ಭದ್ರಾವತಿ: ನಗರದ ಹುತ್ತಾದ ಖಾಸಗಿ ಶಾಲೆಯೊಂದನ್ನು ರದ್ದುಪಡಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಆಕಾಶವಾಣಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಮುಖಂಡರು ಕಳೆದ 2017-18 ಸಾಲಿನಲ್ಲಿ ಸದರಿ ಖಾಸಗಿ ಶಾಲೆಯಿಂದ ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಆ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎನ್’ಆರ್ ಪುರ ಸಮೀಪ ಪ್ರವಾಸದ ಖಾಸಗೀ ಬಸ್ ಅಪಘಾತಕ್ಕೀಡಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲಿ ಮೃತಪಟ್ಟು ಹತ್ತಾರು ಜನಕ್ಕೆ ಗಂಭೀರ ಗಾಯಗಳಾಗಿದ್ದವು. ಅ ವಿದ್ಯಾರ್ಥಿಗಳ ಪೈಕಿ 10 ನೇ ತರಗತಿ ವಿದ್ಯಾರ್ಥಿನಿ ನಂದಿಗೆ ಎಂಬ ಬಾಲಕಿಗೆ ಬಲ ಕೈ ಮುರಿದು ಎಡಭಾಗದಲ್ಲಿ ಸಂಪೂರ್ಣ ಸ್ವಾಧೀನ ಕಳೆದುಕೊಂಡು ಮುಂದಿನ ಭವಿಷ್ಯ ಕತ್ತಲಿಗೆ ದೂಡಿದಂತಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಈ ಸಂಬಂಧ ತಹಸೀಲ್ದಾರರಿಗೆ ಶಾಲಾ ರದ್ದತಿಗೆ ಮನವಿ ನೀಡಲಾಗಿತ್ತು. ಆದರೆ ಶಾಲಾ ಆಡಳಿತ ಮಂಡಳಿಯ ಯಾವೊಬ್ಬರು ತಹಸೀಲ್ದಾರ್ ಸಭೆಗೆ ಹಾಜರಾಗದೆ ಮೀನ ಮೇಷಾ ಎಣಿಸುತ್ತಿದ್ದಾರೆ. ಸರಕಾರಿ ಬಸ್‌ಗಳನ್ನು ಪ್ರವಾಸಕ್ಕೆ ಕರೆದ್ಯೊಯದೆ ಖಾಸಗೀ ಬಸ್ ಕರೆದೊಯ್ದು ನಿಯಮ ಉಲ್ಲಂಘಿಸಿದ್ದಾರೆ. ಪ್ರವಾಸ ಸಂದರ್ಭದಲ್ಲಿ ಪೋಷಕರಿಗೂ ಮಾಹಿತಿ ನೀಡದೆ, ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ಪ್ರವಾಸಕ್ಕೆ ಕರೆದೊಯ್ದು ನಿಯಮ ಉಲ್ಲಂಘಿಸಿರುವ ಶಾಲೆಯ ಪರವಾನಿಗೆ ರದ್ದುಪಡಿಸಿ ಅಂಗವೈಕಲ್ಯತೆ ಹೊಂದಿರುವ ವಿದ್ಯಾರ್ಥಿನಿಗೆ ಕಾನೂನಾತ್ಮಕವಾಗಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಶ್ರೀನಿವಾಸನ್, ರವಿಕುಮಾರ್, ಎಚ್.ಎಂ. ಖಾದ್ರಿ, ಪದ್ಮನಾಭ್ ಹಾಗೂ ವಿದ್ಯಾರ್ಥಿನಿ ನಂದಿನಿ ಪೋಷಕರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post