥಾನದ ಎರಡು ಯುದ್ಧ ವಿಮಾನಗಳು ಹಾರಾಟ ನಡೆಸಿರುವುದನ್ನು ಭಾರತೀಯ ರಾಡಾರ್’ಗಳು ಪತ್ತೆ ಮಾಡಿವೆ.
ಭಾರೀ ಮಹತ್ವದ ವಿಚಾರವೆಂದರೆ ಕಳೆದ ರಾತ್ರಿ ಈ ಪ್ರದೇಶದಲ್ಲಿ ಸಾನಿಕ್ ಬಾಂಬ್’ಗಳ ಭಾರೀ ಶಬ್ದ ಕೇಳಿಬಂದಿದ್ದು, ದಾಳಿಗೆ ವಿಫಲ ಯತ್ನ ನಡೆಸಿವೆಯಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಈ ಹಿನ್ನೆಲೆಯಲ್ಲಿ ಇಡಿಯ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆ ಹೈ ಅಲರ್ಟ್ ಆಗಿದ್ದು, ಎಂತಹ ಸಂದರ್ಭವನ್ನೂ ಸಹ ಎದುರಿಸಲು ಸಿದ್ದವಾಗಿವೆ.
ಫೆ.27 ರಂದು ಭಾರತದ ಕಡೆಗೆ ಬರುತ್ತಿದ್ದ ಪಾಕಿಸ್ಥಾನದ ಎಫ್ -16 ವಿಮಾನವನ್ನು ಭಾರತೀಯ ವಾಯುದಾಳಿಯಿಂದ ಶೂಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಭಾರತದ ಮಿಗ್-21 ಬಿಷನ್ ವಿಮಾನ ಕೂಡಾ ಪತನಗೊಂಡಿತ್ತು. ಈ ವೇಳೆ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ತನ್ನ ವಶಕ್ಕೆ ಪಡೆದಿದ್ದ ಪಾಕಿಸ್ಥಾನ ಆನಂತರ ಭಾರತದ ರಾಜತಾಂತ್ರಿಕತೆಗೆ ಹೆದರಿ ಬಿಡುಗಡೆ ಮಾಡಿತ್ತು.
ಇದಾದ ನಂತರ ಆಗಾಗ್ಗೆ ಪಾಕಿಸ್ಥಾನ ಡ್ರೋಣ್’ಗಳು ಕೂಡಾ ಭಾರತದ ಕಡೆಗೆ ನುಗ್ಗಲು ಪ್ರಯತ್ನಿಸುತ್ತಲೇ ಇವೆ. ಎರಡು ಬಾರಿ ಪಾಕಿಸ್ಥಾನದ ಡ್ರೋಣ್’ಗಳನ್ನು ಭಾರತೀಯ ಪಡೆಗಳು ಹೊಡೆದು ಉರುಳಿಸಿದ್ದವು.
Discussion about this post